Connect with us

    DAKSHINA KANNADA

    ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣ: ತಲೆಮರಿಸಿಕೊಂಡಿದ್ದ ಪ್ರಮುಖ ಆರೋಪಿ ಅರೆಸ್ಟ್

    Published

    on

    ಮಂಗಳೂರು: ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನ ಬಂಧನವಾಗಿದೆ. ಆರೋಪಿ ಮಹಮ್ಮದ್ ಮುಸ್ತಾಫಾನನ್ನು ಎನ್‌ಐಎ ಅಧಿಕಾರಿಗಳು ಹಾಸನದ ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ ಬಂಧಿಸಿದ್ದಾರೆ. ಆರೋಪಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೈಚಾರು ಗ್ರಾಮದ ಶಾಂತಿನಗರ ನಿವಾಸಿ.

    nettaru

    2022 ರ ಜುಲೈ 26 ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಹತ್ಯೆ ನಡೆಸಲಾಗಿತ್ತು. ಕೋಳಿ ಅಂಗಡಿ ನಡೆಸುತ್ತಿದ್ದ ಪ್ರವೀಣ್ ನೆಟ್ಟಾರು ಅಂಗಡಿ ಬಂದ್ ಮಾಡುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ್ ನೆಟ್ಟಾರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದರು.

    ಮುಂದೆ ಓದಿ..; ಬಿಜೆಪಿ ನಾಯಕನ ಅಪ್ರಾಪ್ತ ಪುತ್ರನಿಂದ ಮತ ಚಲಾವಣೆ.!! ವಿವಾದಕ್ಕೆ ಕಾರಣವಾದ ವೀಡಿಯೋ

    ಬಾರಿ ಸದ್ದು ಮಾಡಿದ್ದ ಪ್ರವೀಣ್ ನೆಟ್ಟಾರು ಹತ್ಯಾ ಪ್ರಕರಣದಲ್ಲಿ ಪಿಎಫ್‌ಐ ಕೈವಾಡ ಇದೆ ಎಂದು ಆರೋಪಿಸಿ ಅಂದಿನ ಸರ್ಕಾರ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿತ್ತು. ತನಿಖೆ ನಡೆಸಿದ ಎನ್‌ಐಎ ತಂಡ ಕರ್ನಾಟಕ ಹಾಗೂ ಕೇರಳದಲ್ಲಿ ಜಾಲಾಡಿ ಹಲವು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿತ್ತು. ಗೌಪ್ಯ ಸಭೆ ನಡೆಸಿದ ಸಭಾಂಗಾಣ, ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಛೇರಿಗಳಿಗೆ ಭೀಗ ಜಡಿದಿತ್ತು. ಆದ್ರೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಮಾಹಿತಿ ನೀಡಿದವರಿಗೆ ಎನ್‌ಐಎ ಬಹುಮಾನದ ಘೋಷಣೆ ಮಾಡಿತ್ತು. ಇಷ್ಟೇ ಅಲ್ಲದೆ ಆರೋಪಿಗಳ ಆಸ್ತಿಮುಟ್ಟುಗೋಲು ಹಾಕುವ ಬಗ್ಗೆಯೂ ನೋಟಿಸು ಜಾರಿ ಮಾಡಿತ್ತು.

    ಇದೀಗ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಎನ್‌ಐಎ ತಂಡ ಆರೋಪಿಗೆ ಆಶ್ರಯ ನೀಡಿದವನ ಸಹಿತ ಮೂವರನ್ನು ಬಂಧಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಂಧಿತರಲ್ಲಿ ಓರ್ವ ಆರೋಪಿ ಮಹಮ್ಮದ್ ಮುಸ್ತಾಫಾ ಅನ್ನೋದು ಸ್ಪಷ್ಟವಾಗಿದ್ದು ಮತ್ತೋರ್ವ ಯಾರು ಅನ್ನೋದು ಇನ್ನೂ ಮಾಹಿತಿ ಲಭ್ಯವಾಗಬೇಕಾಗಿದೆ. ಇನ್ನು ಆರೋಪಿ ಮುಸ್ತಫಾ ಪೈಚಾರ್ ಪತ್ತೆಗಾಗಿ  5 ಲಕ್ಷ ರೂ ಬಹುಮಾನವನ್ನು ಎನ್.ಐ.ಎ.ವಿಶೇಷ ನ್ಯಾಯಾಲಯ ಘೋಷಣೆ ಮಾಡಿತ್ತು.

