Connect with us

    DAKSHINA KANNADA

    ಪುತ್ತೂರಿನ ಬಿಜೆಪಿ ಕಾರ್ಯಕರ್ತನ ಮಹಿಳೆಯ ಜೊತೆಯಿರುವ ಖಾಸಗಿ ಫೋಟೋ ವೈರಲ್‌..!

    Published

    on

    ಪುತ್ತೂರು: ಪುತ್ತೂರಿನ ಮಾಜಿ ಶಾಸಕರೊಬ್ಬರ ಖಾಸಗಿ ಚಿತ್ರಗಳು ವೈರಲ್ ಆದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತನೊಬ್ಬ ಮಹಿಳೆಯೊಂದಿಗೆ ಇರುವ ಖಾಸಗಿ ಚಿತ್ರಗಳು ಇದೀಗ ವೈರಲ್‌ ಆಗಿದೆ.

    ಬಿಜೆಪಿ ಕಾರ್ಯಕರ್ತ ನವೀನ್ ರೈ ಕೈಕಾರ ಮಹಿಳೆಯೊಂದಿಗಿರುವ ಫೋಟೋ ವೈರಲ್ ಆಗಿದೆ. ಇವರು ಮಾಜಿ ಶಾಸಕ ಸಂಜೀವ ಮಠಂದೂರು ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

    ನವೀನ್ ರೈ ಕೈಕಾರ ತಮ್ಮ ಫೋಟೋ ವೈರಲ್‌ ಆದ ಬೆನ್ನಲ್ಲೇ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ತನ್ನ ಫೋಟೋವನ್ನು ಬೇರೆ ಯುವತಿಯೊಬ್ಬಳ ಜತೆ ಇರುವಂತೆ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ ಎಂದು ಅವರು ದೂರಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಮಾನಹಾನಿ ಮಾಡಿರುವುದಾಗಿ ಆರೋಪಿಸಲಾಗಿದೆ.

    ಒಳಮೊಗ್ರು ಗ್ರಾಮದ ಕೈಕಾರ ಸಮೀಪದ ಪನಡ್ಕ ನಿವಾಸಿ ನವೀನ್ ರೈ ದೂರಿದ್ದಾರೆ.

    ಫೋಟೋವನ್ನು ದಿನೇಶ್ ಪುತ್ತೂರು ಎಂಬವರು ಪುತ್ತಿಲ ಪರಿವಾರ -1 ಎಂಬ ವಾಟ್ಸಾಪ್ ಗ್ರೂಪಿನಲ್ಲಿ ವೈರಲ್ ಮಾಡಿರುವುದಾಗಿ ದೂರಿದ್ದು, ಮಾನಹಾನಿ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ.

    DAKSHINA KANNADA

    ಹಾಲು ಉಕ್ಕಿ ಚೆಲ್ಲದಂತೆ ತಡೆಯುವುದೇಗೆ? ಈ ಟಿಪ್ಸ್ ಪಾಲಿಸಿ

    Published

    on

    ಮಂಗಳೂರು: ಹೆಚ್ಚಿನ ಮಹಿಳೆಯರು ಮನೆಯ ಅಡುಗೆ ಕೋಣೆಯಲ್ಲೇ ತಮ್ಮ ಸಮಯವನ್ನು ಕಳೆಯುತ್ತಾರೆ. ಆದ್ದರಿಂದ ಮಹಿಳೆಯರಿಗೆ ಅಡುಗೆ ಮನೆಯೇ ಪ್ರಪಂಚ. ಆದರೆ ಅಲ್ಲಿ ಮಾಡುವ ಸಣ್ಣ ಪುಟ್ಟ ತಪ್ಪುಗಳ ಕೆಲಸಗಳ ಮೇಲೆ ಇನ್ನೊಂದು ಕೆಲಸವನ್ನು ಕೊಡುತ್ತದೆ.

