Connect with us

    DAKSHINA KANNADA

    Mangalore: ರ‍್ಯಾಂಕ್ ವಿಜೇತ ವೈದ್ಯೆಗೆ ಸನ್ಮಾನ

    Published

    on

    ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ನಡೆಸಿದ ಎಂಬಿಬಿಎಸ್‌ ಪದವಿಯಲ್ಲಿ ಫಿಸಿಯೋಲಜಿ ವಿಷಯದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಮುಕ್ಕ ಶ್ರೀನಿವಾಸ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಡಾ. ಮೈತ್ರಿ ಅವರನ್ನು ಶಿವಳ್ಳಿ ಸ್ಪಂದನ ಕದ್ರಿ ವಲಯ ವತಿಯಿಂದ ಸನ್ಮಾನಿಸಲಾಯಿತು.

    ಮಂಗಳೂರು: ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ನಡೆಸಿದ ಎಂಬಿಬಿಎಸ್‌ ಪದವಿಯಲ್ಲಿ ಫಿಸಿಯೋಲಜಿ ವಿಷಯದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಮುಕ್ಕ ಶ್ರೀನಿವಾಸ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಡಾ. ಮೈತ್ರಿ ಅವರನ್ನು ಶಿವಳ್ಳಿ ಸ್ಪಂದನ ಕದ್ರಿ ವಲಯ ವತಿಯಿಂದ ಸನ್ಮಾನಿಸಲಾಯಿತು.

    ಕದ್ರಿ ವಲಯಾಧ್ಯಕ್ಷ ರಾಮಚಂದ್ರ ಭಟ್‌ ಎಲ್ಲೂರು, ಮಹಿಳಾ ಘಟಕಾಧ್ಯಕ್ಷೆ ರಮಾಮಣಿ ಭಟ್‌, ಧಾರ್ಮಿಕ ಪರಿಷತ್‌ ಮಾಜಿ ಸದಸ್ಯ ಪೊಳಲಿ ಗಿರಿಪ್ರಕಾಶ್‌ ತಂತ್ರಿ, ಪದಾಧಿಕಾರಿಗಳಾದ ಸುಧಾಕರ ಭಟ್‌ ಆರೂರು‌,  ಗೀತಾ ಬೆಳ್ಳೆ, ಸುಧಾ ಪ್ರಸಾದ್, ಜಯಲಕ್ಷ್ಮೀ ರಾವ್, ಸದಾನಂದ ಪೇಜಾವರ, ಉಮಾಲತಾ ಜಿ.ತಂತ್ರಿ, ಹೆತ್ತವರಾದ ರಾಜೇಂದ್ರ, ಸಂಧ್ಯಾ ಮತ್ತು ಅಜ್ಜ ವಿಠಲದಾಸ ರಾವ್‌, ಅಜ್ಜಿ ಲೀಲಾ ವಿ.ರಾವ್‌ ಉಪಸ್ಥಿತರಿದ್ದರು.

    DAKSHINA KANNADA

    ಗುಜ್ಜರೆಕೆರೆ ಪರಿಸರದಲ್ಲಿ ಸ್ವಚ್ಛತಾ ಶ್ರಮದಾನ, ನೂರು ಗಿಡ ನೆಡುವ ಕಾರ್ಯಕ್ರಮ

    Published

    on

    ಮಂಗಳೂರು:  ಶ್ರೀ ಅಂಬಾ‌ಮಹೇಶ್ವರಿ ಸೇವಾ ಟ್ರಸ್ಟ್ (ರಿ)ಜೆಪ್ಪು ಇದರ ‘ನಮ್ಮ ಊರು – ನಮ್ಮ ಹೆಮ್ಮೆ’ ಮಾದರಿ ವಾರ್ಡ್ ಯೋಜನೆಯ ಪ್ರಯುಕ್ತ ತನ್ನ 13 ನೇ ತಿಂಗಳ ಸ್ವಚ್ಛತಾ ಶ್ರಮದಾನ ಹಾಗೂ ನಗರ ಹಸಿರೀಕರಣದ ಭಾಗವಾಗಿ ಮೂರು ವಾರ್ಡ್‌ಗಳಲ್ಲಿ ನೂರು ಗಿಡ ನೆಡುವ ಕಾರ್ಯಕ್ರಮ ಜೂ.2ರಂದು ಗುಜ್ಜರೆಕೆರೆ ಪರಿಸರದಲ್ಲಿ ನಡೆಯಿತು.

    ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
    ಮಂಗಳೂರು ವಲಯದ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಸೀತಾರಾಮ ಎ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪರಿಸರ ಪ್ರೇಮಿ ಮಾಧವ ಉಳ್ಳಾಲ್‌ರವರ ಮಾರ್ಗದರ್ಶನದಲ್ಲಿ ಸುಮಾರು 30 ಗಿಡಗಳನ್ನು ನೆಡಲಾಯಿತು.

    ಬಳಿಕ ಮಾತನಾಡಿದ ಸ್ವಾಮಿ ಜಿತಕಾಮಾನಂದಜಿ ಅಂಬಾಮಹೇಶ್ವರಿ ಟ್ರಸ್ಟ್‌ನ ಕಾರ್ಯ‌ವನ್ನು ಶ್ಲಾಘಿಸಿ ಆಶೀರ್ವಚನ ನೀಡಿದರು.
    ಹಸಿರೀಕರಣದ ಪ್ರಯುಕ್ತ ಮೂರು ವಾರ್ಡ್‌ಗಳಲ್ಲಿ ನೂರು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ತುಂಬಾ ಶ್ಲಾಘನೀಯ ಟ್ರಸ್ಟ್‌ನ ವತಿಯಿಂದ ನಡೆಯುವ ಸಮಾಜಸೇವೆ ಹೊರ ಜಗತ್ತಿಗೆ ತಿಳಿದಿದೆಯೊ ಇಲ್ಲವೂ ಆದರೆ ಅವರ ಕೆಲಸ ಅಭಿನಂದನೀಯ ಎಂದರು. ಅದಲ್ಲದೆ ನಗರಗಳಲ್ಲೂ ಕಾಡು ಬೆಳೆಸಬಹುದು ಎಂಬುದಕ್ಕೆ ನಿದರ್ಶನ ನಮ್ಮ ರಾಮಕೃಷ್ಣ ಮಠದ‌ ಸುಪರ್ದಿಯಲ್ಲಿ ಮಿಯವಾಕಿ ಅಥವಾ ಅರ್ಬನ್ ಫಾರೆಸ್ಟ್‌ನ್ನು ಮೂರು ಸೆಂಟ್ಸ್ ಜಾಗದಲ್ಲಿ ಸುಂದರವಾಗಿ ಬೆಳೆಸಿದ್ದಾರೆ ಎಂದು ತಿಳಿಸಿದರು. ಗಿಡಗಳನ್ನು ನೆಡುವುದು ಮುಖ್ಯ‌ವಲ್ಲ ಅದನ್ನು ಸಂರಕ್ಷಿಸಿಕೊಂಡು ಬರುವುದು ತುಂಬಾ ಮುಖ್ಯ. ನಮ್ಮ ಊರು ನಮ್ಮ ನಾಡು ನಮ್ಮ ದೇಶವನ್ನು ಸ್ವಚ್ಚವಾಗಿ ಇಡೋಣ ಎಂದು ಹೇಳಿದರು.

