Connect with us

    DAKSHINA KANNADA

    Ullala: ಮಟ್ಕಾ, ಜೂಜು ಪ್ರಕರಣ- ಇಬ್ಬರು ಆರೋಪಿಗಳ ಬಂಧನ..!

    Published

    on

    ಮಟ್ಕಾ ಜೂಜಿಗೆ ಜನರಿಂದ ಹಣ ಪಡೆಯುತ್ತಿದ್ದ ಇಬ್ಬರು ಆರೋಪಿಗಳನ್ನು ಉಳ್ಳಾಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ಉಳ್ಳಾಲ: ಮಟ್ಕಾ ಜೂಜಿಗೆ ಜನರಿಂದ ಹಣ ಪಡೆಯುತ್ತಿದ್ದ ಇಬ್ಬರು ಆರೋಪಿಗಳನ್ನು ಉಳ್ಳಾಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ತೊಕ್ಕೊಟ್ಟು ಯುನಿಟಿ ಹಾಲ್ ಬಳಿಯ ಕೆರೆಬೈಲ್ ಹೌಸ್ ನಿವಾಸಿ 55 ವರ್ಷದ ಉರ್ಮಾನ್ ಆಪ್ಪೂಸ್ (55), ಪ್ರಕಾಶ್ ನಗರದ  ಪಿಲಾರ್ನ ಇಲ್ಯಾಸ್ (52) ಬಂಧಿತರು.

    ಆರೋಪಿಗಳಿಂದ 2,990 ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

    DAKSHINA KANNADA

    ಮುಡಿಪು ಕುರ್ನಾಡು ಸೂರಜ್ ಪದವಿ ಪೂರ್ವ ಕಾಲೇಜು ಮತ್ತು ಜ್ಞಾನದೀಪ ಶಾಲೆ : ಶಾಲಾ ವೈಖರಿಯ ಬಗ್ಗೆ ಕಾರ್ಯಕ್ರಮ

    Published

    on

    ಮಂಗಳೂರು : ಮುಡಿಪು ಕುರ್ನಾಡು ಸೂರಜ್ ಪದವಿ ಪೂರ್ವ ಕಾಲೇಜು ಮತ್ತು ಜ್ಞಾನದೀಪ ಶಾಲೆಯಲ್ಲಿ ಶಾಲಾ ವೈಖರಿಯ ಬಗ್ಗೆ ಕಾರ್ಯಕ್ರಮ ನಡೆಯಿತು.
    ಈ ಸಂದರ್ಭ 2023 – 24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಫಲಿತಾಂಶ ಪಡೆದ ವಿದ್ಯಾರ್ಥಿಗಳಾದ ಸಾತ್ವಿಕ್, ವೀಕ್ಷಿತಾ, ಕೀರ್ತನಾ ಅವರನ್ನು ಸನ್ಮಾನಿಸಲಾಯಿತು.


    ಈ ಕಾರ್ಯಕ್ರಮದಲ್ಲಿ ಕೈರಂಗಳ, ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾಕೇಂದ್ರದ ಪ್ರಾಂಶುಪಾಲ ಶ್ರೀಹರಿ, ಧರ್ಮಗುರು ಶರೀಫ್, ಕಾಲೇಜು ಅಧ್ಯಕ್ಷ ಮಂಜುನಾಥ ಎಸ್. ರೇವಣ್ಕರ್, ಪಾಂಶುಪಾಲ ರಕ್ಷಿತ್ ಕುಲಾಲ್ ಉಪಸ್ಥಿತರಿದ್ದರು.

    ಭವ್ಯಜ್ಯೋತಿ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿದರು. ಶ್ವೇತಾ ವಂದಿಸಿದರು.

     

    Continue Reading

    DAKSHINA KANNADA

    26ನೇ ವಯಸ್ಸಿಗೆ ಸಂಸತ್​ ಪ್ರವೇಶಿಸುತ್ತಿರುವ ದೇಶದ ಕಿರಿಯ ಸಂಸದ

    Published

    on

    ಸಚಿವ ಈಶ್ವರ್​ ಖಂಡ್ರೆ ಅವರ ಮಗ ಸಾಗರ್​ ಖಂಡ್ರೆ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಬೀದರ್​ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ಅವರು ಬಿಜೆಪಿ ಹಾಲಿ ಸಂಸದ ಭಗವಂತ ಖೂಬಾಗೆ ಸೋಲಿನ ರುಚಿ ತೋರಿಸಿದ್ದಾರೆ. ಆ ಮೂಲಕ ದೇಶದ ಕಿರಿಯ ಸಂಸದ ಎಂಬ ಹೆಗ್ಗಳಿಗೂ ಪಾತ್ರರಾಗಿದ್ದಾರೆ. 26ನೇ ವಯಸ್ಸಿಗೆ ಸಾಗರ್​​ ಖಂಡ್ರೆ ಸಂಸತ್​ ಪ್ರವೇಶಿಸಿದ್ದಾರೆ.

    ಬಿಜೆಪಿ ಭದ್ರಕೋಟೆಯಾದ ಬೀದರ್​ ಅನ್ನು ಲೋಕಸಭಾ ಚುನಾವಣೆಯ ಮೂಲಕ ಖಂಡ್ರೆ ಮಗ ಛಿದ್ರಗೊಳಿಸಿದ್ದಾರೆ. ಕಾಂಗ್ರೆಸ್​ ಪಕ್ಷದಿಂದ ಸ್ಪರ್ಧಿಸಿ​ 665162 ಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ. ಇನ್ನು ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಭಗವಂತ ಖೂಬಾ 129396 ಮತಗಳಿಂದ ಸೋಲುಂಡಿದ್ದಾರೆ.

    ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ವಿಪಕ್ಷ ನಾಯಕ ಆರ್​ ಅಶೋಕ್​ ಅವರು ಸಾಗರ್​ ಖಂಡ್ರೆ ವಿರುದ್ಧ ವ್ಯಂಗ್ಯ ನುಡಿದಿದ್ದರು. ಆತ ಅನುಭವ ಇಲ್ಲದ ಹುಡುಗ. ಆತ ಗೆದ್ದರೆ ಸ್ಕೂಲ್​ ಬ್ಯಾಗ್​, ಬುಕ್​ ಹಿಡಿದುಕೊಂಡು ಕರೆದುಕೊಂಡು ಬರಲು ಒಬ್ಬರು ಬೇಕು ಎಂದು ಹೇಳಿದ್ದರು.

    Continue Reading

    DAKSHINA KANNADA

    ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಅರಳಿದ ಕಮಲ

    Published

    on

    ಮಂಗಳೂರು : ಜಿದ್ದಾಜಿದ್ದಿಯ ಕ್ಷೇತ್ರವಾಗಿದ್ದ ದಕ್ಷಿಣ ಕನ್ನಡದಲ್ಲಿ ಮತ್ತೆ ಕಮಲ ಅರಳಿದೆ. ಈ ಬಾರಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಹೊಸ ಮುಖಗಳಿಗೆ ಮಣೆ ಹಾಕಿದ್ದವು. ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ನಡುವೆ ನಡೆದ ಪೈಪೋಟಿಯಲ್ಲಿ ಚೌಟ ಗೆದ್ದು ಬೀಗಿದ್ದಾರೆ.

    ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಚೌಟ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. 8 ನೇ ಬಾರಿಗೆ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಿದೆ. 2009, 2014, 2019ರಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿಯೂ(2024) ಗೆದ್ದಿದೆ.

    Continue Reading

    LATEST NEWS

    Trending