Connect with us

LATEST NEWS

ಕರಿಂಬಿಲದಲ್ಲಿ ಶ್ರೀ ದುರ್ಗಾಪರಮೇಶ್ವರಿ ಪುನಃ ಪ್ರತಿಷ್ಠಾ ಮಹೋತ್ಸವ

Published

on

ಕಾಸರಗೋಡು: ಕಾಸರಗೋಡು ಜಿಲ್ಲೆಯ ಪೆರಡಾಲ ಕರಿಂಬಿಲದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಮೇಷ ಲಗ್ನ ಸುಮುಹೂರ್ತದಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪುನಃ ಪ್ರತಿಷ್ಠೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.

ಮಂಗಳವಾರ ಸಂಜೆ ಆಚಾರ್ಯ ವರಣ, ಪ್ರಾರ್ಥನೆ, ವಾಸ್ತು ಪೂಜೆ, ವಾಸ್ತುಬಲಿ, ರಾಕ್ಷೋಘ್ನ ಹೋಮ, ಪ್ರಸಾದ ಶುದ್ಧಿ ನಡೆಯಿತು. ಬುಧವಾರದಂದು ಮುಂಜಾನೆ ಗಣಪತಿ ಹವನ, ಬದಿಯಡ್ಕ ಶಬರಿಗಿರಿ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ, ಗೃಹ ಪ್ರವೇಶ ನಡೆಯಿತು.


ಬೆಳಿಗ್ಗೆ 9.50ರಿಂದ 10.50ರ ಮಧ್ಯೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪುನಃ ಪ್ರತಿಷ್ಠಾ ಮಹೋತ್ಸವ ನಡೆಯಿತು. ಬಳಿಕ ಮತ್ತೆ ಭಜನಾ ಕಾರ್ಯಕ್ರಮ ನಡೆದು, ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ಗುಳಿಗನ ಕೋಲ ನಡೆಯಿತು. ಊರ, ಪರವೂರ ಭಕ್ತರು ಆಗಮಿಸಿ ಶ್ರೀ ದೇವರ ಗಂಧಮುಡಿ ಪ್ರಸಾದ ಸ್ವೀಕರಿಸಿದರು. ಕರಿಂಬಿಲ ಶ್ರೀ ದುರ್ಗಾಪರಮೇಶ್ವರಿ ಸಮಿತಿ ಅಧ್ಯಕ್ಷ ಕೆ ನಾರಾಯಣ ಕರಿಂಬಿಲ, ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕ್ಷೇತ್ರದ ಹಿರಿಯ ಕೆ ನಾರಾಯಣ ಕರಿಂಬಿಲರಿಗೆ ಸನ್ಮಾನ:

ಕರಿಂಬಿಲ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವದ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯ ಅಗಸರ ಯಾನೆ ಮಡಿವಾಳರ ಸಂಘದ ವತಿಯಿಂದ ಹಿರಿಯರಾದ ಕೆ. ನಾರಾಯಣ ಕರಿಂಬಿಲ ಇವರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು.


ಸಂಘದ ಅಧ್ಯಕ್ಷ ಬಾಬು ನೀರ್ಚಾಲು ಅವರು ಮಾತನಾಡಿ, ಪ್ರತೀ ವರ್ಷ ನಾವು ಪ್ರತೀ ಗ್ರಾಮ ಪಂಚಾಯತ್‌ನಲ್ಲಿ ಸಮುದಾಯದ ಹಿರಿಯರೊಬ್ಬರನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸ ಮಾಡುತ್ತಿದ್ದು, ಇದು 10ನೇ ವರ್ಷದ ಸನ್ಮಾನವಾಗಿದೆ. ಪುನಃ ಪ್ರತಿಷ್ಠಾ ಮಹೋತ್ಸವದ ಈ ಪುಣ್ಯ ಸಂದರ್ಭದಲ್ಲಿ ಕೆ ನಾರಾಯಣ ಕರಿಂಬಿಲ ಅವರನ್ನು ಸನ್ಮಾನಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ನುಡಿದರು.


ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಸದಾಶಿವ ಪ್ರತಾಪನಗರ, ಜೊತೆ ಕಾರ್ಯದರ್ಶಿ ರಾಮ ಮುರಿಯಂಕೂಡ್ಲು, ಜಿಲ್ಲಾ ಸಮಿತಿ ಸದಸ್ಯರಾದ ಶಿವರಾಮ ಮೆಣಸಿನಪಾರೆ, ನಾರಾಯಣ ಬಂಗೇರ ನೀರ್ಚಾಲು, ಕರಿಂಬಿಲ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿ ಪ್ರಮುಖರಾದ ನೇಮಿರಾಜ ಕರಿಂಬಿಲ, ಪುಷ್ಪರಾಜ್, ರಾಧಕೃಷ್ಣ ಕರಿಂಬಿಲಪರಮೇಶ್ವರ ಪೈವಳಿಕೆ, ನವೀನ್‌ ಪೈವಳಿಕೆ, ಪ್ರವೀಣ್‌ ಪೈವಳಿಕೆ, ವಿನೋದ್ ರಾಜ್‌ ಕರಿಂಬಿಲ, ಜೀವನ್ ರಾಜ್‌, ಗಣರಾಜ್‌ ಕರಿಂಬಿಲ ಮೊದಲಾದವರಿದ್ದರು.

DAKSHINA KANNADA

ಮಂಗಳೂರು : ಮೇ 25 ರಂದು ಉಚಿತ ವೈದ್ಯಕೀಯ ಮತ್ತು ರಕ್ತದಾನ ಶಿಬಿರ

Published

on

ಮಂಗಳೂರು : ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.), ಮಂಗಳೂರು ಮತ್ತು ನಾರಾಯಣ ಗುರು ಕಾಲೇಜು ಇದರ ಆಶ್ರಯದಲ್ಲಿ ಕೆ.ಎಮ್.ಸಿ. ಆಸ್ಪತ್ರೆ ಅತ್ತಾವರ ಮಂಗಳೂರು ಇದರ ಸಹಕಾರದಿಂದ ಹಿಂದುಳಿದ ಸಮಾಜದ ಸಾಮಾಜಿಕ ಕ್ರಾಂತಿಯ ಹರಿಕಾರ ದಿ.ದಾಮೋದರ ಆರ್.ಸುವರ್ಣ ಜನ್ಮಶತಾಬ್ದಿ ಪ್ರಯುಕ್ತ ಮೇ 25 ರಂದು ಕುದ್ರೋಳಿ ನಾರಾಯಣ ಗುರು ಕಾಲೇಜಿನ ದಾಮೋದರ ಆರ್.ಸಭಾಂಗಣದಲ್ಲಿ ಉಚಿತ ವೈದ್ಯಕೀಯ ಮತ್ತು ರಕ್ತದಾನ ಶಿಬಿರ ನಡೆಯಲಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಘಂಟೆ ತನಕ ಈ ಕಾರ್ಯಕ್ರಮ ನಡೆಯಲಿದೆ.


ವೈದ್ಯಕೀಯ ಶಿಬಿರದಲ್ಲಿ ಕಣ್ಣು, ಕಿವಿ, ಮೂಗು, ಗಂಟಲು, ಎಲುಬು, ಕೀಲು ಮತ್ತು ಸಾಮಾನ್ಯ ರೋಗ ತಪಾಸಣೆ, ಮಧುಮೇಹ, ರಕ್ತದೊತ್ತಡ ಪರೀಕ್ಷೆ, ರೀಡಿಂಗ್ ಕನ್ನಡಕ ಅಗತ್ಯ ಇದ್ದವರಿಗೆ ಉಚಿತವಾಗಿ ನೀಡಲಾಗುವುದು. ಶಿಬಿರದಲ್ಲಿ ಭಾಗವಹಿಸುವವರಿಗೆ ಕೆ.ಎಮ್.ಸಿ.ಯ ಹಸಿರು ಕಾರ್ಡ್ ನೀಡಲಾಗುವುದು.

ಇದನ್ನೂ ಓದಿ : ಟಿ 20 ವಿಶ್ವಕಪ್ ಗೆ ಲಗ್ಗೆಯಿಟ್ಟ ‘ನಂದಿನಿ’; ಕ್ರಿಕೆಟಿಗರ ಜೆರ್ಸಿಯಲ್ಲಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌

ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆಯಬೇಕು. ಅದೇ ರೀತಿ ರಕ್ತದಾನದಲ್ಲೂ ಸ್ವಯಂ ಸ್ಪೂರ್ತಿಯಿಂದ ಭಾಗವಹಿಸಬೇಕೆಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Continue Reading

LATEST NEWS

ಒಂದೇ ಒಂದು ಸೊಳ್ಳೆಗಳಿಲ್ಲದ ವಿಚಿತ್ರ ದೇಶವಿದು..!