    ಕೆಲವೊಮ್ಮೆ ಗ್ಯಾಸ್ ಮೇಲೆ ಹಾಲು ಇಟ್ಟು ಇನ್ನೊಂದು ಕೆಲಸದಲ್ಲಿ ತೊಡಗಿರುತ್ತಾರೆ. ಹಾಲು ಉಕ್ಕಿ ಗ್ಯಾಸ್ ಸುತ್ತ ಬಿದ್ದರೂ ಅವರಿಗೆ ಅದರ ಜ್ಞಾನವೇ ಇರುವುದಿಲ್ಲ. ಕೆಲವೊಮ್ಮೆ ಹಾಲಿನ ಪಾತ್ರೆಯ ಮುಂದೆ ನಿಂತುಕೊಂಡಿದ್ದರೆ ಹಾಲು ಉಕ್ಕಿ ಮೇಲೆ ಬರುವುದೇ ಇಲ್ಲ. ಒಂದೆರಡು ನಿಮಿಷ ಗಮನವನ್ನು ಬೇರೆಡೆ ಹರಿಸಿಬಿಟ್ಟರೆ ಸ್ಟವ್ ಮೇಲೆಲ್ಲಾ ಹಾಲು ಚೆಲ್ಲಿರುತ್ತದೆ. ಈ ಗ್ಯಾಸ್‌ ಅನ್ನು ಶುಚಿ ಮಾಡುವುದು ಅಷ್ಟು ಸುಲಭವಲ್ಲ. ಹೀಗಾಗಿ ಹಾಲು ಕುದಿಸುವಾಗ ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಿದರೆ ಉತ್ತಮ.

    •  ಹಾಲು ಕಾಯಿಸಲು ಬಳಸುವ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ, ಆ ಬಳಿಕ ಹಾಲನ್ನು ಹಾಕಿ ಬಿಸಿ ಮಾಡಿದರೆ ಹಾಲು ಉಕ್ಕಿ ಬರುವುದಿಲ್ಲ. ಅದಲ್ಲದೇ, ಹಾಲು ಕುದಿಸುವ ಪಾತ್ರೆಯು ಸ್ವಲ್ಪ ದೊಡ್ಡದಾಗಿರಲಿ.
    • ಹಾಲು ಕುದಿಸುವ ಪಾತ್ರೆಯ ಸುತ್ತಲೂ ಬೆಣ್ಣೆಯನ್ನು ಹಚ್ಚಿ, ಹಾಲು ಕುದಿಸಿದರೆ ಉಕ್ಕಿ ಹೊರಗೆ ಚೆಲ್ಲುವುದಿಲ್ಲ.
    • ಸಾಮಾನ್ಯವಾಗಿ ಹಾಲು ಉಕ್ಕಿ ಬರುವಾಗ ಹಾಲಿನ ಮೇಲೆ ನೊರೆ ಬರುತ್ತದೆ. ಈ ವೇಳೆಯಲ್ಲಿ ಸ್ವಲ್ಪ ನೀರನ್ನು ಚಿಮುಕಿಸಿದರೆ ಹಾಲು ಉಕ್ಕುವುದು ನಿಲ್ಲುತ್ತದೆ.
    • ಹಾಲು ಕುದಿಸುವಾಗ ಪಾತ್ರೆಯ ಮಧ್ಯದಲ್ಲಿ ಒಂದು ಮರದ ಚಮಚವನ್ನು ಇರಿಸಿದರೆ ಹಾಲು ಉಕ್ಕಿ ಬರುವುದಿಲ್ಲ.
    • ಹಾಲು ಉಕ್ಕುತ್ತಿದೆ ಎಂದ ತಕ್ಷಣವೇ ಪಾತ್ರೆಯನ್ನು ಮೇಲೆತ್ತಿ ಅಲುಗಾಡಿಸಿ ನಂತರ ಕುದಿಯಲು ಇಟ್ಟರೆ ಹಾಲು ಉಕ್ಕುವುದನ್ನು ತಕ್ಷಣವೇ ನಿಲ್ಲಿಸಬಹುದು.
    Continue Reading

    BELTHANGADY

    ಬೆಳ್ತಂಗಡಿ : ಕೆರೆಗೆ ಬಿದ್ದು ನವವಿವಾಹಿತ ಸಾ*ವು

    Published

    on

    ಬೆಳ್ತಂಗಡಿ : ಕಳೆದ ಆರು ತಿಂಗಳ ಹಿಂದೆ ಮದುವೆಯಾಗಿದ್ದ ನವ ವಿವಾಹಿತ ಮನೆಯ ಕೆರೆಗೆ ಜಾರಿ ಬಿದ್ದು ಸಾ*ವನ್ನಪ್ಪಿದ ಘಟನೆ ಶನಿವಾರ ರಾತ್ರಿ ಬೆಳ್ತಂಗಡಿಯ ನಂದಿಬೆಟ್ಟದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನಂದಿಬೆಟ್ಟದ ಹೊಸಹೊಕ್ಕು ನಿವಾಸಿ 38 ವರ್ಷದ ಶೈಲೇಶ್ ಶೆಟ್ಟಿ ಮೃ*ತಪಟ್ಟವರು.