    ಅರಣ್ಯಾಧಿಕಾರಿಗಳಾದಂತ ರಾಜೇಶ್ ಬಳಿಗಾರ್ ಅವರು ಮಾತನಾಡಿ ರಸ್ತೆಗಳ ಪಕ್ಕದಲ್ಲಿ, ಮನೆ ಸುತ್ತಮುತ್ತ, ಉದ್ಯಾನವನಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದರು. ಇಲ್ಲವಾದಲ್ಲಿ ನಮ್ಮ ಭೂಮಿ ಕೂಡಾ ಜೀವಿಗಳಿಲ್ಲದ ಗ್ರಹ ಆಗುತ್ತದೆ. ನಾವು ನಡೆಯುವಾಗ, ಸುತ್ತಾಡುವಾಗ ಅಕ್ಕಪಕ್ಕ ಮರಗಳಿದ್ದರೆ ನಮ್ಮ ಮನಸ್ಸಿಗೆ ಆಹ್ಲಾದಕರ ಭಾವನೆ ಉಂಟಾಗುತ್ತದೆ. ಉತ್ತಮ ಮಾನಸಿಕ ಶಕ್ತಿ ನಮ್ಮ ಶರೀರದಲ್ಲಿ ಸಂಚರಿಸುತ್ತದೆ. ಬೇಸಿಗೆ ಬಿಸಿಲಲ್ಲಿ ತಂಪು ನೀಡುತ್ತದೆ. ಮಳೆ ನೀರು ಇಂಗಲು ಸಹಾಯ ಆಗುತ್ತದೆ. ಮರಗಳು ಹೆಚ್ಚುತ್ತಾ ಹೋದಂತೆ ಅಂತರ್‌ಜಲ ಮಟ್ಟ ವೃದ್ಧಿಯಾಗುತ್ತದೆ ಎಂದರು. ಟ್ರಸ್ಟ್‌ನ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತಾ ಸೀತಾ ಅಶೋಕ ಔಷಧ ಗುಣ ಇರುವ ಗಿಡ ಮತ್ತು ಈ ಪರಿಸರಕ್ಕೆ ಹೊಂದಿಕೊಳ್ಳುವಂತದ್ದು. ಇಂತಹ ಗಿಡಗಳನ್ನು ನೆಡುವುದರಿಂದ ನೀರು-ಗಾಳಿ ಸ್ವಚ್ಛವಾಗಿ ಇರುತ್ತದೆ. ಅರಣ್ಯ ಇಲಾಖೆಯ ವನಮಹೋತ್ಸವ ಕಾರ್ಯಕ್ರಮಕ್ಕೆ ಇದು ಮೊದಲ ಕಾರ್ಯಕ್ರಮ. ಹಾಗೆ ಅರಣ್ಯ ಇಲಾಖೆಯನ್ನು ಭಾಗಿಯನ್ನಾಗಿಸಿದ್ದು ತುಂಬಾ ಸಂತೋಷ ತಂದಿದೆ ಎಂದರು. ಅರಣ್ಯ ಇಲಾಖೆಯ ಪೂರ್ಣ ಸಹಕಾರ ನಿಮ್ಮೊಂದಿಗೆ ಇದೆ ಎಂದು ಭರವಸೆ ನೀಡಿದರು.

    ಮುಂದೆ ಓದಿ..; ರೋಹನ್ ಕಾರ್ಪೊರೇಷನ್‌ನಲ್ಲಿ ಪರಿಸರ ದಿನಾಚರಣೆ

    ನಂತರ ಡಾ. ಪ್ರವೀಣ್ ರವರು ಧನ್ಯವಾದ ಸಮರ್ಪಣೆ ಮಾಡಿದರು. ಗಿಡ ನೆಡುವ ಕಾರ್ಯಕ್ರಮದ ನಂತರ ಎಲ್ಲರೂ ತಮ್ಮ ಸ್ವಚ್ಛತಾ ಶ್ರಮದಾನವನ್ನು ಪೂರ್ತಿಗೊಳಿಸಿದರು. ಕಾರ್ಯಕ್ರಮದಲ್ಲಿ ಹಿಂದೂ ಪತ್ರಿಕೆಯ ಅನಿಲ್ ಶಾಸ್ತ್ರೀ , ಸ್ಥಳೀಯ ಕಾರ್ಪೊರೇಟರ್ ಭಾನುಮತಿ , ಸೇವಾ ಟ್ರಸ್ಟ್‌ನ ಸದಸ್ಯರುಗಳಾದ ಡಾ. ಪ್ರವೀಣ್, ದಿನೇಶ್ ಕರ್ಕೇರ, ಪುನೀತ್, ನಿಕೇತನ್ , ಆರ್.ಕೆ.ನಿರಂಜನ್ , ದಿನೇಶ್ ಬೇಕಲ್ ಮತ್ತು ಇತರರು ಭಾಗವಹಿಸಿದ್ದರು. ಡಾ. ಪ್ರವೀಣ್ ಅತಿಥಿಗಳನ್ನು ಸ್ವಾಗತಿಸಿದರು.

