Connect with us

LATEST NEWS

Karkala : ಕಾರ್ಕಳದ ಪೊಲೀಸ್ ಹೆಡ್‌ ಕಾನ್‌ಸ್ಟೆಬಲ್‌ ಆತ್ಮಹತ್ಯೆ..!

Published

on

ಕಾರ್ಕಳದ ಹೆಡ್‌ಕಾನ್‌ಸ್ಟೆಬಲ್‌ ಎಚ್‌. ಸಿ. ಪ್ರಶಾಂತ್ ಮಿಯ್ಯಾರು (49) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾರ್ಕಳ : ಕಾರ್ಕಳದ ಹೆಡ್‌ಕಾನ್‌ಸ್ಟೆಬಲ್‌ ಎಚ್‌. ಸಿ. ಪ್ರಶಾಂತ್ ಮಿಯ್ಯಾರು (49) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಿಯ್ಯಾರು ಗ್ರಾಮದ ಕಾಜರಬೈಲು ನಿವಾಸಿಯಾಗಿದ್ದ ಅವರು ಅವಿವಾಹಿತರಾಗಿದ್ದು ತಾಯಿಯನ್ನು ಅಗಲಿದ್ದಾರೆ.

ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇದೇ ನೋವಿನಲ್ಲಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯಿಂದ ಪ್ರಶಾಂತ್ ಬಳಲುತ್ತಿದ್ದರು.

ಇತ್ತೀಚೆಗಷ್ಟೆ ಕಾರ್ಕಳ ನಗರ ಠಾಣೆಯಿಂದ ಗ್ರಾಮಾಂತರ ಪೊಲೀಸ್‌ ಠಾಣೆಗೆ ವರ್ಗವಾಗಿ ಪ್ರಸ್ತುತ ರಜೆಯಲ್ಲಿದ್ದರು.

ಮನೆಯ ಹಿಂದೆ ನೇಣು ಹಾಕಿಕೊಂಡಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

LATEST NEWS

ವಾರಣಾಸಿಯಿಂದ ನಾಮ ಪತ್ರ ಸಲ್ಲಿಸಿದ ಪ್ರಧಾನಿ ಮೋದಿ; ಜೊತೆಗಿದ್ದ ಆ ವ್ಯಕ್ತಿ ಯಾರು?

Published

on

ಲಕ್ನೋ : ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿಯಿಂದ ನಾಮಪತ್ರ ಸಲ್ಲಿಸಿದರು. ಅವರು ಮೂರನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.


ಇದಕ್ಕೂ ಮೊದಲು ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ನದಿಗೆ ಗಂಗಾ ಆರತಿ ಮಾಡಿದರು. ನಂತರ ವಾರಣಾಸಿ ಕಾಲಭೈರವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ವಾರಣಾಸಿ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದರು.

ಜೊತೆಗಿದ್ದ ಗಡ್ಡಧಾರಿ ಯಾರು?

ನಾಮಪತ್ರ ಸಲ್ಲಿಕೆ ವೇಳೆ ಮೋದಿ ಪಕ್ಕದಲ್ಲಿ ಒಬ್ಬ ಗಡ್ಡಧಾರಿಯೊಬ್ಬರು ಕಾಣಿಸಿಕೊಂಡರು. ಅವರ ಪಕ್ಕದಲ್ಲಿ ಕುಳಿತವರು ಯಾರು ಎಂಬ ಪ್ರಶ್ನೆ ಉದ್ಭವಿಸಿತ್ತು. ಅವರು ಖ್ಯಾತ ಜ್ಯೋತಿಷಿ ಮತ್ತು ಅಂಕಗಣಿತ ತಜ್ಞ ಗಣೇಶ್ವರ ಶಾಸ್ತ್ರಿ ದ್ರಾವಿಡ್.

ಅಯೋಧ್ಯೆಯ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲೂ ಇವರ ಹೆಸರು ಕೇಳಿ ಬಂದಿತ್ತು. ಅವರೇ ರಾಮ ಮಂದಿರದ ಭೂಮಿ ಪೂಜೆ ಮತ್ತು ಶಿಲಾ ಪೂಜೆಯ ಜೊತೆಗೆ ರಾಮ ಮಂದಿರದ ಭವ್ಯ ಉದ್ಘಾಟನೆಗೆ ಮಂಗಳಕರ ಸಮಯವನ್ನು ನಿರ್ಧರಿಸಿದ್ದರು.

