Connect with us

    DAKSHINA KANNADA

    ಪುತ್ತೂರಿನ ಮನೆಯೊಂದರಲ್ಲಿ ‘ಫಾರೆಸ್ಟಿನ್ ಕ್ಯಾಟ್ ಸ್ನೇಕ್’ ಪತ್ತೆ..!

    Published

    on

    ಅಪರೂಪದ ಬೆಕ್ಕು ಕಣ್ಣಿನ ಹಾವೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಲ್ನಾಡು ನಿವಾಸಿ ರವಿಕೃಷ್ಣ ಕಲ್ಲಜೆ ಎಂಬವರ ಮನೆಯಲ್ಲಿ ಹಾವು ಪತ್ತೆಯಾಗಿದೆ.

    ಪುತ್ತೂರು: ಅಪರೂಪದ ಬೆಕ್ಕು ಕಣ್ಣಿನ ಹಾವೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಲ್ನಾಡು ನಿವಾಸಿ ರವಿಕೃಷ್ಣ ಕಲ್ಲಜೆ ಎಂಬವರ ಮನೆಯಲ್ಲಿ ಹಾವು ಪತ್ತೆಯಾಗಿದೆ.

    ಫಾರೆಸ್ಟಿನ್ ಕ್ಯಾಟ್ ಸ್ನೇಕ್ ( ಬೆಕ್ಕು ಕಣ್ಣಿನ ಹಾವು )ಎಂದು ಕರೆಯಲಾಗುವ ಈ ಹಾವನ್ನು ನೋಡಿದ ಉರಗತಜ್ಞ ತೇಜಸ್ ಪುತ್ತೂರಿನಲ್ಲಿ ಈ ರೀತಿಯ ಹಾವು ಪತ್ತೆಯಾಗಿರುವುದೇ ಅಪರೂಪ ಎಂದಿದ್ದಾರೆ.

    ಹೆಚ್ಚಾಗಿ ಪಶ್ಚಿಮಘಟ್ಟದಂತಹ ದಟ್ಟ ಅರಣ್ಯಗಳ ಮಧ್ಯೆಯೂ ಅಪರೂಪವಾಗಿ ಕಾಣಸಿಗುವ ಬೆಕ್ಕು ಕಣ್ಣಿನ ಈ ಹಾವಿನ ಕಣ್ಣಿನಿಂದಲೇ ಈ ಹಾವಿಗೆ ಈ ಹೆಸರು ಬಂದಿದೆ.

    ಪುತ್ತೂರಿನ ಬಲ್ನಾಡು ನಿವಾಸಿ ರವಿಕೃಷ್ಣ ಕಲ್ಲಜೆ ಮನೆಯ ಟೇಬಲ್ ಮೇಲೆ ಹಳದಿ ಬಣ್ಣದ ವಸ್ತು ಬಿದ್ದಿರುವುದನ್ನು‌ ಗಮನಿಸಿದ್ದಾರೆ.

    ಹತ್ತಿರಕ್ಕೆ‌ ಹೋಗಿ ಪರಿಶೀಲಿಸಿದ ಸಂದರ್ಭದಲ್ಲಿ ಟೇಬಲ್‌ ಮೇಲೆ ಆರಾಮವಾಗಿ ಮಲಗಿರುವುದು ಹಳದಿ‌ ಬಣ್ಣದ ಹಾವೆಂದು ಅವರ ಗಮನಕ್ಕೆ ಬಂದಿದೆ.

    ಕೂಡಲೇ ಉರಗತಜ್ಞ ತೇಜಸ್‌ ಗೆ ಈ ಬಗ್ಗೆ ಮಾಹಿತಿ ನೀಡಿದ‌ ಹಿನ್ನಲೆಯಲ್ಲಿ ಹಾವನ್ನು ರಕ್ಷಿಸಿ ಕಾಡಿಗೆ ಬಿಡುವ ಕೆಲಸವನ್ನು ಉರಗತಜ್ಞ ತೇಜಸ್‌ ಮಾಡಿದ್ದಾರೆ.

    ಉರಗತಜ್ಞ ತೇಜಸ್ ಬನ್ನೂರು ಹಾವನ್ನು ರಕ್ಷಿಸಿ ಮತ್ತೆ ಅದರ ವಾಸಸ್ಥಾನವಾದ ದಟ್ಟ ಅರಣ್ಯಕ್ಕೆ ಬಿಟ್ಟಿದ್ದಾರೆ.

