Connect with us

    DAKSHINA KANNADA

    ಪುತ್ತೂರು: 40 ವರ್ಷ ಕಳೆದರೂ ಈಡೇರದ 1ಕಿ.ಮೀ ರಸ್ತೆಯ ಕನಸು, ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ

    Published

    on

    ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೇದಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟತ್ತಾರು – ನಿಡ್ಯಾಣ ಸಂಪರ್ಕಿಸುವ ಕೇವಲ 1 ಕಿಲೋಮೀಟರ್ ದೂರದ ರಸ್ತೆಯನ್ನು ದುರಸ್ತಿಪಡಿಸುವಂತೆ ಕಳೆದ 40 ವರ್ಷಗಳಿಂದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಕೊಟ್ಟು ಈ ಭಾಗದ ಜನ ರೋಸಿ ಹೋಗಿದ್ದಾರೆ.

    ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಮನೆಗಳನ್ನು ಹೊಂದಿದೆ. ಗ್ರಾಮಸ್ಥರು ಮಳೆಗಾಲದಲ್ಲಿ ಕೆಸರು, ಬೇಸಿಗೆಯಲ್ಲಿ ಧೂಳಿನಲ್ಲೇ ಬದುಕು ಸಾಗಿಸಬೇಕಾದ ಪರಿಸ್ಥಿತಿಯಿದೆ. ಕೇವಲ ಒಂದು ಮನೆ ಇದ್ದಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿಕೊಡುವ ಸ್ಥಳೀಯ ಪಂಚಾಯತ್ ಈ ಭಾಗದ ಜನರ ಸಮಸ್ಯೆಗೆ ಈವರೆಗೂ ಸ್ಪಂದಿಸಿಲ್ಲ ಎನ್ನುವ ಆರೋಪ ಸ್ಥಳೀಯ ನಿವಾಸಿಗಳದ್ದಾಗಿದೆ.

    ಪ್ರತಿ ಸಲವೂ ಗ್ರಾಮಪಂಚಾಯತ್, ಜಿಲ್ಲಾ ಪಂಚಾಯತ್, ಶಾಸಕರ‌ ಕಚೇರಿ ಸೇರಿದಂತೆ ಎಲ್ಲ ಕಡೆಗೂ ಮನವಿ ಸಲ್ಲಿಸಿರುವ ಸ್ಥಳೀಯರಿಗೆ ಶೂನ್ಯ ಫಲಿತಾಂಶ ದೊರೆತಿದೆ. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಬೇಸತ್ತ ಈ ಗ್ರಾಮದ ಜನ ಇದೀಗ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

    ಕೇವಲ ಒಂದು ಕಿಲೋಮೀಟರ್ ರಸ್ತೆಯ ದುರಸ್ತಿ ಬಗ್ಗೆ ಬೇಡಿಕೆಯಿಟ್ಟ ಗ್ರಾಮಸ್ಥರ ಬೇಡಿಕೆ ಕಡೆಗಣಿಸಲು ಕಾರಣವೇನು ಅನ್ನೋದು ಯಾರಿಗೂ ತಿಳಿದಿಲ್ಲ. ದಿನಕ್ಕೆ ಒಂದು ಮೀಟರ್ ಡಾಂಬರೀಕರಣ ಮಾಡಿದ್ದರೂ, ಮುರ್ನಾಲ್ಕು ವರ್ಷದಲ್ಲಿ ಮುಗಿದು ಹೋಗುತ್ತಿದ್ದ ಕಾಮಗಾರಿಗೆ ಇಷ್ಟೊಂದು ಮೀನಮೇಷ ಎಣಿಸಲು ಕಾರಣವೇನು ಅನ್ನೋದನ್ನು ಸಂಬಂಧಪಟ್ಟವರೇ ತಿಳಿಸಬೇಕಿದೆ.

    DAKSHINA KANNADA

    ಜೂ. 9 ರಂದು ಸುರತ್ಕಲ್ ಬಂಟರ ಸಂಘದ ಮಹಾಸಭೆ; ಸಹಾಯ ಹಸ್ತ, ಅಭಿನಂದನೆ, ವಿದ್ಯಾರ್ಥಿ ವೇತನ ವಿತರಣೆ

    Published

    on

    ಸುರತ್ಕಲ್ : ಬಂಟರ ಸಂಘ ಸುರತ್ಕಲ್ ಇದರ 24 ನೇ ವಾರ್ಷಿಕ ಮಹಾಸಭೆ, ಅಭಿನಂದನೆ, ಸಹಾಯಹಸ್ತ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಜೂನ್ 9 ರಂದು ಭಾನುವಾರ ಸಂಜೆ 5 ಗಂಟೆಗೆ ಬಂಟರ ಭವನದಲ್ಲಿ ನಡೆಯಲಿದೆ.

    ಬೆಳಿಗ್ಗೆ 9.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, 10.30 ಕ್ಕೆ ವಾರ್ಷಿಕ ಮಹಾಸಭೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಸುರತ್ಕಲ್ ಬಂಟರ ಸಂಘದ ಗ್ರಾಮವಾರು ಸಾಂಸ್ಖೃತಿಕ ಸ್ಪರ್ಧೆ ನಡೆಯಲಿದೆ. ಸಂಜೆ 5 ಗಂಟೆಗೆ ಅಭಿನಂದನಾ ಸಮಾರಂಭ, ಸಹಾಯಹಸ್ತ, ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ.