Published

on

ಐಸ್‌ಲ್ಯಾಂಡ್: ಬಿಸಿಲು, ಮಳೆ ಎರಡೂ ಕಾಣಿಸಿಕೊಂಡಾಗ ಸೊಳ್ಳೆಗಳ ಕಾಟವೂ ಹೆಚ್ಚಾಗುತ್ತದೆ. ಸೊಳ್ಳೆ ಕಚ್ಚುವುದರಿಂದ ಮಲೇರಿಯಾ, ಡೆಂಗ್ಯೂನಂತಹ ಮಾರಣಾಂತಿಕ ಕಾಯಿಲೆಗಳು ಬರಬಹುದು. ಸೊಳ್ಳೆಗಳಿಂದ ಹರಡುವ ರೋಗದಿಂದ ಪ್ರತಿವರ್ಷ ಲಕ್ಷಾಂತರ ಮಂದಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಪ್ರಪಂಚದಾದ್ಯಂತ ಒಟ್ಟು 3 ಸಾವಿರ ಜಾತಿಯ ಸೊಳ್ಳೆಗಳಿವೆ. ಆದರೆ ಒಂದೇ ಒಂದು ಸೊಳ್ಳೆಗಳೂ ಇಲ್ಲದ ವಿಶಿಷ್ಟ ದೇಶವೊಂದಿದೆ. ಹೌದು ಅದುವೇ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿರುವ ಐಸ್‌ಲ್ಯಾಂಡ್ ದೇಶ. ಇದು ಹಾವು ಮುಕ್ತ ಮಾತ್ರವಲ್ಲ, ಸೊಳ್ಳೆ ಮುಕ್ತ ದೇಶವೂ ಆಗಿದೆ.

ಐಸ್‌ಲ್ಯಾಂಡ್ ವಿಪರೀತ ಚಳಿ ಇರುವ ಪ್ರದೇಶವಾಗಿದೆ. ಅಲ್ಲಿನ ಶೀತ ವಾತಾವರಣದಲ್ಲಿ ಸೊಳ್ಳೆಗಳು ಬದುಕಲು ಸಾಧ್ಯವಿಲ್ಲ. ಐಸ್‌ಲ್ಯಾಂಡ್ ಹವಾಮಾನವು ಬಹಳ ವೇಗವಾಗಿ ಬದಲಾಗುತ್ತದೆ. ಹವಾಮಾನದಲ್ಲಿನ ತ್ವರಿತ ಬದಲಾವಣೆಯ ಕಾರಣ ಸೊಳ್ಳೆಗಳು ತಮ್ಮ ಜೀವನಚಕ್ರ ಸಾಗಿಸಲು ಸಾಧ್ಯವಿಲ್ಲ.

ಐಸ್‌ಲ್ಯಾಂಡ್ ತಾಪಮಾನ ಇಳಿಕೆ ಆರಂಭವಾದಾಗ ನೀರು ಮಂಜುಗಡ್ಡೆ ರೂಪ ತಾಳುತ್ತದೆ. ನೀರು ಸಂಪೂರ್ಣವಾಗಿ ಹೆಪ್ಪುಗಟ್ಟುವ ಕಾರಣ ಪ್ಯೂಪಾ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಐಸ್‌ಲ್ಯಾಂಡ್‌ನಲ್ಲಿ ತಾಪಮಾನವು ಮೈನಸ್ 38 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಅಂತಹ ಕಡಿಮೆ ತಾಪಮಾನದಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುವುದು ಅಸಾಧ್ಯ.

ಐಸ್‌ಲ್ಯಾಂಡ್‌ನಲ್ಲಿ ಸೊಳ್ಳೆಗಳಿಗೆ ಸಂಬಂಧಿಸಿದ ಒಂದು ಸಿದ್ಧಾಂತವೆಂದರೆ ಈ ದೇಶದ ನೀರು, ಮಣ್ಣು ಮತ್ತು ಸಾಮಾನ್ಯ ಪರಿಸರ ವ್ಯವಸ್ಥೆಯು ರಾಸಾಯನಿಕ ಸಂಯೋಜನೆಯ ಸೊಳ್ಳೆ ಜೀವನವನ್ನು ಬೆಂಬಲಿಸುವುದಿಲ್ಲ. ಆದರೆ ಐಸ್‌ಲ್ಯಾಂಡ್‌ನ ನೆರೆಯ ದೇಶಗಳಾದ ನಾರ್ವೆ, ಡೆನ್ಮಾರ್ಕ್‌, ಸ್ಕಾಟ್ಲೆಂಡ್ ದೇಶಗಳಲ್ಲಿ ಸೊಳ್ಳೆಗಳಿವೆ.

