Connect with us

LATEST NEWS

ಕಾರ್ಕಳ : ಮೀನು ಸಾಗಿಸುತ್ತಿದ್ದ ಲಾರಿ ಮರಕ್ಕೆ ಡಿಕ್ಕಿ – ಇಬ್ಬರು ಗಂಭೀರ..!

Published

on

ಮೀನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಘಟನೆ ನಲ್ಲೂರು ಪರಪ್ಪಾಡಿಯಲ್ಲಿ ಜೂ.3ರಂದು ನಡೆದಿದ್ದು, ಈ ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. 

ಕಾರ್ಕಳ: ಮೀನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಘಟನೆ ನಲ್ಲೂರು ಪರಪ್ಪಾಡಿಯಲ್ಲಿ ಜೂ.3ರಂದು ನಡೆದಿದ್ದು, ಈ ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಮಲ್ಪೆ ಕಡೆಯಿಂದ ಬೆಂಗಳೂರಿಗೆ ಮೀನು ಸಾಗಿಸುತ್ತಿದ್ದ ಲಾರಿ ಪಾಜೆಗುಡ್ಡೆ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ.

ಬಿದ್ದ ರಭಸಕ್ಕೆ ಲಾರಿಯಲ್ಲಿದ್ದ ಮೀನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದೆ.

ಈ ವಾಹನದಲ್ಲಿ ಚಾಲಕ ಸೇರಿದಂತೆ ಮೂವರಿದ್ದು, ಅವರಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಮೂವರಲ್ಲಿ ಓರ್ವನನ್ನು ಶೃಂಗೇರಿ ಮೂಲದ ನಯಾಜ್ ಅಹಮದ್ ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಗ್ರಾಮ ಪಂಚಾಯತ್ ನ ಸದಸ್ಯ ಸುಮಿತ್‌ ನಲ್ಲೂರು ಸೇರಿದಂತೆ ಸ್ಥಳೀಯರು ಕಾರ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ.

 

Click to comment

Leave a Reply

Your email address will not be published. Required fields are marked *

LATEST NEWS

ಹೈಟೆನ್ಶನ್‌ ವಯರ್‌ನಿಂದ ಏಣಿಗೆ ವಿದ್ಯುತ್ ಪ್ರವಹಿಸಿ ಇಲೆಕ್ಟ್ರಿಷಿಯನ್ ಸಾ*ವು!

Published

on

ಮಂಗಳೂರು: ಮಂಗಳೂರು ನಗರದ ಕಾವೂರು ಪೆಟ್ರೋಲ್ ಪಂಪ್‌ನಲ್ಲಿ ಏಣಿಯೊಂದು ಹೈಟೆನ್ಷನ್ ತಂತಿಗೆ ತಗುಲಿದ ಪರಿಣಾಮ ಗಂಭೀರ ಗಾಯಗೊಂಡ ವ್ಯಕ್ತಿಯೊಬ್ಬರು ಮೃ*ತಪಟ್ಟ ಘಟನೆ ನಡೆದಿದೆ.

ಉತ್ತರ ಪ್ರದೇಶದ ವಾರಣಾಸಿ ನಿವಾಸಿ, ಕಾವೂರು ಪೆಟ್ರೋಲ್ ಪಂಪ್‌ವೊಂದರ ಸಿಬ್ಬಂದಿ ಸಂದೀಪ್ ಕುಮಾರ್ ವರ್ಮಾ (45) ಮೃ*ತಪಟ್ಟವರು.  ಕಾವೂರು ಪೆಟ್ರೋಲ್ ಪಂಪ್‌ನಲ್ಲಿ ಇಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಇವರು ರವಿವಾರ(ಎ.28) ಕೆಲಸ ನಿಮಿತ್ತ ಏಣಿ ಕೊಂಡೊಯ್ದು ವಿದ್ಯುತ್ ಕಂಬಕ್ಕೆ ಒರಗಿಸಿಟ್ಟಿದ್ದರು. ಈ ಸಂದರ್ಭ ಹೈಟೆನ್ಷನ್ ವಯರ್‌ನಿಂದ ವಿದ್ಯುತ್ ಪ್ರವಹಿಸಿ ಸಂದೀಪ್ ಕುಮಾರ್ ಕೆಳಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ  ಮೃ*ತಪಟ್ಟಿದ್ದಾರೆ.

ಮುಂದೆ ಓದಿ..; 2ನೇ ಮಹಡಿಯ ರೂಫ್ ಮೇಲೆ ಬಿದ್ದ 8 ತಿಂಗಳ ಮಗು; ಮಗುವನ್ನು ರಕ್ಷಿಸಿದ ರೋಚಕ ಕ್ಷಣಗಳ ವೀಡಿಯೋ ವೈರಲ್

ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

ಪುತ್ತೂರು: ಗ್ಯಾಸ್ ಪೂರೈಕೆ ಮಾಡುತ್ತಿದ್ದ ವ್ಯಕ್ತಿ ಆತ್ಮ*ಹತ್ಯೆ

Published

on

ಪುತ್ತೂರು: ಇಲ್ಲಿನ ಬನ್ನೂರು ಮೇಲ್ಮಜಲಿನಲ್ಲಿ ಸೀತಾರಮಾ ಶೆಟ್ಟಿ(45 ವ) ಎಮಬವರು ನೇಣು ಬಿಗಿದು ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಎ.28ರಂದು ನಡೆದಿದೆ.

