Connect with us

    LATEST NEWS

    ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಕೋಟ ಮೂಲದ ವ್ಯಕ್ತಿ ಮೆದುಳು ನಿಷ್ಕ್ರಿಯಗೊಂಡು ನಿಧನ

    Published

    on

    ಕೋಟ: ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಕೋಟ ಮೂಲದ ವ್ಯಕ್ತಿಯೊಬ್ಬರು ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟ ಘಟನೆ ನಡೆದಿದೆ.

    ಕೋಟ ಸಮೀಪ ಕೋಟ ತಟ್ಟು ಪಡುಕರೆ ನಿವಾಸಿ ಮುಹಮ್ಮದ್‌ (45) ಮೃತ ದುರ್ದೈವಿ.


    ಕತಾರ್‌ನ ಸನಯ್ಯ ಎಂಬಲ್ಲಿ 14 ವರ್ಷಗಳಿಂದ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಅವರು ನಾಲ್ಕು ದಿನಗಳ ಹಿಂದೆ ಕೆಲಸ ನಿರ್ವಹಿಸುತಿದ್ದಾಗ ಕುಸಿದು ಬಿದ್ದು, ಮಿದುಳು ನಿಷ್ಕ್ರಿಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು.

    ಜ.2 ರಂದು ಊರಿಗೆ ಬರಲು ಸಿದ್ದತೆ ನಡೆಸುತ್ತಿದ್ದರು. ದುರಾದೃಷ್ಟವಶಾತ್ ಇವರು ಚಿಕಿತ್ಸೆಗೆ ಫ‌ಲಕಾರಿಯಾಗದೆ ಅದಕ್ಕೂ ಮೊದಲೇ ಇಹಲೋಕ ತ್ಯಜಿಸಿದ್ದಾರೆ.

    ಅವರು ಕೋಟತಟ್ಟು ಪಡುಕರೆ ಹಿದಾಯತುಲ್‌ ಇಸ್ಲಾಂ ಮದ್ರಸ ಕಾರ್ಯದರ್ಶಿಯಾಗಿ, ಕೆಸಿಎಫ್ ಕತಾರ್‌ ರಾಷ್ಟ್ರೀಯ ಸಮಿತಿಯ ಅಝೀಝಿಯಾ ಝೇನ್‌ ಸನಯ್ನಾ ಯುನಿಟ್‌ ಅಧ್ಯಕ್ಷರಾಗಿದ್ದರು.

    ಮೃತರು ತಾಯಿ, ಪತ್ನಿಯನ್ನು ಅಗಲಿದ್ದಾರೆ.

    LATEST NEWS

    ಲೋಕಸಭಾ ಚುನಾವಣೆ: ರಾಷ್ಟ್ರಪತಿ, ಕಾಂಗ್ರೆಸ್ ಮುಖಂಡರಿಂದ ಮತದಾನ.. ಮತಕ್ಕಾಗಿ ಸರ್ಟಿಫಿಕೇಟ್ ಪಡೆದ ವಿದೇಶಾಂಗ ಸಚಿವ

    Published

    on

    ದೆಹಲಿ: ಇಂದು ಲೋಕಸಭಾ 6ನೇ ಹಂತದ ಚುನಾವಣೆ ನಡೆಯುತ್ತಿದ್ದು, ರಾಷ್ಟ್ರಪತಿ ಸೇರಿದಂತೆ ಅನೇಕ ಗಣ್ಯರು ಮತ ಚಲಾವಣೆ ಮಾಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್, ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಸೇರಿದಂತೆ ಹಲವು ಗಣ್ಯರುಗಳು ಮತ ಚಲಾಯಿಸಿದ್ದಾರೆ.

    6th lokasabha election

    ದಿಲ್ಲಿಯ ಗಣ್ಯ ಮತಗಟ್ಟೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ ಚಲಾವಣೆ ಮಾಡಿದರು. ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇನ್ನೊಂದು ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದರು.

    Read More..; ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬಾಲಿವುಡ್‌ನಿಂದ ಹೊರಬರುತ್ತೇನೆ: ಕಂಗನಾ ರಣಾವತ್

    ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಹಾಗೂ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಹಕ್ಕನ್ನು ಚಲಾಯಿಸಿದರು.  ಇನ್ನೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ ಚಲಾಯಿಸಿದ ಮೊದಲ ಪುರುಷ ಮತದಾರರಾಗಿದ್ದು ಪ್ರಮಾಣ ಪತ್ರವನ್ನು ಕೂಡಾ ಪಡೆದುಕೊಂಡಿದ್ದಾರೆ. ಇನ್ನು ಪಮಾಣ ಪತ್ರದ ಜೊತೆ ಫೊಟೊ ತೆಗಿಸಿಕೊಂಡು ತನ್ನ X ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    Continue Reading

    DAKSHINA KANNADA

    ಹರೀಶ್ ಪೂಂಜಾ ಪ್ರಕರಣ : ಶಾಸಕ ಅಂತ ಸುಮ್ಮನೆ ಬಿಡಲು ಆಗುತ್ತದೆಯಾ? : ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