    DAKSHINA KANNADA

    ನಟಿ – ಸಂಸದೆ ಕಂಗಾನಾಗೆ ಕಪಾಳ ಮೋಕ್ಷ..! CISF ಸಿಬ್ಬಂದಿ ವಿರುದ್ಧ ಆರೋಪ..!

    Published

    on

    ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್‌ (CISF) ಮಹಿಳಾ ಸಿಬ್ಬಂದಿ ತನಗೆ ಕಪಾಳಮೋಕ್ಷ ಮಾಡಿದ್ದಾಗಿ ಬಾಲಿವುಡ್ ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ನೂತನ ಸಂಸದೆ ಕಂಗನಾ ರನೌತ್ ಆರೋಪಿಸಿದ್ದಾರೆ. ದೆಹಲಿಗೆ ಆಗಮಿಸಿದ ಕಂಗನಾ ಹಿರಿಯ ಸಿಐಎಸ್‌ಎಫ್‌ (CISF) ಅಧಿಕಾರಿಗಳ ದೂರು ನೀಡಿದ್ದಾರೆ.

    ಕಂಗನಾಗೆ ಕಪಾಳಮೋಕ್ಷ ಮಾಡಿದ್ದು ಯಾಕೆ?

    ದೆಹಲಿಗೆ ಪ್ರಯಾಣ ಬೆಳೆಸಲು ಕಂಗನಾ ಚಂಢೀಗಢ ವಿಮಾನ ನಿಲ್ದಾಣಕ್ಕೆ ಮದ್ಯಾಹ್ನ 3.30 ರ ಸುಮಾರಿಗೆ ಆಗಮಿಸಿದ್ದರು. ಈ ವೇಳೆ ಭದ್ರತಾ ತಪಾಸಣೆ ಮಾಡುತ್ತಿದ್ದ ಮಹಿಳಾ ಸಿಐಎಸ್‌ಎಫ್‌ (CISF) ಸಿಬ್ಬಂದಿ ಜೊತೆ ಕಿರಿಕ್ ನಡೆದಿದೆ. ಸಿಐಎಸ್‌ಎಫ್‌ನ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್‌ ಅವರು ಈ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಕಂಗನಾ ಇದು ರೈತರ ಆಂದೋಲನದ ವಿರುದ್ಧ ತಾನು ಮಾತನಾಡಿದ ಕೋಪದಿಂದ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಬಂಧನ..!

    ದೆಹಲಿಯ ಹಿರಿಯ ಅಧಿಕಾರಿಗಳಿಗೆ ಕಂಗನಾ ದೂರು ನೀಡಿದ ಹಿನ್ನಲೆಯಲ್ಲಿ ಕುಲ್ವಿಂದರ್ ಕೌರ್ ಅವರನ್ನು ಕಮಾಂಡಿಗ್ ಆಫೀಸರ್ ಬಂಧಿಸಿದ್ದಾರೆ. ಘಟನೆಯ ಕುರಿತು ಕೌರ್ ಅವರಿಂದ ಮಾಹಿತಿ ಪಡೆಯಲಾಗಿದ್ದು, ಘಟನಾ ಸ್ಥಳದಲ್ಲಿದ್ದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರೀಶೀಲನೆ ನಡೆಸಿದ್ದಾರೆ. ಇದೊಂದು ಗಂಭೀರ ಆರೋಪವಾಗಿ ಪರಿಗಣಿಸಿದ ಸಿಐಎಸ್ಎಪ್‌ ಅಧಿಕಾರಿಗಳು ತನಿಖಾ ಸಮಿತಿ ರಚಿಸಿ ತನಿಖೆ ನಡೆಸುತ್ತಿದ್ದಾರೆ.

    2024 ರ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರವನ್ನು ಗೆಲ್ಲುವ ಮೂಲಕ ಕಂಗನಾ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ರನೌತ್ ಅವರು ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್ ವಿರುದ್ಧ ನಿರ್ಣಾಯಕ ಗೆಲುವು ಸಾಧಿಸಿದ್ದಾರೆ.