ಇದನ್ನೂ ಓದಿ : ಪರಪ್ಪನ ಅಗ್ರಹಾರದಿಂದ ಹೊರಬಂದ ಹೆಚ್.ಡಿ.ರೇವಣ್ಣ

ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮೂರನೇ ಬಾರಿಗೆ ನಾಮಪತ್ರ ಸಲ್ಲಿಸಿದರು. ಪ್ರಧಾನಿಯವರು ತಮ್ಮ ನಾಮನಿರ್ದೇಶನಕ್ಕೆ ಆಯ್ಕೆ ಮಾಡಿದ ನಾಲ್ವರಲ್ಲಿ ಒಬ್ಬರು ಖ್ಯಾತ ಜ್ಯೋತಿಷಿ ಮತ್ತು ಗಣೇಶ್ವರ ಶಾಸ್ತ್ರಿ ದ್ರಾವಿಡ್ ಕೂಡ ಒಬ್ಬರು. ಪ್ರಧಾನಿ ಮೋದಿಯವರ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಗಣೇಶ್ ಶಾಸ್ತ್ರಿ ದ್ರಾವಿಡ್ ಅವರು ಪ್ರಧಾನಿಯವರ ಪಕ್ಕದಲ್ಲಿಯೇ ಕಾಣಿಸಿಕೊಂಡರು. ಈ ಸಂದರ್ಭ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು.

Continue Reading

LATEST NEWS

ಪರಪ್ಪನ ಅಗ್ರಹಾರದಿಂದ ಹೊರಬಂದ ಹೆಚ್.ಡಿ.ರೇವಣ್ಣ

Published

on

ಬೆಂಗಳೂರು : ಸಂಸದ ಪ್ರಜ್ವಲ್​ ರೇವಣ್ಣ ಲೈಂ*ಗಿಕ ದೌರ್ಜ*ನ್ಯ ನಡೆಸಿದ್ದಾರೆ ಎನ್ನಲಾಗಿರುವ ಅಶ್ಲೀ*ಲ ವಿಡಿಯೋದಲ್ಲಿದ್ದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದ ಮೇಲೆ ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದ ಮಾಜಿ ಸಚಿವ ಹೆಚ್.​ಡಿ.ರೇವಣ್ಣ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಆಗಿದೆ. ಮಂಗಳವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.


ಹೆಚ್.​ಡಿ.ರೇವಣ್ಣ ಅವರು ಬಿಡುಗಡೆಯಾಗುತ್ತಿರುವ ಸುದ್ದಿ ತಿಳಿದಿದ್ದ ಅವರ ಅಭಿಮಾನಿಗಳು ಜೈಲಿನ ಹೊರಗಡೆ ಜಮಾಯಿಸಿದ್ದರು. ರೇವಣ್ಣ ಹೊರಬರುತ್ತಿದ್ದಂತೆ ಜಯ ಘೋಷಣೆ ಹಾಕಿ ಸಂಭ್ರಮಿಸಿದರು. ರೇವಣ್ಣ ಈ ವೇಳೆ ಕಣ್ಣೀರು ಹಾಕಿದರು. ಈ ಸಂದರ್ಭ ಕಾರಾಗೃಹದ ಮುಂದೆ ಸೇರಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್​ ಮಾಡಿದರು.

ನಿವಾಸದತ್ತ ರೇವಣ್ಣ :

ಜೈಲಿಂದ ಹೊರಬಂದು ನೇರವಾಗಿ ದೇವೇಗೌಡರ ನಿವಾಸಕ್ಕೆ ತೆರಳಿದ ರೇವಣ್ಣ ತಂದೆ-ತಾಯಿ ಆಶೀರ್ವಾದ ಪಡೆದರು. ಮನೆಗೆ ಬಂದ ಅವರನ್ನು ಆರತಿ ಬೆಳಗಿ ಕುಟುಂಬ ಸದಸ್ಯರು ಸ್ವಾಗತಿಸಿದರು. ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುದೀರ್ಘ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ಕೋರ್ಟ್ ಸೋಮವಾರ ಸಂಜೆ ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪ್ರಕ್ರಿಯೆಗಳೆಲ್ಲವೂ ಮುಗಿದು ಮಂಗಳವಾರ ಜೈಲಿನಿಂದ ಹೊರ ಬಂದರು.

ಇದನ್ನೂ ಓದಿ : ದರ್ಶನ್ ಸಿನಿಮಾಗೆ ಸಹಿ ಹಾಕಲು ಬಂದಿದ್ದರು ಪವಿತ್ರಾ ಜಯರಾಮ್; ಅಪಘಾ*ತದಲ್ಲಿ ಮೃ*ತಪಟ್ಟಿಲ್ಲ ಅಂದ್ರು ಸಹನಟ

ಮೇ 4 ರಂದು ರೇವಣ್ಣ ಅವರನ್ನು ಎಸ್ ಐ ಟಿ ಅಧಿಕಾರಿಗಳು ದೇಔಏಗೌಡರ ನಿವಾಸದಲ್ಲಿಯೇ ಬಂಧಿಸಿದ್ದರು. ನಾಲ್ಕು ದಿನಗಳ ಕಾಲ ಎಸ್ ಐ ಟಿ ವಶಕ್ಕೆ ನೀಡಿದ್ದ ಕೋರ್ಟ್, ಬಳಿಕ ನ್ಯಾಯಾಂಗ ಬಂಧನಕ್ಕೊಪ್ಪಿಸಿತ್ತು. 12 ದಿನಗಳ ಬಳಿಕ ರೇವಣ್ಣ ಸೆರೆಮನೆಯಿಂದ ಹೊರಬಂದಿದ್ದಾರೆ.