Continue Reading

LATEST NEWS

ಟಿ 20 ವಿಶ್ವಕಪ್ ಗೆ ಲಗ್ಗೆಯಿಟ್ಟ ‘ನಂದಿನಿ’; ಕ್ರಿಕೆಟಿಗರ ಜೆರ್ಸಿಯಲ್ಲಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌

Published

on

ಮಂಗಳೂರು : ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌ ಆದ ನಂದಿನಿ ಜಾಗತಿಕ ಬ್ರಾಂಡ್ ಆಗಿ ಲಗ್ಗೆ ಇಟ್ಟಿದೆ. ವಿಶ್ವಕಪ್ ಟಿ-ಟ್ವೆಂಟಿ ಪಂದ್ಯಕೂಟದಲ್ಲಿ ನಂದಿನಿ ಹೆಸರು ರಾರಾಜಿಸಲಿದೆ. ಹೌದು, ನಂದಿನಿ ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ. ರಾಜ್ಯದ ಕೃಷಿಕರ ಶ್ರಮವನ್ನು ಹಾಗೂ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ವಿಶ್ವಕ್ಕೆ ಸಾರುವ ಯತ್ನದಲ್ಲಿದೆ.


ಐಸಿಸಿ ಪುರುಷರ ಟಿ೨೦ ವಿಶ್ವಕಪ್ ಟೂರ್ನಿಯಲ್ಲಿ ನಂದಿನಿ :

ಜೂನ್ ೧ ರಿಂದ ಆರಂಭವಾಗಲಿರುವ ಐಸಿಸಿ ಪುರುಷರ ಟಿ೨೦ ವಿಶ್ವಕಪ್ ಟೂರ್ನಿ ಅಮೆರಿಕದಲ್ಲಿ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟಿಗರ ಜರ್ಸಿಯಲ್ಲಿ ಭಾರತೀಯ ಭಾಷೆಯೊಂದು ಪ್ರದರ್ಶಿಸಲಾಗುತ್ತಿದೆ. ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್‌ನ ಆಟಗಾರರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಕೆಎಂಎಫ್‌ನ ನಂದಿನಿಯ ಲಾಂಛನವಿರುವ ಜೆರ್ಸಿಯನ್ನು ಧರಿಸಿ ಕಣಕ್ಕಿಳಿಯಲಿದ್ದಾರೆ.


ಸಿಎಂ ಟ್ವೀಟ್ :

ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮಲೇಷಿಯಾ, ವಿಯೆಟ್ನಾಂ, ಸಿಂಗಾಪುರ, ಅಮೇರಿಕಾ, ದುಬೈ, ಯುಎಇ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಈಗ ಟಿ೨೦ ವಿಶ್ವಕಪ್ ಪಂದ್ಯಕೂಟದಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ.

ಇದನ್ನೂ ಓದಿ : ಅಂಜಲಿ ಹಂ*ತಕನ ಬಂಧನ; ರೈಲಿನಲ್ಲಿ ಪ್ರಯಾಣಿಸುತ್ತಿದ್ದವನ ಪೊಲೀಸರು ಬಂಧಿಸಿದ್ದು ಹೇಗೆ?!

ರಾಜ್ಯದ ಜನರ ಮನೆ-ಮನ ಗೆದ್ದಿರುವ ನಂದಿನಿ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಂದಿನಿ ಉತ್ಪನ್ನಗಳು ಕ್ರಿಕೆಟ್ ಆಟಗಾರರ ಹಾಗೂ ಕ್ರಿಕೆಟ್ ಪ್ರೇಮಿಗಳ ಮನ ಗೆಲ್ಲುವುದಂತು ನಿಜ ಸಂಗತಿ ಎಂದು ಬರೆದುಕೊಂಡಿದ್ದಾರೆ.

Continue Reading

LATEST NEWS

Trending