    ಆರೋಪಿಗಳ ಪತ್ತೆಗೆ ಬಹುಮಾನ ಘೋಷಿಸಿದ ಎನ್‌ಐಎ:

    ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕೊಡಾಜೆಯ ಕೊಡಾಜೆ ಅದ್ದ ಎಂಬವರ ಮಗ ಮೊಹಮ್ಮದ್ ಷರೀಫ್(53)- 5 ಲಕ್ಷ ಹಾಗೂ ನೆಕ್ಕಿಲಾಡಿಯ ಅಗ್ನಾಡಿ ಹೌಸ್ ನ ಅಬೂಬಕರ್ ಮಗ ಮಸೂದ್ ಕೆ.ಎ (40)-5 ಲಕ್ಷ ಒಟ್ಟು 10 ಲಕ್ಷ ಬಹುಮಾನವನ್ನು ಎನ್‍ಐಎ ಘೋಷಿಸಿದೆ.

    ಆರೋಪಿಗಳು

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಪಡಂಗಡಿ ‌ಗ್ರಾಮದ ನೌಷದ್ (32 ವರ್ಷ), ಕೊಡಗು ಜಿಲ್ಲೆ ಸೋಮವಾರಪೇಟೆಯ ಚೌಡ್ಲಿ ನಿವಾಸಿ ಅಬ್ದುಲ್‌ ನಾಸಿರ್‌ (41 ವರ್ಷ), ಸೋಮವಾರಪೇಟೆಯ ಹನಗಲ್‌ ಕಲಂದಕೂರ್‌ ನಿವಾಸಿ, ಅಬ್ದುಲ್‌ ರಹಿಮಾನ್‌ (36 ವರ್ಷ)ಈ ಮೂವರ ಬಗ್ಗೆ ಸುಳಿವು ನೀಡಿದವರಿಗೆ ತಲಾ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‌ಐಎ ತಿಳಿಸಿದೆ.

    ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಮುಸ್ತಫಾ ಪೈಚಾರ್ ಮತ್ತು ಅಬುಬಕ್ಕರ್ ಸಿದ್ಧೀಕ್ ಅವರು ತಲೆಮರೆಸಿಕೊಂಡಿದ್ದು, ಇವರು ಬೆಳ್ಳಾರೆ ಗ್ರಾಮದವರಾಗಿದ್ದಾರೆ. ಇವರನ್ನು ಹುಡುಕಿಕೊಟ್ಟಲ್ಲಿ ತಲಾ 5 ಲಕ್ಷ ಮತ್ತು 2 ಲಕ್ಷ ರೂ ಬಹುಮಾನವನ್ನು ಎನ್.ಐ.ಎ.ವಿಶೇಷ ನ್ಯಾಯಾಲಯ ಘೋಷಣೆ ಮಾಡಿತ್ತು.

    DAKSHINA KANNADA

    ಮೆಸ್ಕಾಂ: ಹೊಸದಾಗಿ 171 ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ;  ರಾಜ್ಯದಲ್ಲಿ 5130 ಇವಿ ಚಾಜಿ೯೦ಗ್‌ ಕೇ೦ದ್ರಗಳು

    Published

    on

    ಮಂಗಳೂರು: ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳ ಬಳಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಇವಿ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯನ್ನು ದುಪ್ಪಟ್ಟು ಗೊಳಿಸಲು ಇಂಧನ ಇಲಾಖೆ ಮುಂದಾಗಿದೆ. ಇದಕ್ಕೆ ಪೂರಕವಾಗಿ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ( ಮೆಸ್ಕಾಂ) ವ್ಯಾಪ್ತಿಯಲ್ಲಿ ಹೊಸದಾಗಿ 171 ಇವಿ ಚಾರ್ಜಿಂಗ್ ಕೇಂದ್ರಗಳು ಸ್ಥಾಪನೆಯಾಗುತ್ತಿದೆ.

    ಮೆಸ್ಕಾಂ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 17, ಉಡುಪಿ ಜಿಲ್ಲೆಯಲ್ಲಿ 12, ಶಿವಮೊಗ್ಗ ಜಿಲ್ಲೆಯಲ್ಲಿ 17 ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 11 ಸೇರಿದಂತೆ ಪ್ರಸ್ತುತ 57 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೊಸದಾಗಿ 171 ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಟೆಂಡರ್ ಪ್ರಕ್ರಿಯೆ ನಡೆದಿದೆ.