    ಸಮಾರಂಭವನ್ನು ಮುಂಬೈ ವಿ.ಕೆ. ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಕರುಣಾಕರ ಶೆಟ್ಟಿ ಮಧ್ಯಗುತ್ತು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಾ.ವೈ. ಭರತ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಬೆಂಗಳೂರು ಯುವ ಬಂಟರ ಸಂಘದ ಅಧ್ಯಕ್ಷ ರವೀಂದ್ರನಾಥ ಮಾರ್ಲ ಭಾಗವಹಿಸಲಿದ್ದಾರೆ.

    ಇದನ್ನೂ ಓದಿ : ಕಳ್ಳತನಕ್ಕಾಗಿ ಮನೆಗೆ ನುಗ್ಗಿ ಗಾಢ ನಿದ್ರೆಗೆ ಜಾರಿದ ಕಳ್ಳ..!

    ಸಮಾರಂಭದಲ್ಲಿ ಅಭಿನಂದನೆ, ನಿರಂತರ ವಿದ್ಯಾರ್ಥಿ ವಿತರಣೆ, ಸಹಾಯಹಸ್ತ, ವಿದ್ಯಾರ್ಥಿ ವೇತನ ವಿತರಣೆ, ನೂತನ ಮನೆಯ ಕೀ ಹಸ್ತಾಂತರ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Continue Reading

    DAKSHINA KANNADA

    WATCH : ಕಾಲೇಜು ಹಾಗೂ ಖಾಸಗಿ ಬಸ್ಸುಗಳೆರಡರ ನಡುವೆ ಅಪಘಾ*ತ; ಅಪಘಾತ*ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    Published

    on

    ದೇರಳಕಟ್ಟೆ : ಕಾಲೇಜು ಹಾಗೂ ಖಾಸಗಿ ಬಸ್ಸುಗಳೆರಡರ ನಡುವೆ ಅಪಘಾ*ತ ಸಂಭವಿಸಿದ ಘಟನೆ ನಾಟೆಕಲ್ ಉರುಮಣೆ ಸಮೀಪ ಸೋಮವಾರ(ಜೂ.3) ಬೆಳಿಗ್ಗೆ ಸಂಭವಿಸಿದೆ.  ಕಾಲೇಜು ಬಸ್ ಹಾಗೂ ಮಂಗಳೂರಿನಿಂದ ಮುಡಿಪು ಮಾರ್ಗವಾಗಿ ತೆರಳುತ್ತಿದ್ದ ಖಾಸಗಿ ಬಸ್ಸುಗಳ ಮಧ್ಯೆ ಅಪಘಾ*ತ ಸಂಭವಿಸಿದೆ.

    ಇದನ್ನೂ ಓದಿ : ಜೈಲಿನಲ್ಲೇ ಮುಂಬೈ ಸರಣಿ ಬಾಂಬ್ ಸ್ಫೋ*ಟದ ಆರೋಪಿಯ ಹ*ತ್ಯೆ

    ಘಟನೆಯಲ್ಲಿ ಖಾಸಗಿ ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಸಣ್ಣಪುಟ್ಟ ಗಾಯಗೊಂಡಿದ್ದು, ಉಳಿದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ‌. ಅಪಘಾ*ತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    Continue Reading

    BANTWAL

    ಬೆಳ್ತಂಗಡಿ:ಉಪ ತಹಶೀಲ್ದಾರ್ ಸುನಿಲ್ ಹೃದಯಾಘಾತದಿಂದ ನಿಧನ

    Published

    on

    ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕಂದಾಯ ಇಲಾಖೆಯಲ್ಲಿ ಗ್ರಾಮ ಕರಣಿಕರಾಗಿ ಸೇವೆ ಸಲ್ಲಿಸಿ, ಉಪ ತಹಶೀಲ್ದಾರ್ ಆಗಿ ಪದೋನ್ನತಿ ಹೊಂದಿದ್ದ ಸುನಿಲ್ (42ವ) ಹೃದಯಾಘಾತದಿಂದ ನಿಧನರಾದ ಘಟನೆ ವರದಿಯಾಗಿದೆ.

    ಬೆಳ್ತಂಗಡಿ ಆಡಳಿತ ಕಂದಾಯ ಇಲಾಖೆಯಲ್ಲಿ ಗ್ರಾಮ ಕಾರಣಿಕರಾಗಿ ಬಳಿಕ ಆಡಳಿತ ಸೌಧದಲ್ಲಿ ಭೂಮಿ ಶಾಖೆಯ ನಿರ್ವಹಖರಾಗಿ ಸೇವೆ ಸಲ್ಲಿಸಿದ ಇವರು ಬಳಿಕ ಪದೋನ್ನತ್ತಿ ಹೊಂದಿ ಉಪ ತಹಸಿಲ್ದಾರ್ ಆಗಿ ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

    ಇದನ್ನು ಓದಿ: ‘ಹೊಡಿಬೇಡಿ ಪ್ಲೀಸ್’ ಎಂದು ಅಂಗಲಾಚಿದ ಕೆಜಿಎಫ್ ನಟಿ; ಕುಡಿದ ಮತ್ತಿನಲ್ಲಿ ನಡೀತಾ ಗಲಾಟೆ? ವೀಡಿಯೋ ವೈರಲ್

    Continue Reading

    LATEST NEWS

    Trending