    Continue Reading

    DAKSHINA KANNADA

    ಜೂ.9: ದುಬೈ ಯಕ್ಷೋತ್ಸವ..; ದಾಶರಥಿ ದರ್ಶನ ಕನ್ನಡ ಪೌರಾಣಿಕ ಯಕ್ಷಗಾನ

    Published

    on

    ಮಂಗಳೂರು: ಯಕ್ಷಗಾನ ಅಭ್ಯಾಸ ಕೇಂದ್ರ ದುಬೈ ಯುಎಇ ವತಿಯಿಂದ ಜೂ. 9 ರಂದು ಮಧ್ಯಾಹ್ನ 2ರಿಂದ ದುಬೈನ ಕರಮ ಶೇಖ್ ರಷೀದ್ ಸಭಾಗಂಣದಲ್ಲಿ ದುಬೈ ಯಕ್ಷೋತ್ಸವ ಆಯೋಜಿಸಲಾಗಿದೆ. ಯಕ್ಷಗಾನ ಅಭ್ಯಾಸ ಕೇಂದ್ರ, ಯುಎಇಯ ಬಾಲ-ಯುವ- ಪರಿಣತ-ಪ್ರೌಢ ಕಲಾವಿದರಿಂದ ದಾಶರಥಿ ದರ್ಶನ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಗಾನಸಾರಥ್ಯ, ಯುವ ಭಾಗವತರಾದ ಭವ್ಯಶ್ರೀ ಹರೀಶ ಕುಲ್ಕುಂದ ಅವರ ಭಾಗವತಿಕೆಯಲ್ಲಿ ಪ್ರಸಂಗ ಮೂಡಿಬರಲಿದೆ. ಹಿಮ್ಮೇಳದಲ್ಲಿ ಸವಿನಯ ನೆಲ್ಲಿತೀರ್ಥ, ಮಯೂರ ನಾಯ್ಗ ಭಾಗವಹಿಸುವರು. ಚಕ್ರತಾಳದಲ್ಲಿ ಭವ್ಯಶ್ರೀ ಅವರ ಪುತ್ರ ಅಗಸ್ತ್ಯ ಕುಲ್ಕುಂದ ಕಾಣಿಸಿಕೊಳ್ಳುವರು. ಜತೆಗೆ ಸ್ಥಳೀಯ ಕಲಾವಿದರು ಹಿಮ್ಮೇಳದಲ್ಲಿ ಇರಲಿದ್ದಾರೆ.

    ಯಕ್ಷ ಶ್ರೀ ರಕ್ಷ ಗೌರವ ಪ್ರಶಸ್ತಿ 2024

    ಈ ಬಾರಿಯ ‘ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿ’ಯನ್ನು ಸ್ಥಳೀಯ ಹಿರಿಯ ಕಲಾವಿದ ವೆಂಕಟೇಶ ಶಾಸ್ತ್ರಿ ಪುತ್ತಿಗೆ ಅವರಿಗೆ ಪ್ರದಾನ ಮಾಡಲಾಗುವುದು. ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಧಾನ ಸಂಚಾಲಕ ಶಶಿಧರ ಶೆಟ್ಟಿ ಬರೋಡ ಮತ್ತು ಯುಎಇ ಯ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಅಭ್ಯಾಸ ಕೇಂದ್ರದ ಸಂಚಾಲಕ ದಿನೇಶ ಶೆಟ್ಟಿ ಕೊಟ್ಟಿಂಜ ಅವರ ನೇತೃತ್ವದಲ್ಲಿ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ಶರತ್ ಕುಡ್ಲ ಅವರ ನಿರ್ದೇಶನದಲ್ಲಿ, ಕೇಂದ್ರದ ಎಲ್ಲಾ ಹಿರಿಯ -ಕಿರಿಯ ಕಲಾವಿದರು ಪೂರ್ಣ ಪ್ರಮಾಣದ ಪ್ರದರ್ಶನಕ್ಕೆ ಸರ್ವಸಿದ್ಧತೆಯಲ್ಲಿದ್ದಾರೆ. ಪ್ರಸಾದನ ಕಲೆಯಲ್ಲಿ ಸಿದ್ಧಹಸ್ತರಾದ ಕಿನ್ನಿಗೋಳಿ ಮೋಹಿನೀ ಕಲಾ ಸಂಪದದ ಕಲಾವಿದರಾದ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ನಿತಿನ್ ಕುಂಪಲ, ಮನೋಜ್ ಶೆಟ್ಟಿಗಾರ್ ಹಳೆಯಂಗಡಿ ಸಹಕಾರ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗೆ 0507083537, 0529157825, 0553912535 ಸಂಪರ್ಕಿಸಬಹುದು ಎಂದು ಅಭ್ಯಾಸ ಕೇಂದ್ರದ ಮಾಧ್ಯಮ ಪ್ರಚಾರ ಸಂಯೋಜಕ ಗಿರೀಶ್ ನಾರಾಯಣ್ ಕಾಟಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಪೂರ್ವರಂಗದಲ್ಲಿ ಗಣಪತಿ ಕೌತುಕ, ಏಕಕಾಲದಲ್ಲಿ ಮೂರು ರಂಗಸ್ಥಳಗಳಲ್ಲಿ ಪ್ರಸಂಗ ಆರಂಭಗೊಳ್ಳಲಿದೆ. ವೈಭವಪೂರ್ಣ ವಿಶೇಷ ಸೆಟ್ಟಿಂಗ್ ಗಳನ್ನು ಒಳಗೊಂಡಿದ್ದು, ನೂತನ ನಾಟ್ಯ ಸಂಯೋಜನೆ-ಸೆಟ್ಟಿಂಗ್ ನಲ್ಲಿ ಸೇತು ಬಂಧನ ದೃಶ್ಯ ಕಾಣಲಿದೆ.  ಒಟ್ಟು 127 ಪಾತ್ರಗಳು ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು,  ಕುಂಬಳೆ ಪಾರ್ತಿಸುಬ್ಬ, ಜತ್ತಿ ಈಶ್ವರ ಭಟ್, ಕಾಸರಗೋಡು ಸುಬ್ರಾಯ ಪಂಡಿತ, ಎಂ.ಎ.ಹೆಗಡೆ ಶಿರಸಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಹೊಸ್ತೋಟ ಮಂಜುನಾಥ ಭಾಗವತ ಮೊದಲಾದವರು ದಾಶರಥಿ ದರ್ಶನ ಪ್ರಸಂಗವನ್ನು ರಚಿಸಿದ್ದಾರೆ.