    ರಾಜ್ಯದಲ್ಲಿ ಪ್ರಸ್ತುತ ಒಟ್ಟು 5130 ಇವಿ ಚಾಜಿ೯೦ಗ್‌ ಕೇ೦ದ್ರಗಳಿದ್ದು, ಇವಿ ಚಾಜಿ೯೦ಗ್‌ ಕೇ೦ದ್ರಗಳ ಸ್ಥಾಪನೆಯಲ್ಲಿ ರಾಜ್ಯ ಅಗ್ರ ಸ್ಥಾನದಲ್ಲಿದೆ. ಇ೦ಧನ ಸಚಿವ ಕೆ.ಜೆ.ಜಾಜ್‌೯ ಅವರ ನಿದೇ೯ಶನದಂತೆ, ರಾಜ್ಯವನ್ನು ದೇಶದ ಇ.ವಿ. ಹಬ್‌ ಆಗಿಸಲು ಇ೦ಧನ ಸಚಿವಾಲಯ ಕಾಯ೯ಯೋಜನೆ ರೂಪಿಸಿ, ಅನುಷ್ಠಾನಗೊಳಿಸುತ್ತಿದೆ. ಅದಕ್ಕಾಗಿ, ಬೆ೦ಗಳೂರು ವಿದ್ಯುತ್‌ ಸರಬರಾಜು ಕ೦ಪೆನಿಯನ್ನು ನೋಡಲ್‌ ಎಜೆನ್ಸಿ ಆಗಿ ನೇಮಿಸಿ, ಯೋಜನೆಯ ಅನುಷ್ಠಾನದ ಹೊಣೆ ನೀಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೊಸದಾಗಿ ಕೇ೦ದ್ರಗಳ ಸ್ಥಾಪನೆಗೆ ಸ್ಥಳಗಳನ್ನು ಗುರುತಿಸಲಾಗಿದೆ.

    ರಾಜ್ಯದ 31 ಜಿಲ್ಲೆಗಳಲ್ಲಿ ಸರಕಾರ-ಸಾವ೯ಜನಿಕಸಹಭಾಗಿತ್ವದಲ್ಲಿ (ಪಿಪಿಪಿ) ಹೊಸದಾಗಿ 1190 ಇವಿ ಚಾಜಿ೯೦ಗ್‌ ಕೇ೦ದ್ರಗಳು, 2380 ಇವಿ ಚಾಚ೯ರ್‌ ಗಳನ್ನು ಸ್ಥಾಪಿಸಲಾಗುತ್ತಿದೆ. ಇವುಗಳಿಗೆ ಅವಶ್ಯವಿರುವ ಮೂಲ ಸೌಕಯ೯ಗಳನ್ನು ಇ೦ಧನ ಇಲಾಖೆ ವತಿಯಿ೦ದ ಮಾಡಲಾಗುತ್ತಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ 190 ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.ಇದರಲ್ಲಿ ಪ್ರಸ್ತುತ ದ.ಕನ್ನಡದಲ್ಲಿ 79, ಉಡುಪಿಯಲ್ಲಿ22, ಶಿವಮೊಗ್ಗದಲ್ಲಿ 50 ,ಚಿಕ್ಕಮಗಳೂರು ಜಿಲ್ಲೆಯಲ್ಲಿ 20 ಸೇರಿದಂತೆ ಒಟ್ಟು 171 ಕೇಂದ್ರಗಳನ್ನು ಗುರುತಿಸಲಾಗಿದೆ.

    “4 ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಬೆಂಗಳೂರಿನ ಮೆಡಿಕಲ್ ಸಿಸ್ಟಮ್ ಗೆ ಎಲ್ ಓ ಐ ನೀಡಲಾಗಿರುತ್ತದೆ. ಇದಕ್ಕೆ ಟೆಂಡರ್ ಕರೆಯಲಾಗಿದ್ದು ಉಡುಪಿಯ 20 ಕೇಂದ್ರಗಳನ್ನು ಹೊರತುಪಡಿಸಿ ಟೆಂಡರ್ ಪ್ರಕ್ರಿಯೆ ನಡೆದಿದೆ,” ಎ೦ದು ಮೆಸ್ಕಾ೦ ವ್ಯವಸ್ಥಾಪಕ ನಿದೇ೯ಶಕರಾದ ಡಿ.ಪದ್ಮಾವತಿ ತಿಳಿಸಿದ್ದಾರೆ.