    Continue Reading

    DAKSHINA KANNADA

    ಹೆಣ್ಮಕ್ಕಳು ಪದೇ ಪದೇ ತವರು ಮನೆಗೆ ಬರುತ್ತಿದ್ದರೆ ಈ ಸಮಸ್ಯೆಗಳು ಖಂಡಿತ!

    Published

    on

    ಮಂಗಳೂರು: ತಾನು ಹುಟ್ಟಿ ಬೆಳೆದ ತವರನ್ನು ಬಿಟ್ಟು ಗಂಡನ ಮನೆಗೆ ಹೋಗುವಾಗ ಹೆಣ್ಣಿಗೆ ಆಗುವ ನೋವು ಅಷ್ಟಿಷ್ಟಲ್ಲ. ಆಡಿ ಬೆಳೆದ ಮನೆ, ಅಮ್ಮ ಅಪ್ಪನ ಪ್ರೀತಿ, ಅಣ್ಣ-ತಮ್ಮ, ಅಕ್ಕ-ತಂಗಿಯರ ಕಾಳಜಿ ಈ ಎಲ್ಲವನ್ನು ತೊರೆದು ಬೇರೊಂದು ಮನೆಯ ದೀಪವನ್ನು ಹಚ್ಚುವುದು ಹೆಣ್ಣಾದವಳಿಗೆ ಅನಿವಾರ್ಯ. ಆದರೆ ಹೆಣ್ಣಿನ ತವರು ತಂದು ಕೊಡುವ ಬೆಚ್ಚನೆಯ ಅನುಭವವನ್ನು ಗಂಡನ ಮನೆ ತಂದುಕೊಡುವುದಿಲ್ಲ. ತವರಿನಲ್ಲಿ ಸಿಗುವ ಬೆಚ್ಚನೆಯ ಪ್ರೀತಿ, ಕಾಳಜಿ, ಅಕ್ಕರೆ ತುಂಬಿದ ಮಾತಿಗೆ ಸರಿಸಾಟಿಯೇ ಇಲ್ಲ.

    ಆದರೆ ಪದೇ ಪದೇ ತಾಯಿ ಮನೆಗೆ ಬರುವ ಹೆಣ್ಣು ಮಕ್ಕಳಿಗೆ ಈ ಕೆಲವು ವಿಚಾರಗಳು ಗೊತ್ತಿರಲೇಬೇಕು. ಬಿಡುವು ಸಿಕ್ಕಾಗಲೆಲ್ಲಾ ತವರಿಗೆ ಹೋಗುವುದು ಒಳ್ಳೆಯದಲ್ಲ ಎನ್ನುತ್ತದೆ ಶಾಸ್ತ್ರ. ಮನೆಯ ಲಕ್ಷ್ಮಿ ಎನ್ನಲಾಗುವ ಹೆಣ್ಣು ತನ್ನ ತವರಿಗೆ ಬರುವ ಮುನ್ನ ದಿನ ಹಾಗೂ ಸಮಯ ನೋಡಬೇಕೆಂತೆ. ಕೆಟ್ಟ ಸಮಯ ಹಾಗೂ ಕೆಟ್ಟ ದಿನದಲ್ಲಿ ಹೆಣ್ಣು ತನ್ನ ತವರಿಗೆ ಬಂದರೆ ಎರಡು ಮನೆಗೂ ಸಮಸ್ಯೆಗಳಾಗುತ್ತದೆ. ಹುಟ್ಟಿದ ಮನೆ ಹಾಗೂ ಮೆಟ್ಟಿನ ಮನೆಗೂ ಶ್ರೇಯಸಲ್ಲವಂತೆ.