    Continue Reading

    DAKSHINA KANNADA

    ಜೂ.9: ಸುರತ್ಕಲ್ ಬಂಟರ ಸಂಘದ ಮಹಾಸಭೆ, ಸಹಾಯ ಹಸ್ತ, ಅಭಿನಂದನೆ, ವಿದ್ಯಾರ್ಥಿ ವೇತನ ವಿತರಣೆ

    Published

    on

    ಸುರತ್ಕಲ್ : ಬಂಟರ ಸಂಘ (ರಿ) ಸುರತ್ಕಲ್ ಇದರ 24 ನೇ ವಾರ್ಷಿಕ ಮಹಾಸಭೆ, ಅಭಿನಂದನೆ, ಸಹಾಯಹಸ್ತ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಜೂ. 9 ರಂದು ಭಾನುವಾರ ಸಂಜೆ 5 ಗಂಟೆಗೆ ಬಂಟರ ಭವನದಲ್ಲಿ ನಡೆಯಲಿದೆ.

    ಬೆಳಿಗ್ಗೆ 9.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, 10.30 ಕ್ಕೆ ವಾರ್ಷಿಕ ಮಹಾಸಭೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಸುರತ್ಕಲ್ ಬಂಟರ ಸಂಘದ ಗ್ರಾಮವಾರು ಸಾಂಸ್ಖೃತಿಕ ಸ್ಪರ್ಧೆ ನಡೆಯಲಿದೆ. ಸಂಜೆ 5 ಗಂಟೆಗೆ ಅಭಿನಂದನಾ ಸಮಾರಂಭ, ಸಹಾಯಹಸ್ತ, ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ.

    ಸಮಾರಂಭವನ್ನು ಮುಂಬೈ ವಿ.ಕೆ. ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಕರುಣಾಕರ ಶೆಟ್ಟಿ ಮಧ್ಯಗುತ್ತು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಾ. ವೈ ಭರತ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಬೆಂಗಳೂರು ಯುವ ಬಂಟರ ಸಂಘದ ಅಧ್ಯಕ್ಷ ರವೀಂದ್ರನಾಥ ಮಾರ್ಲ ಭಾಗವಹಿಸಲಿದ್ದಾರೆ.

    ಸಮಾರಂಭದಲ್ಲಿ ಅಭಿನಂದನೆ, ನಿರಂತರ ವಿದ್ಯಾರ್ಥಿ ವಿತರಣೆ, ಸಹಾಯಹಸ್ತ, ವಿದ್ಯಾರ್ಥಿ ವೇತನ ವಿತರಣೆ, ನೂತನ ಮನೆಯ ಕೀ ಹಸ್ತಾಂತರ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Continue Reading

    LATEST NEWS

    Trending