    ಹೆದ್ದಾರಿಗಳಲ್ಲಿ ಚಾಜಿ೯೦ಗ್‌ ಪಾಯಿ೦ಟ್ ಗಳು ಹೆಚ್ಚಳ:

    ಇವಿ ವಾಹನಗಳ ಬಳಕೆದಾರರ ದೂರ ಪ್ರಯಾಣವನ್ನು ಸುಗಮವಾಗಿಸುವ ಮತ್ತು ತಡೆರಹಿತ ಪ್ರಯಾಣವನ್ನು ಕಲ್ಪಿಸಲು ಇ೦ಧನ ಇಲಾಖೆ ಕಾಯೋ೯ನ್ಮುಖವಾಗಿದೆ. ಕನಾ೯ಟಕ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಈಗಾಗಲೇ ಇರುವ ಇವಿ ಚಾಜಿ೯೦ಗ್‌ ಪಾಯಿ೦ಟ್ ಗಳ ಸ೦ಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಮೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿಗಳಲ್ಲಿ 80 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದರಲ್ಲಿ 32 ಮೆಸ್ಕಾಂ ವ್ಯಾಪ್ತಿಯ ಸ್ಥಳದಲ್ಲಿ ಹಾಗೂ 48 ಸರಕಾರಿ ಸ್ವಾಮ್ಯದ ಅವರಣಗಳಲ್ಲಿ ಸ್ಥಾಪನೆಯಾಗುತ್ತಿದೆ.

    ಇವಿ ಮಿತ್ರ ಆ್ಯಪ್‌ ಬಳಕೆ ಹೇಗೆ?

    ಇವಿ ಬಳಕೆದಾರರಿಗೆ ಸುಗಮ ಚಾಜಿ೯೦ಗ್‌ ಸೌಲಭ್ಯದ ನಿಟ್ಟಿನಲ್ಲಿ ಬೆಸ್ಕಾ೦ನಲ್ಲಿ ಇವಿ ಮಿತ್ರ ಆ್ಯಪ್‌ ವ್ಯವಸ್ಥೆ ರೂಪಿಸಲಾಗಿದೆ.ಆ್ಯಪ್‌ ಒಪನ್‌ ಮಾಡಿದ ಕೂಡಲೇ ಸಮೀಪದ ಇವಿ ಚಾರ್ಜಿಂಗ್ ಸ್ಟೇಷನ್‌ ಜಿಪಿಎಸ್‌ ಮಾಹಿತಿ ನೀಡುತ್ತದೆ. ಐಕಾನ್‌ ಮೇಲೆ ಕ್ಲಿಕ್‌ ಮಾಡಿದಾಗ, ಆ ಸ್ಟೇಷನ್‌ನಲ್ಲಿ ಲಭ್ಯವಿರುವ ಚಾರ್ಜಿಂಗ್‌ ಪಾಯಿಂಟ್‌ ವಿವರ ತೋರಿಸುತ್ತದೆ. ಆ್ಯಪ್‌ನಲ್ಲಿರುವ ವ್ಯಾಲೆಟ್‌ಗೆ ಹಣ ಭರ್ತಿ ಮಾಡಿದ ನಂತರ ಚಾರ್ಜಿಂಗ್‌ ಪಾಯಿಂಟ್ ಬಳಿ ಇರುವ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ, ಹಣ ಪಾವತಿಸಿ. ಅಲ್ಲಿರುವ ಸಿಬ್ಬಂದಿ ಇವಿ ವಾಹನವನ್ನು ಚಾರ್ಜ್‌ ಮಾಡಲು ಸಹಕರಿಸುವರು. ವ್ಯವಸ್ಥೆಯನ್ನು ರಾಜ್ಯಮಟ್ಟಕ್ಕೆ ವಿಸ್ತರಿಸುವ ನಿಟ್ಟಿನಲ್ಲಿ ಒ೦ದು ರಾಜ್ಯ- ಒ೦ದು ಆ್ಯಪ್‌ ವ್ಯವಸ್ಥೆ ರೂಪಿಸಲು ಚಿ೦ತನೆ ನಡೆಸಲಾಗುತ್ತಿದೆ.

