Connect with us

    LATEST NEWS

    Mangaluru: ಲಾರಿ, ಸ್ಕೂಟರ್ ಢಿಕ್ಕಿ – ವಿದ್ಯಾರ್ಥಿ ಸಾವು..!

    Published

    on

    ಟಿಪ್ಪರ್- ಸ್ಕೂಟರ್ ಮಧ್ಯೆ ನಡೆದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಆ.26ರಂದು ಮಂಗಳೂರು ನಗರದ ಹೊರವಲಯದ ಅಡ್ಯಾರ್ ನಲ್ಲಿ  ನಡೆದಿದೆ.

    ಮಂಗಳೂರು: ಟಿಪ್ಪರ್- ಸ್ಕೂಟರ್ ಮಧ್ಯೆ ನಡೆದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಆ.26ರಂದು ಮಂಗಳೂರು ನಗರದ ಹೊರವಲಯದ ಅಡ್ಯಾರ್ ನಲ್ಲಿ  ನಡೆದಿದೆ.

    ಮೃತ ವಿದ್ಯಾರ್ಥಿಯನ್ನು ಅಡ್ಯಾರ್ ಪದವು ನಿವಾಸಿ  ಶರಫುದ್ದೀನ್  (16)ಎಂದು ಗುರುತಿಸಲಾಗಿದೆ.

    ಈತ ನಗರದ ಮಿಲಾಗ್ರಿಸ್ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

    ಗೆಳೆಯನೊಂದಿಗೆ ಆಕ್ಟಿವಾದಲ್ಲಿ ಸಂಚರಿಸುತ್ತಿದ್ದ ವೇಳೆ ಘಟನೆ ನಡೆದಿದ್ದು, ಢಿಕ್ಕಿ ಹೊಡೆದ ರಭಸಕ್ಕೆ ಹಿಂಬದಿ ಸವಾರನಾಗಿದ್ದ ಶರಫುದ್ದೀನ್ ರಸ್ತೆಗೆಸೆಯಲ್ಪಟ್ಟು ತೀವ್ರ ರಕ್ತಸ್ರಾವವುಂಟಾಗಿತ್ತು ಎನ್ನಲಾಗಿದೆ.

    ಕೂಡಲೇ ಸ್ಥಳೀಯರು ಶರಫುದ್ದೀನ್ ನನ್ನು ಸಮೀಪದ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

    ಇನ್ನೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

     

    Click to comment

    Leave a Reply

    Your email address will not be published. Required fields are marked *

    DAKSHINA KANNADA

    WATCH : ಕಾಲೇಜು ಹಾಗೂ ಖಾಸಗಿ ಬಸ್ಸುಗಳೆರಡರ ನಡುವೆ ಅಪಘಾ*ತ; ಅಪಘಾತ*ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    Published

    on

    ದೇರಳಕಟ್ಟೆ : ಕಾಲೇಜು ಹಾಗೂ ಖಾಸಗಿ ಬಸ್ಸುಗಳೆರಡರ ನಡುವೆ ಅಪಘಾ*ತ ಸಂಭವಿಸಿದ ಘಟನೆ ನಾಟೆಕಲ್ ಉರುಮಣೆ ಸಮೀಪ ಸೋಮವಾರ(ಜೂ.3) ಬೆಳಿಗ್ಗೆ ಸಂಭವಿಸಿದೆ.  ಕಾಲೇಜು ಬಸ್ ಹಾಗೂ ಮಂಗಳೂರಿನಿಂದ ಮುಡಿಪು ಮಾರ್ಗವಾಗಿ ತೆರಳುತ್ತಿದ್ದ ಖಾಸಗಿ ಬಸ್ಸುಗಳ ಮಧ್ಯೆ ಅಪಘಾ*ತ ಸಂಭವಿಸಿದೆ.

    ಇದನ್ನೂ ಓದಿ : ಜೈಲಿನಲ್ಲೇ ಮುಂಬೈ ಸರಣಿ ಬಾಂಬ್ ಸ್ಫೋ*ಟದ ಆರೋಪಿಯ ಹ*ತ್ಯೆ

    ಘಟನೆಯಲ್ಲಿ ಖಾಸಗಿ ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಸಣ್ಣಪುಟ್ಟ ಗಾಯಗೊಂಡಿದ್ದು, ಉಳಿದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ‌. ಅಪಘಾ*ತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    Continue Reading

    LATEST NEWS

    ಕಳ್ಳತನಕ್ಕಾಗಿ ಮನೆಗೆ ನುಗ್ಗಿ ಗಾಢ ನಿದ್ರೆಗೆ ಜಾರಿದ ಕಳ್ಳ..!