suicide

ಮುಂದೆ ಓದಿ..; ನೇಣಿಗೆ ಶರಣಾದ ಇಬ್ಬರು ಪುಟ್ಟ ಮಕ್ಕಳ ತಂದೆ

ಖಾಸಗಿ ಕಂಪೆನಿಯೊಂದರಲ್ಲಿ ಕಳೆದ ಹಲವಾರು ವರ್ಷಗಳಿಂದ ಕೆಲವ ನಿರ್ವಹಿಸುತ್ತಿದ್ದ ಇವರು ಮನೆ ಮನೆಗೆ ಗ್ಯಾಸ್ ಪೂರೈಕೆ ಮಾಡುತ್ತಿದ್ದರು. ಭಾನುವಾರ ಮನೆಯ ಒಳಗಡೆ ಫ್ಯಾನ್‌ವೊಂದಕ್ಕೆ ನೇಣು ಬಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಆತ್ಮ*ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮಂಗಳೂರು ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Continue Reading

FILM

ದುಬಾರಿ ಕಾರು ಖರೀದಿಸಿದ ಸಂಭ್ರಮದಲ್ಲಿ ಸಿಂಹಪ್ರಿಯಾ; ಬೆಲೆ ಎಷ್ಟು ಗೊತ್ತಾ?

Published

on

ಬೆಂಗಳೂರು : ಸೆಲೆಬ್ರಿಟಿಗಳಿಗೆ ಕಾರಿನ ಕ್ರೇಝ್ ಹೆಚ್ಚಾಗಿರುತ್ತದೆ. ದುಬಾರಿ ಬೆಲೆಯ ಕಾರುಗಳನ್ನು ಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಾರು ಖರೀದಿಸಿದ್ದ ಸುದ್ದಿ ವೈರಲ್ ಆಗಿತ್ತು. ಅವರು ಆಡಿ ಕ್ಯೂ7 ಮಾದರಿಯ ಗ್ರೇ ಬಣ್ಣದ ಕಾರನ್ನು ಖರೀದಿಸಿದ್ದರು. ಅವರ ಐಷಾರಾಮಿ ಕಾರಿನ ಆನ್ ರೋಡ್ ಬೆಲೆಯು ರೂ.1.10 ಕೋಟಿಯಾಗಿದೆ. ಇದೀಗ ಹರಿಪ್ರಿಯಾ – ವಸಿಷ್ಠ ಸಿಂಹ ಹೊಸ ಕಾರೊಂದನ್ನು ಖರೀದಿಸಿದ್ದಾರೆ.

ಬೆಲೆ ಎಷ್ಟು? :


ಕಾರನ್ನು ಕೊಳ್ಳುವ ಮೂಲಕ ವಸಿಷ್ಠ ಸಿಂಹ ತಮ್ಮ ಕನಸೊಂದನ್ನು ನನಸಾಗಿಸಿಕೊಂಡಿದ್ದಾರೆ. ಮರ್ಸಿಡಿಸ್ ಬೆಂಝ್ ನಿರ್ಮಾಣದ ಜಿಎಲ್ಇ 450ಡಿ ಕಾರನ್ನು ಅವರು ಖರೀದಿಸಿದ್ದಾರೆ. ಮರ್ಸಿಡಿಸ್ ಬೆಂಝ್ ಜಿಎಲ್ಇ 450ಡಿ ಆವೃತ್ತಿಯು ಸದ್ಯ ಬೆಂಗಳೂರಿನಲ್ಲಿ ಆನ್ ರೋಡ್ ಪ್ರಕಾರ ರೂ. 1.44 ಕೋಟಿ ಬೆಲೆ ಹೊಂದಿದೆ.

ಇದನ್ನೂ ಓದಿ : ‘ಮಹಾನಟಿ’ ರಿಯಾಲಿಟಿ ಶೋ ವಿರುದ್ಧ ಬಿತ್ತು ಕೇಸ್; ಯಾಕೆ ಗೊತ್ತಾ!?

ಹೊಸ ಕಾರು ಖರೀದಿ ಮಾಡಿದ ವಿಡಿಯೋವನ್ನು ವಸಿಷ್ಠ ಸಿಂಹ ತಮ್ಮ ಇನ್​ಸ್ಟಾಗ್ರಾಮ್ ​ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಸ್ಟಾರ್ ​ದಂಪತಿ ಕಾರು ಶೋ ರೂಮ್​ಗೆ ಎಂಟ್ರಿ ಕೊಡುವುದರೊಂದಿಗೆ ವೀಡಿಯೋ ಆರಂಭಗೊಳ್ಳುತ್ತದೆ.


ಬಳಿಕ ಹೊಸ ದುಬಾರಿ ಕಾರಿನ ವಿತರಣೆಯನ್ನು ಪಡೆದುಕೊಂಡಿದ್ದಾರೆ. ಹೊಸ ಕಾರು ಕೊಂಡ ತಮ್ಮ ನೆಚ್ಚಿನ ನಟ – ನಟಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಸದ್ಯ ಸಿಂಹಪ್ರಿಯಾ ಖರೀದಿಸಿದ ಹೊಸ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Continue Reading

LATEST NEWS

Trending