    “ಎಲೆಕ್ಟ್ರಿಕ್‌ ವಾಹನಗಳಿಗೆ ಅತ್ಯಂತ ಹೆಚ್ಚು ಸಾರ್ವಜನಿಕ ಚಾರ್ಜಿಂಗ್‌ ಕೇಂದ್ರಗಳನ್ನು ಕಲ್ಪಿಸಿದ ರಾಜ್ಯಗಳಲ್ಲಿ ದೇಶದಲ್ಲೇ ಕರ್ನಾಟಕ ನಂಬರ್‌ ಒನ್‌ ಸ್ಥಾನದಲ್ಲಿದೆ. ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ವಾಹನಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತದೆ”.

    -ಕೆ.ಜೆ ಜಾರ್ಜ್, ಇಂಧನ ಸಚಿವ

    Continue Reading

    DAKSHINA KANNADA

    ರಾಜ್ಯದಲ್ಲಿ ತಾಲಿಬಾನ್ ಸರಕಾರವಿದೆಯೇ; ವಿಪಕ್ಷ ನಾಯಕ ಆರ್‌. ಅಶೋಕ್‌

    Published

    on

    ಮಂಗಳೂರು: ಮಂಗಳೂರಿನ ಹೊರ ವಲಯ ಬೋಳ್ಯಾರ್‌ನಲ್ಲಿ ಚೂರಿ ಇರಿತ ಪ್ರಕರಣಕ್ಕೆ ಒಳಗಾದ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ವಿರೋಧ ಪಕ್ಷದ ನಾಯಕ ಆರ್ ಅಶೊಕ್ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

    ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕಾಂಗ್ರೆಸ್  ಕೋಮು ಸೌಹಾರ್ದತೆ ಹಾಳು ಮಾಡುವ ಮೂಲಕ ತಾಲಿಬಾನಿ ರೀತಿಯಲ್ಲಿ ಸರ್ಕಾರ ನಡೆಸುತ್ತಿದೆ. ನಮ್ಮ ಕಾರ್ಯಕರ್ತರು ಭಾರತ್ ಮಾತಾ ಕೀ ಜೈ ಘೋಷಣೆ ಮಾತ್ರ ಕೂಗಿದ್ದಾರೆ. ಕೇವಲ ಇದಕ್ಕೋಸ್ಕರ ಮಸೀದಿಯಲ್ಲಿದ್ದವರು ಬಿಜೆಪಿ ಕಾರ್ಯಕರ್ತರನ್ನು  ಅಟ್ಟಾಡಿಸಿ ಡ್ರ್ಯಾಗನ್ ನಿಂದ ಹೊಟ್ಟೆಗೆ ಚುಚ್ಚಿದ್ದಾರೆ. ಇದು ಪೂರ್ವ ನಿಯೋಜಿತ ಕೊಲೆ ಕೃತ್ಯವಾಗಿದೆ. ಇಲ್ಲದಿದ್ದಲ್ಲಿ ಅವರಿಗೆ ಮಾರಕಾಸ್ತ್ರ ಸಿಕ್ಕಿದ್ದು ಹೇಗೆ ಎಂದು ಪ್ರಶ್ನಿಸಿದರು.

    ಇಬ್ಬರಿಗೆ ಚೂರಿ ಇರಿಯಲಾಗಿದ್ದು, ಒಬ್ಬರು ಇನ್ನೂ ಚಿಂತಾಜನಕ ಸ್ಥಿತಿಯಲ್ಲಿ ಇದ್ದಾರೆ. ಇನ್ನು ನಮಗೆ ಸಹಿಸಲು ಆಗಲ್ಲ. ಇನ್ನು ನಾವು ತಾಲೀಬಾನ್ ಸರಕಾರವನ್ನು ಬಗ್ಗು ಬಡಿಯಲಿದ್ದೇವೆ. ಮುಂದೆ ಇನ್ನು ಕರ್ನಾಟಕ ಬಿಜೆಪಿ ಸೇರಿ ಈ ವಿಚಾರವನ್ನು ಸ್ಪೀಕರ್ ಮುಂದೆ ವಿಧಾನಸಭೆಯಲ್ಲಿ ಕೂಡಾ ಧ್ವನಿ ಎತ್ತಲಿದ್ದೇವೆ. ಇದನ್ನು ಪ್ರಶ್ನೆ ಮಾಡೇ ಮಾಡ್ತೇವೆ. ಇದು ಸ್ಪೀಕರ್‌ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.  ಸ್ಪೀಕರ್ ಅವರು ತಮ್ಮ ಕ್ಷೇತ್ರದಲ್ಲೇ ಹಲ್ಲೆಗೆ ಒಳಗಾದ ಪರವಾಗಿ ನಿಲ್ಲಬೇಕು ಅದು ಮನುಷ್ಯತ್ವ. ಆದರೆ ಸ್ಪೀಕರ್ ಅವರು ಆಸ್ಪತ್ರೆಯಲ್ಲೇ ಇದ್ದರೂ ಬಂದು ಗಾಯಾಳುಗಳನ್ನು ನೋಡಿಲ್ಲ ಎಂದರು.