    Published

    on

    ಉತ್ತರಪ್ರದೇಶ/ಮಂಗಳೂರು:  ಮನೆಗೆ ಕಳ್ಳತನಕ್ಕೆಂದು ಬಂದ ಕಳ್ಳನೊಬ್ಬ ಎಸಿಯ ತಂಪು ಗಾಳಿಯಿಂದ ಗಾಢ ನಿದ್ರೆಗೆ ಜಾರಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

    ಭಾನುವಾರ ಮುಂಜಾನೆ ಯಾರೂ ಇಲ್ಲದೇ ಇದ್ದ ಮನೆಯೊಂದಕ್ಕೆ ಕಳ್ಳನೊಬ್ಬ ಕಳ್ಳತನಕ್ಕೆಂದು ನುಗ್ಗಿದ್ದಾನೆ.  ಈ ವೇಳೆ ಮದ್ಯಪಾನ ಸೇವಿಸಿದ್ದ ಈತ ಮನೆಯಲ್ಲಿ ಎಸಿ ಹಾಕಿದ್ದರಿಂದ ಅಲ್ಲೇ ಸ್ವಲ್ಪ ಹೊತ್ತು ಕುಳಿತು ತಂಪು ಗಾಳಿ ತೆಗೆದುಕೊಂಡಿದ್ದಾನೆ. ಬಳಿಕ ಕಳ್ಳ ಅಲ್ಲೇ ಗಾಢ ನಿದ್ರೆಗೆ  ಜಾರಿದ್ದಾನೆ.

    Read More..;  ಟಾರ್ಚ್ ಬೆಳಕಿನಲ್ಲಿ ಮತದಾನ..! ರಾಯಚೂರಿನಲ್ಲೊಂದು ಅಪರೂಪದ ಘಟನೆ

    ಡಾ. ಸುನಿಲ್ ಪಾಂಡೆ ಎಂಬವರಿಗೆ ಸೇರಿದ್ದ ಮನೆ ಇದಾಗಿದ್ದು ಘಟನೆಯ ವೇಳೆ ಮನೆಯಲ್ಲಿ ಯಾರೂ ಇದ್ದಿರಲಿಲ್ಲ. ಇನ್ನು ಗೇಟ್ ತೆರೆದಿರುವುದನ್ನು ಕಂಡ ಪಕ್ಕದ ಮನೆಯವರು ಮನೆಗೆ ಬಂದು ಪರೀಕ್ಷಿಸಿದ್ದಾರೆ. ಆ ವೇಳೆಗೆ ವ್ಯಕ್ತಿಯೊಬ್ಬ ಎಸಿಯ ಕೆಳಗೆ ಗಾಢ ನಿದ್ರೆಗೆ ಜಾರಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಢ ನಿದ್ರೆಯಲ್ಲಿದ್ದ ಕಳ್ಳನನ್ನು ಎಬ್ಬಿಸಿದ್ದಾರೆ. ತನಿಖೆ ವೇಳೆ ತಾನು ಕಳ್ಳತನಕ್ಕೆಂದು ಬಂದಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಇನ್ನು ಹೆಚ್ಚಿನ ತನಿಖೆಗಾಗಿ ಕಳ್ಳನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.

    Continue Reading

    LATEST NEWS

    ಯಕ್ಷಗಾನ ಕಲಾವಿದರಾದ ಸುಣ್ಣಂಬಳ, ವಾದಿರಾಜರಿಗೆ ಮಸ್ಕತ್‌ನಲ್ಲಿ ಬಿರುದು ಪ್ರದಾನ

    Published

    on

    ಮಸ್ಕತ್/ಮಂಗಳೂರು: ಬಿರುವ ಜವನೆರ್ ಮಸ್ಕತ್ ಹಾಗೂ ಇನ್ಸ್ಪಿರೇಷನ್ ಡಿಸೈನ್ ಇವರು ಮಸ್ಕತ್ ನ ರೂಯಿ ಯ ಅಫಲಾಜ್ ಹೋಟೆಲ್‌ನಲ್ಲಿ ನಡೆದ ಶ್ರೀ ದೇವೀ ಮಹಾತ್ಮೆ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಸುಣ್ಣಂಬಳ ಹಾಗೂ ವಾದಿರಾಜರಿಗೆ ‘ಯಕ್ಷ ನಿಧಿ’  ಹಾಗೂ ಡಾ. ವಾದಿರಾಜ ಕಲ್ಲುರಾಯ ಅವರಿಗೆ ‘ಯುವ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಸುಣ್ಣಂಬಳ ವಿಶ್ವೇಶ್ವರ ಭಟ್ ಅವರಿಗೆ ” ಯಕ್ಷ ನಿಧಿ”