Continue Reading

FILM

ದರ್ಶನ್ ಸಿನಿಮಾಗೆ ಸಹಿ ಹಾಕಲು ಬಂದಿದ್ದರು ಪವಿತ್ರಾ ಜಯರಾಮ್; ಅಪಘಾ*ತದಲ್ಲಿ ಮೃ*ತಪಟ್ಟಿಲ್ಲ ಅಂದ್ರು ಸಹನಟ

Published

on

‘ತ್ರಿನಯನಿ’ ಖ್ಯಾತಿಯ ಖ್ಯಾತ ನಟಿ ಪವಿತ್ರಾ ಜಯರಾಮ್ ಅಪ*ಘಾತದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನಿಂದ ಹೈದರಾಬಾದ್ ಗೆ ಹೊರಟಿದ್ದರು. ಈ ವೇಳೆ ಆಂಧ್ರ ಪ್ರದೇಶದ ಮೆಹಬೂಬ ನಗರದ ಬಳಿ ಭೀ*ಕರ ರಸ್ತೆ ಅಪ*ಘಾತದಲ್ಲಿ ಸ್ಥಳದಲ್ಲಿಯೇ ಮೃ*ತಪಟ್ಟಿದ್ದಾರೆ. ಪವಿತ್ರಾ ಮೂಲತಃ ಕರ್ನಾಟಕದವರು. ಮಂಡ್ಯ ತಾಲೂಕಿನ ಹನಕೆರೆಯವರು.


ಕಾರಿನಲ್ಲಿ ಪ್ರಯಾಣ ಮಾಡುವಾಗ ಅವರ ಜೊತೆ ಸಹನಟ ಚಂದ್ರಕಾಂತ್ ಕೂಡ ಇದ್ದರು. ಅವರು ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.

ದರ್ಶನ್ ಸಿನಿಮಾಕ್ಕೆ ಸಹಿ :

ಕಾರಿನಲ್ಲಿ ಬಂದಿದ್ದ ನಟಿ ಪವಿತ್ರಾ, ಅವರ ಜೊತೆಗೆ ಸಹನಟ ಚಂದ್ರಕಾಂತ್ ಕೂಡ ಇದ್ದರು.  ಸೋದರ ಸಂಬಂಧಿಯೂ ಇದ್ದರು. ಅವರು ಬೆಂಗಳೂರಿಗೆ ಆಗಮಿಸಿ ವಾಪಾಸಾಗುತ್ತಿದ್ದರು. ಬೆಂಗಳೂರಿಗೆ ಬಂದ ಕಾರಣ ಬಿಚ್ಚಿಟ್ಟ ಚಂದ್ರಕಾಂತ್, ‘ದರ್ಶನ್ ಸರ್ ಸಿನಿಮಾಗೆ ಆಫರ್ ಬಂದಿತ್ತು. ಅದಕ್ಕೆ ಸಹಿ ಹಾಕೋಕೆ ಬೆಂಗಳೂರಿಗೆ ಬಂದಿದ್ದೆವು. ಅಗ್ರಿಮೆಂಟ್​ಗೆ ಸಹಿ ಹಾಕಬೇಕಿತ್ತು. ಹೀಗಾಗಿ ಬೆಂಗಳೂರಿಗೆ ಬಂದಿದ್ದೆವು. ಪವಿತ್ರಾ ಅವರಿಗೆ ಜೆಮಿನಿ ಟಿವಿಯಿಂದ ಆಫರ್ ಬಂತು. ಹೀಗಾಗಿ, ಬೆಂಗಳೂರಿನಿಂದ ಹೈದರಾಬಾದ್​ಗೆ ಹೊರಟಿದ್ದೆವು’ ಎಂದಿದ್ದಾರೆ.

ಅಪಘಾ*ತ ಹೇಗಾಯ್ತು?