    ಅವರು ಶನಿವಾರ ರಾತ್ರಿ 8:30 ಕ್ಕೆ ತನ್ನ ಮನೆಯ ಕೆರೆಗೆ ಜಾರಿ ಬಿದ್ದು ಕೆಸರಿನಲ್ಲಿ ಮುಳುಗಿ ಸಾ*ವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಶೈಲೇಶ್ ಶ*ವವನ್ನು ಮೇಲಕ್ಕೆತ್ತಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

    ಇದನ್ನೂ ಓದಿ : ಗೂಗಲ್ ಮ್ಯಾಪ್ ನಂಬಿ ಸಂಕಷ್ಟ; ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿದ ಕಾರು!

    ಹೊಸಹೊಕ್ಕು ನಿವಾಸಿ ಸದಾಶಿವ ಶೆಟ್ಟಿ ಅವರ ಒಬ್ಬನೇ ಮಗನಾಗಿರುವ ಶೈಲೇಶ್ ಕಳೆದ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಕೃಷಿ ಕೆಲಸ ಮಾಡಿಕೊಂಡಿದ್ದರು. ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    DAKSHINA KANNADA

    ಗುಂಡಿಗೆ ಬಿದ್ದು ಅಟೋ ಚಾಲಕ ಸಾವು..! MCC ಅಧಿಕಾರಿಗಳ ಮೇಲೆ FIR..!

    Published

    on

    ಮಂಗಳೂರು:  ಶುಕ್ರವಾರ ತಡರಾತ್ರಿಯಲ್ಲಿ ಅಟೋ ರಿಕ್ಷಾವೊಂದು ಕೊಟ್ಟಾರ ಬಳಿಯಲ್ಲಿನ ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದು ಚಾಲಕ ಮೃ*ತ ಪಟ್ಟ ಘಟನೆ ನಡೆದಿದೆ.

    ಅಟೋ ರಿಕ್ಷ ಚಾಲಕ ದೀಪಕ್ ಆಚಾರ್ಯ ಎಂಬವರು ಅಟೋ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಈ ಅಪಘಾತ ನಡೆದಿತ್ತು. ರಾತ್ರಿ ಧಾರಕಾರವಾಗಿ ಮಳೆ ಸುರಿಯುತ್ತಿದ್ದ ಕಾರಣ ಅಟೋ ಚಾಲಕ ರಸ್ತೆಯಲ್ಲಿದ್ದ ಗುಂಡಿಯನ್ನು ಗಮನಿದೆ ಅಟೋ ಸಹಿತ ಗುಂಡಿಗೆ ಬಿದ್ದಿದ್ದರು. ಕೊಟ್ಟಾರದ ಯಮುನಾ ಪ್ಯಾರಡೈಸ್ ಅಪಾರ್ಟ್‌ಮೆಂಟ್‌ ಬಳಿ ಈ ದುರ್ಘಟನೆ ನಡೆದಿದ್ದು ಚಾಲಕ ದೀಪಕ್ ಆಚಾರ್ಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

    Read More; ಮಂಗಳೂರಿನಲ್ಲಿ ಮೊದಲ ಮಳೆಗೆ ಜೀವ ಬ*ಲಿ; ಆಟೋರಿಕ್ಷಾ ತೋಡಿಗೆ ಬಿದ್ದು ಚಾಲಕ ಸಾ*ವು

    ಈ ಬಗ್ಗೆ ಹೇಮಲತಾ ಎಂಬವರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಗರ ಪಾಲಿಕೆಯ ಸಂಬಂಧಿತ ಅಧಿಕಾರಿಗಳು ದೀಪಕ್ ಆಚಾರ್ಯ ಅವರ ಸಾವಿಗೆ ಕಾರಣ ಎಂದು ದೂರಿದ್ದಾರೆ. ರಸ್ತೆಯಲ್ಲಿ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡದೇ ಇದ್ದ ಕಾರಣ ಮಳೆಯಲ್ಲಿ ಈ ಅಪಘಾತವಾಗಿದ್ದು , ಜೀವ ಹಾನಿಗೆ ನಗರಪಾಲಿಕೆ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.

    Continue Reading

    LATEST NEWS

    Trending