    ಈ ದಿನಗಳಲ್ಲಿ ತವರು ಮನೆಗೆ ಹೋಗಲೇಬೇಡಿ

    • ತಾಯಿ ಮನೆಗೆ ಅಮವಾಸ್ಯೆ ದಿನ, ಅಮವಾಸ್ಯೆಯ ಹಿಂದಿನ ಹಾಗೂ ಮುಂದಿನ ದಿನ ಹೋಗಬಾರದು. ಈ ಮೂರು ದಿನಗಳಲ್ಲಿ ತವರು ಮನೆಯಿಂದ ಗಂಡನ ಮನೆಗೂ ಬರಬಾರದು ಎನ್ನಲಾಗುತ್ತದೆ.
    • ಸೂರ್ಯ ಗ್ರಹಣ ಅಥವಾ ಚಂದ್ರ ಗ್ರಹಣವಿರುವ ದಿನ ತವರು ಮನೆಗೆ ಹೋಗಬಾರದು, ತವರಿನಿಂದ ಗಂಡನ ಮನೆಗೆ ಬರಬಾರದು. ಒಂದು ವೇಳೆ ಈ ಸಮಯದಲ್ಲಿ ಬಂದರೆ ತನ್ನ ಎರಡು ಮನೆಯಲ್ಲಿಯೂ ಆರ್ಥಿಕವಾಗಿ ಸಮಸ್ಯೆಗಳು ಉಂಟಾಗುತ್ತದೆ.
    • ಹೆಣ್ಣು ಯಾವತ್ತಿಗೂ ಗಂಡನ ಜೊತೆ ಜಗಳ ಮಾಡಿಕೊಂಡು ತಾಯಿ ಮನೆಗೆ ಹೋಗಬಾರದು. ಹೆಣ್ಣು ಹೀಗೆ ಮಾಡಿದರೆ ಸಂಸಾರದಲ್ಲಿ ಬಿರುಕು ಮೂಡಿ ಸಮಸ್ಯೆಗೂ ಕಾರಣವಾಗುತ್ತದೆ.
    Continue Reading

    DAKSHINA KANNADA

    ಗಾಂಜಾ ಮಾರಾಟಕ್ಕೆ ಯತ್ನ ಆರೋಪ; ಮಣಿಪಾಲದಲ್ಲಿ ಕೇರಳದ ವಿದ್ಯಾರ್ಥಿ ಬಂಧನ

    Published

    on

    ಉಡುಪಿ: ಉಡುಪಿ ಜಿಲ್ಲೆಯ ಹೆರ್ಗಾ ಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಕೇರಳದ ವಿದ್ಯಾರ್ಥಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

    ಕೇರಳದ ತಿರುವನಂತಪುರ ನಿವಾಸಿ ಸಿದ್ಧಾರ್ಥ್ (22 ವ) ಬಂಧಿತ ಆರೋಪಿ. ಈತನಿಂದ  20,000 ರೂ. ಮೌಲ್ಯದ ಗಾಂಜಾ ಹಾಗೂ 45,000 ರೂ. ಮೌಲ್ಯದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.  ಅಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ಸಿದ್ಧಾರ್ಥ್‌ನನ್ನು ವಶಕ್ಕೆ ಪಡೆದು ಆತನಿಂದ ಗಾಂಜಾ ಹಾಗೂ ಮೊಬೈಲ್ ಫೋನ್ ಜಪ್ತಿ ಮಾಡಿದರು. ಈತ ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ಈ ಗಾಂಜಾವನ್ನು ತನ್ನ ರೂಮಿನಲ್ಲಿ ಶೇಖರಿಸಿ ಇಟ್ಟಿರುವುದು ತನಿಖೆಯಿಂದ ತಿಳಿದು ಬಂದಿದೆ.

    ಮುಂದೆ ಓದಿ..;  ನಟಿ – ಸಂಸದೆ ಕಂಗಾನಾಗೆ ಕಪಾಳ ಮೋಕ್ಷ..! CISF ಸಿಬ್ಬಂದಿ ವಿರುದ್ಧ ಆರೋಪ..!

    ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ನೇತೃತ್ವದಲ್ಲಿ ಪತ್ರಾಂಕಿತ ಅಧಿಕಾರಿ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ಶಂಕರ ಹಾಗೂ ಮಣಿಪಾಲ ಠಾಣಾ ಪಿ.ಎಸ್.ಐ ರಾಘವೇಂದ್ರ ಸಿ., ಎ.ಎಸ್.ಐ. ಗಳಾದ ವಿವೇಕಾನಂದ,  ಶೈಲೇಶ್ ಕುಮಾರ್ ಹಾಗೂ ಸಿಬಂದಿ ಸುಕುಮಾರ, ಅರುಣ ಕುಮಾರ್, ಚನ್ನೇಶ್, ಮಂಜುನಾಥ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

     

    Continue Reading

    LATEST NEWS

    Trending