ಪವಿತ್ರಾ ಕಾರು ಅಪ*ಘಾತದಿಂದ ಮೃ*ತಪಟ್ಟಿಲ್ಲ ಎಂದು ಚಂದ್ರಕಾಂತ್ ಹೇಳಿದ್ದಾರೆ. ಘಟನೆ ಬಗ್ಗೆ ವಿವರಿಸಿದ ಚಂದ್ರಕಾಂತ್, ಕಾರಿನಲ್ಲಿ ಡ್ರೈವರ್ ಸೇರಿ ನಾವು 4 ಮಂದಿ ಇದ್ದೆವು. ನಾವು ಬೆಂಗಳೂರಿನಿಂದ ಹೈದರಾಬಾದ್ ಗೆ ಟ್ರಾವೆಲ್ ಮಾಡುತ್ತಿದ್ದೆವು. ಮಧ್ಯಾಹ್ನ 2:30ಕ್ಕೆ ಬೆಂಗಳೂರಿನಿಂದ ಹೊರಟೆವು. ಸಂಜೆ 6:30ಕ್ಕೆ ಮಳೆ ಶುರುವಾಯ್ತು. ಈ ವೇಳೆ ಟ್ರಾಫಿಕ್ ಜಾಮ್ ಆಯಿತು. ಮೂರು ಗಂಟೆ ಜಾಮ್ ಆಗಿತ್ತು. 80 ಫೀಟ್ ರೋಡ್ ನಲ್ಲಿ ಸಾಗುತ್ತಿದ್ದಂತೆ ಕೆಎಸ್ಆರ್ ಟಿಸಿ ಬಸ್ ಒಂದು ಓವರ್ ಟೇಕ್ ಮಾಡುವಾಗ ಕಾರಿಗೆ ಟಚ್ ಮಾಡಿದೆ.

ಡ್ರೈವರ್ ಈ ವೇಳೆ ಗಾಬರಿಗೊಂಡು ಸ್ಟೇರಿಂಗ್ ನ ಉಲ್ಟಾ ತಿರುಗಿಸಿದ್ದಾನೆ. ಇದ್ರಿಂದ ಕಾರು ಪಕ್ಕದ ರಸ್ತೆಗೆ ಹೋಗಿದೆ. ಎದುರಿನಿಂದ ಬಸ್ ಬರುತ್ತಿತ್ತು. ಆ ಬಸ್ ಕೂಡ ಡಿ*ಕ್ಕಿ ಹೊಡೆದಿದೆ. ಪರಿಣಾಮ ಬ್ಲಾಸ್ಟ್ ಆಯ್ತು ಎಂದು ನಟ ಚಂದ್ರಕಾಂತ್ ವಿವರಿಸಿದ್ದಾರೆ.

ಇದನ್ನೂ ಓದಿ : PHOTOS : ಆಸ್ಟ್ರೇಲಿಯಾದಲ್ಲಿ ರಶ್ಮಿಕಾ ಮಂದಣ್ಣ; ಹಾಟ್ ಫೋಟೋಗಳು ವೈರಲ್

ಪೆಟ್ಟಾಗಿ ಸ*ತ್ತಿಲ್ಲ:

ಡ್ರೈವರ್ ಹಾಗೂ ಪವಿತ್ರಾ ಅಕ್ಕನ ಮಗಳು ಮುಂದೆ ಇದ್ದರು. ಅವರಿಗೆ ಏನು ಆಗಿಲ್ಲ. ನನ್ನ ಕೈಗೆ, ತಲೆಗೆ ಪೆಟ್ಟಾಗಿತ್ತು. ಇದನ್ನು ನೋಡಿ ಪವಿತ್ರಾ ಶಾಕ್ ಆದರು. ಜೋರಾಗಿ ಉಸಿರು ಎಳೆದ್ರು. ಇದು ಸಡನ್ ಸ್ಟ್ರೋಕ್ ಎಂದು ವೈದ್ಯರು ಹೇಳಿದ್ದಾರೆ. ಆಸ್ಪತ್ರೆಗೆ ಸೇರಿಸಲು ಸರಿಯಾದ ಸಮಯಕ್ಕೆ ಆ್ಯಂ*ಬುಲೆನ್ಸ್ ಕೂಡ ಸಿಗಲಿಲ್ಲ. 1 ಗಂಟೆಗೆ ಆಸ್ಪತ್ರೆಗೆ ಕರೆದುಕೊಂಡು ಹೊದರು. 3 ಗಂಟೆಗೆ ಎಚ್ಚರವಾಯಿತು ಎಂದು ಚಂದ್ರಕಾಂತ್ ವಿವರಿಸಿದ್ದಾರೆ.

ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾ ರಮಣ ಕನ್ನಡದ ಧಾರಾವಾಹಿಗಳಲ್ಲಿ ಪಾತ್ರವಾಗಿದ್ದ ನಟಿ ಪವಿತ್ರಾ ಜಯರಾಮ್‌, ತೆಲುಗು ‘ತ್ರಿನಯನಿ’ ಸೀರಿಯಲ್‌ನ ತಿಲೋತ್ತಮ ಪಾತ್ರದ ಮೂಲಕ ಜನಮನ ಗೆದ್ದಿದ್ದರು.

Continue Reading

LATEST NEWS

Trending