    ಮಸ್ಕತ್ ನಲ್ಲಿ ನಡೆದ ಶ್ರೀ ದೇವೀ ಮಹಾತ್ಮೆ ಯಕ್ಷಗಾನ ಪ್ರದರ್ಶನ ವೇದಿಕೆಯಲ್ಲಿ ಖ್ಯಾತ ಯಕ್ಷಗಾನ ವೇಷಧಾರಿ, ಅರ್ಥಧಾರಿ ಹಾಗೂ ಶ್ರೀ ಕಟೀಲು ಮೇಳದ ಪ್ರಭಂದಕ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರಿಗೆ ” ಯಕ್ಷ ನಿಧಿ” ಹಾಗೂ ಖ್ಯಾತ ನಿರೂಪಕ, ಉಪನ್ಯಾಸಕ, ಯಕ್ಷ ಕಲಾ ವ್ಯವಸಾಯಿ, ಅರ್ಥಧಾರಿ, ಮಿಮಿಕ್ರಿ ಕಲಾ ಪ್ರವೀಣ, ಕನ್ನಡ ಪದ ಪ್ರವೀರ ಡಾ. ವಾದಿರಾಜ ಕಲ್ಲುರಾಯ ಅವರಿಗೆ ‘ಯುವ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಡಾ. ವಾದಿರಾಜ ಕಲ್ಲುರಾಯ ಅವರಿಗೆ ‘ಯುವ ಸಿರಿ’ ಪ್ರಶಸ್ತಿ

    ರಕ್ತಬೀಜಾಸುರನಾಗಿ ವಿಜೃಂಭಿಸಿದ ತೆಂಕು ತಿಟ್ಟಿನ ಪ್ರಾತಿನಿಧಿಕ ವೇಷಧಾರಿ ಸುಣ್ಣಂಬಳ ಅವರನ್ನು ಆನಂದ ಸನಿಲ್, ಗಂಗಾಧರ ಪೂಜಾರಿ, ಮಿತ್ರ ಹೆರಾಜೆ, ಶಶಿಧರ ಶೆಟ್ಟಿ ಮಲ್ಲಾರ್, ದಿವಾಕರ ಶೆಟ್ಟಿ ಮಲ್ಲಾರ್, ಡಾ. ಅಂಚನ್ ಸಿ ಕೆ ಅವರು ಸನ್ಮಾನಿಸಿದರು. ಬ್ರಹ್ಮ ಹಾಗೂ ಸುಗ್ರೀವ ಪಾತ್ರ ನಿರ್ವಹಿಸಿ, ಕಲಾವಿದರ ಸಂಯೋಜಕರಾಗಿ ಯಕ್ಷಯಾನದ ಸಾರಥಿಯಾಗಿ ಸಹಕರಿಸಿದ್ದ ಕಲ್ಲುರಾಯ ಅವರನ್ನು ನರೇಶ್ ಪೈ, ದಿನೇಶ್ ಪೂಜಾರಿ, ಎಸ್. ಡಿ. ಪ್ರಸಾದ್, ಸೂರ್ಯ ಕುಮಾರ್ ಸುವರ್ಣ, ಲೀಲಾಕ್ಷ ಬಿ ಕರ್ಕೇರ ಹಾಗೂ ಸುಚೇತನಾ ಅಂಚನ್ ಅವರು ಸನ್ಮಾನ ಗೈದರು.

    Read More..; ಮಸ್ಕತ್ ನಲ್ಲಿ ಮೇಳೈಸಿದ ದೇವೀ ಮಹಾತ್ಮೆ ಯಕ್ಷಗಾನ

    ನಿತಿನ್ ಹುನ್ಸೆ ಕಟ್ಟೆ ಸನ್ಮಾನ ಪತ್ರ ವಾಚನ ಮಾಡಿದರು.ಕದ್ರಿ ನವನೀತ ಶೆಟ್ಟಿ ಅವರು ಅಭಿನಂದನೆ- ನಿರೂಪಣೆ ಮಾಡಿದರು.
    ಗುರುಪ್ರಸಾದ್ ರಾಮ ಅಮೀನ್ ನಾನಿಲ್ ಸ್ವಾಗತಿಸಿದರು. ಇನ್ಸ್ಪಿರೇಷನ್ ಡಿಸೈನ್ ನ ಉತ್ತಮ್ ಕೋಟ್ಯಾನ್ ಧನ್ಯವಾದ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಯಕ್ಷಗಾನದಲ್ಲಿ ಪಾಲ್ಗೊಂಡ ಎಲ್ಲಾ ಕಲಾವಿದರನ್ನು ಪರಿಚಯಿಸಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

    Continue Reading

    LATEST NEWS

    Trending