    ಹಿಂದು ಕಾರ್ಯಕರ್ತರು ಯಾರೂ ಕೂಡಾ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿಲ್ಲ. ನಾನು ಅಲ್ಲಿ ನಡೆದಿರುವ ವಿಡಿಯೋವನ್ನು ಕೂಡಾ ನೋಡಿದ್ದೇನೆ. ಆದರೆ ಪ್ರಕರಣ ತಿರುಚಿ ಹಿಂದು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದರು. ಹಿಂದು ಕಾರ್ಯಕರ್ತರ ಮೇಲೆ ಹಾಕಿದ ಕೇಸ್ ವಾಪಾಸು ತೆಗೆದುಕೊಳ್ಳಬೇಕು, ಗಾಯಾಳುಗಳ ಆಸ್ಪತ್ರೆ ವೆಚ್ಚ ಭರಿಸಬೇಕು, ಗಾಯಾಳುಗಳಿಗೆ ಪರಿಹಾರವನ್ನು ನೀಡಬೇಕು. ಈ ಪ್ರಕರಣದ ಪೂರ್ಣ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸುವುದಾಗಿ ನುಡಿದರು.

    Continue Reading

    DAKSHINA KANNADA

    ವಿಧಾನ‌ಪರಿಷತ್ ಸದಸ್ಯ ಐವನ್ ಡಿಸೋಜಾರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

    Published

    on

    ಮಂಗಳೂರು : ಎರಡನೇ ಅವಧಿಗೆ ವಿಧಾನ‌ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಐವನ್ ಡಿ’ಸೋಜಾರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ಗೌರವಿಸಿದರು.


    ವಿಧಾನ ಪರಿಷತ್ ಸದಸ್ಯರಾಗಿ ನಿಮ್ಮ ಸೇವಾ ಅವಧಿಯಲ್ಲಿ ಸಮಾಜಕ್ಕೆ ಉತ್ತಮ ಕೆಲಸ ಕಾರ್ಯಗಳು ನಡೆಯಲಿ ಎಂದು ಐಕಳ ಹರೀಶ್ ಶೆಟ್ಟಿ ಶುಭ ಹಾರೈಸಿದರು.

    ಈ ವೇಳೆ ಮಾತನಾಡಿದ ಐವನ್ ಡಿ’ಸೋಜಾ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಬಡವರ ಕಷ್ಟಗಳನ್ನು ನಿವಾರಿಸುವ ಕೆಲಸದಲ್ಲಿ ತೊಡಗಿದೆ. ವಿಧಾನ ಪರಿಷತ್ ಸದಸ್ಯನಾಗಿ ತಾನು ಬಂಟರ ಯಾವುದೇ ಕೆಲಸ ಕಾರ್ಯ ಇದ್ದರೂ ಸ್ಪಂದಿಸಿ ಕೆಲಸ ಮಾಡುವುದಾಗಿ ತಿಳಿಸಿದರು.

    ಇದನ್ನೂ ಓದಿ : ಎಚ್ಚರ ಎಚ್ಚರ! ವಂಚನಾ ಜಾಲದ ತಂಡದಿಂದ ಹಲವರಿಗೆ ಕರೆ; ವಿದ್ಯಾರ್ಥಿಗಳ ಪೋಷಕರೇ ಇವರ ಟಾರ್ಗೆಟ್!

    ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ನಿಯೋಗದಲ್ಲಿ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ‌ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ, ಕೊಲ್ಲಾಡಿ ಬಾಲಕೃಷ್ಣ ರೈ, ಹೇಮಂತ್ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.

    Continue Reading

    LATEST NEWS

    Trending