    Published

    on

    ಮಂಗಳೂರು : ದ.ಕ ಜಿಲ್ಲೆಗೆ ಆಗಮಿಸಿರುವ ಸಿಎಂ ಸಿದ್ಧರಾಮಯ್ಯ ವಿಮಾನ ನಿಲ್ದಾಣದಲ್ಲಿ ಹರೀಶ್ ಪೂಂಜಾ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
    ಪ್ರಕರಣದಲ್ಲಿ ಕಾಂಗ್ರೆಸ್‌ ಒತ್ತಡ ಅಂದ್ರೆ ಏನು? ಎಂದು ಪ್ರಶ್ನೆ ಮಾಡಿದ ಸಿಎಂ ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಹರೀಶ್ ಪೂಂಜಾ ವಿರುದ್ಧ 353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದು ಏಳು ವರ್ಷ ಜೈಲುವಾಸದ ಶಿಕ್ಷೆ ಸಿಗಬಹುದಾದ ಕೇಸ್ ಆಗಿದ್ದು, ಬೇಲೇಬಲ್‌ ಪ್ರಕರಣ ಅಲ್ಲ ಎಂದಿದ್ದಾರೆ.


    ಶಾಸಕ ಅಂತ ಸುಮ್ಮನೆ ಬಿಡಲು ಆಗುತ್ತದೆಯಾ? ಶಾಸಕ ಅಂದ ಮಾತ್ರಕ್ಕೆ ಪೊಲೀಸರ ಮೇಲೆ ಗಲಾಟೆ ಮಾಡಬಹುದಾ? ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ. ಶಾಸಕರು ಯಾರ ಪರವಾಗಿ ಗಲಾಟೆ ಮಾಡಿದ್ದಾರೆ ಅನ್ನೋದು ಇಂಪಾರ್ಟೆಂಟ್. ಹಾಗಾಗಿ ಅವರ ಮೇಲೆ ಎರಡು ಎಫ್‌ಐಆರ್ ದಾಖಲಾಗಿದೆ ಎಂದು ಹೇಳಿದ್ದಾರೆ.

    Continue Reading

    LATEST NEWS

    ಟಿಪ್ಪರ್ ಲಾರಿ ಚಾಲಕ ಹೆಲ್ಮೆಟ್ ಧರಿಸಿಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸ್

    Published

    on

    ಮಂಗಳೂರು / ಹೊನ್ನಾವರ : ಟಿಪ್ಪರ್ ಲಾರಿ ಚಾಲಕ ಹೆಲ್ಮೆಟ್ ಧರಿಸಿಲ್ಲವೆಂದು ಟ್ರಾಫಿಕ್‌ ಪೊಲೀಸರು ದಂಡ ಹಾಕಿ ರಶೀದಿ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ಘಟನೆ ನಡೆದಿದೆ. ಹೊನ್ನಾವರದ ಉಸುಕು ಸಾಗಾಟದ ಟಿಪ್ಪರ್ ಚಾಲಕನಿಗೆ ಹೆಲ್ಮೆಟ್ ಧರಿಸಿಲ್ಲವೆಂದು ದಂಡ ವಿಧಿಸಿದ್ದಾರೆ.


    ಹೊನ್ನಾವರದ ಉಪ್ಪೋಣಿಯ ವಿನುತಾ ವಿನೋದ ನಾಯ್ಕ ಮಾಲೀಕತ್ವದ ಟಿಪ್ಪರ್ ಲಾರಿಯನ್ನು ಚಾಲಕ ಚಂದ್ರಕಾಂತ ಎಂಬಾತ ಚಲಾಯಿಸುತ್ತಿದ್ದ. ಚಂದ್ರಕಾಂತ ಸಮವಸ್ತ್ರ ಧರಿಸದೇ ವಾಹನ ಚಲಾಯಿಸಿದ್ದನ್ನು ಕಂಡು ಪೊಲೀಸರು ವಾಹನವನ್ನು ತಡೆದಿದ್ದರು. ಈ ವೇಳೆ ಹೆಲ್ಮೆಟ್ ಧರಿಸದ ಕಾರಣಕ್ಕೆ ರಶೀದಿ ನೀಡಿ 500 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಇತ್ತ ದಂಡದ ರಶೀದಿ ಕಂಡು ಟಿಪ್ಪರ್ ಚಾಲಕ ಅವಕ್ಕಾಗಿದ್ದಾರೆ.

    ಇದನ್ನೂ ಓದಿ : ಮಂಗಳೂರಿನಲ್ಲಿ ಮೊದಲ ಮಳೆಗೆ ಜೀವ ಬ*ಲಿ; ಆಟೋರಿಕ್ಷಾ ತೋಡಿಗೆ ಬಿದ್ದು ಚಾಲಕ ಸಾ*ವು

    ಇನ್ನು ಟಿಪ್ಪರ್ ಲಾರಿ ಚಾಲಕನ ಹೆಲ್ಮೆಟ್ ದಂಡದ ರಶೀದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ, ದಂಡ ಹಾಕುವಾಗ ಸಮವಸ್ತ್ರದ ಬದಲು ಹೆಲ್ಮೆಟ್ ಆಯ್ಕೆಯಾಗಿರುವುದು ಇದಕ್ಕೆಲ್ಲ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.

    Continue Reading

    LATEST NEWS

    Trending