Connect with us

    DAKSHINA KANNADA

    ಮಂಗಳೂರು: ಅಯ್ಯೋ ಅವಸ್ಥೆ-ಆರ್ಡರ್ ಮಾಡಿದ್ದು ಲ್ಯಾಪ್‌ಟಾಪ್, ಬಂದಿದ್ದು ‘ಕಲ್ಲು’

    Published

    on

    ಮಂಗಳೂರು: ಆನ್‌ಲೈನ್ ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್‌ನಲ್ಲಿ ಲ್ಯಾಪ್‌ಟಾಪ್ ಆರ್ಡರ್ ಮಾಡಿದ ವ್ಯಕ್ತಿಯೋರ್ವರಿಗೆ ದೊಡ್ಡ ಕಲ್ಲು ಹಾಗೂ ಹಾಳಾದ ಕಂಪ್ಯೂಟರ್ ನ ಕೆಲವು ಬಿಡಿ ಭಾಗಗಳು ಬಂದ ಅಪರೂಪದ ಘಟನೆ ಮಂಗಳೂರಿನಲ್ಲಿ ನಡೆದಿದೆ.


    ಮಂಗಳೂರಿನ ಚಿನ್ಮಯ ರಮಣ ಎನ್ನುವವರು ಪ್ಲಿಪ್ ಕಾರ್ಟ್ ನಲ್ಲಿ ಗೇಮಿಂಗ್ ಲ್ಯಾಪ್ ಟಾಪ್ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಬಂದ ಪಾರ್ಸೆಲ್ ನಲ್ಲಿ ದೊಡ್ಡ ಕಲ್ಲು ಹಾಗೂ ಕಂಪ್ಯೂಟರ್ ನ ಕೆಲವು ಭಾಗಗಳಿದ್ದವು.

    ಈ ಹಿನ್ನೆಲೆ ಚಿನ್ಮಯ ಅವರು ತನಗೆ ದೊರೆತ ಕಲ್ಲು ಮತ್ತು ತ್ಯಾಜ್ಯ ವಸ್ತುಗಳ ಫೋಟೋ ತೆಗೆದು ಪ್ಲಿಪ್ ಕಾರ್ಟ್ ಗೆ ಕಂಪ್ಲೈಟ್ ಮಾಡಿದ್ದರು, ಆದರೆ ಪ್ಲಿಪ್ ಕಾರ್ಟ್ ಇವರ ಮನವಿಯನ್ನು ತಿರಸ್ಕರಿಸಿತ್ತು.
    ಚಿನ್ಮಯ ರಮಣ ಅವರು ಅನ್‌ ಬಾಕ್ಸಿಂಗ್ ವಿಡಿಯೋವನ್ನು ಕೂಡ ಮಾಡಿದ್ದರು.

    ಇನ್ನು ಈ ಬಗ್ಗೆ ಚಿನ್ಮಯ ರಮಣ ವೀಡಿಯೋದಲ್ಲಿ ‘ಇತರರು ತಮ್ಮಂತೆ “ಅಸಹಾಯಕ” ಭಾವನೆಗೆ ಒಳಗಾಗುವುದರಿಂದ ಇ ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಬಾರದು.

    ಆದರೆ, 1 ದಿನದ ನಂತರ, ಫ್ಲಿಪ್‌ಕಾರ್ಟ್ ತನಗೆ ಹಣವನ್ನು ರೀಫಂಡ್‌ ಮಾಡಿದೆ ಎಂದು ಹೇಳಿದ್ದಾರೆ. ಪೂರ್ಣ ಹಣವನ್ನು ವಾಪಸ್‌ ನೀಡಿದ್ದು, ಈ ಹಿನ್ನೆಲೆ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್‌ನೊಂದಿಗೆ ಶಾಪಿಂಗ್ ಮಾಡುವುದನ್ನು ಮುಂದುವರಿಸುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

    DAKSHINA KANNADA

    ಊಟವಾದ ನಂತರ ನಿದ್ರೆ ಬರುತ್ತದೆಯೇ..? ಈ ರೀತಿ ಮಾಡಿ ನೋಡಿ

    Published

    on

    ಮಂಗಳೂರು: ಊಟವಾದ ನಂತರ ತೂಕಡಿಕೆ ಸಾಮಾನ್ಯ. ಮಧ್ಯಾಹ್ನ ಹೊಟ್ಟೆ ತುಂಬಿದ ನಂತರ ನಿದ್ರೆ ಬಂದಂತಾಗಿ ಕೆಲಸದಲ್ಲಿ ಆಸಕ್ತಿಯೇ ಇರುವುದಿಲ್ಲ. ಆಫೀಸಿಗೆ ಹೋಗುವವರಿಗೆ ಇದರಿಂದ ಬಹಳ ಸಮಸ್ಯೆ, ಕಿರಿಕಿರಿ ಉಂಟಾಗುತ್ತದೆ. ಊಟದ ನಂತರದ ಆಲಸ್ಯವನ್ನು ಕಡಿಮೆ ಮಾಡಲು ಕೆಲವು ಸಲಹೆಗಳು ಇಲ್ಲಿವೆ. ಊಟವಾದ ನಂತರ ನಾವು ಆ್ಯಕ್ಟಿವ್ ಆಗಿರಬೇಕೆಂದರೆ ನಮ್ಮ ದಿನಚರಿಯಲ್ಲೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

    ಸಾಕಷ್ಟು ನೀರು ಕುಡಿಯಿರಿ:

    ಹೈಡ್ರೇಟೆಡ್ ಆಗಿರಲು ಮತ್ತು ನಿರ್ಜಲೀಕರಣವನ್ನು ಎದುರಿಸಲು ಊಟದ ನಂತರ ಸಾಕಷ್ಟು ನೀರು ಕುಡಿಯಿರಿ. ಇದು ಆಯಾಸದ ಭಾವನೆಗಳಿಗೆ ಕಾರಣವಾಗಬಹುದು. ದಿನವಿಡೀ ಕನಿಷ್ಠ 8 ರಿಂದ 10 ಗ್ಲಾಸ್ ನೀರನ್ನು ಕುಡಿದರೆ ಊಟದ ನಂತರ ನಿದ್ದೆ ಬರುವುದಿಲ್ಲ.

    ತಿಂಡಿ ತಿನ್ನಿ:

    ಊಟದ ನಡುವೆ ತ್ವರಿತ ಶಕ್ತಿಯ ವರ್ಧಕವನ್ನು ಒದಗಿಸಲು ತಾಜಾ ಹಣ್ಣುಗಳು, ನಟ್ಸ್ ಅಥವಾ ಪೌಷ್ಟಿಕಾಂಶದ ತಿಂಡಿಗಳನ್ನು ಸೇವಿಸಿ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ಶಕ್ತಿಯ ಕುಸಿತವನ್ನು ತಡೆಯಲು ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಹೆಚ್ಚಿನ ತಿಂಡಿಗಳನ್ನು ಆರಿಸಿ.

    ಸಮತೋಲಿತ ಆಹಾರವನ್ನು ಸೇವಿಸಿ:

    ನಿರಂತರ ಶಕ್ತಿಯನ್ನು ಒದಗಿಸಲು ಮತ್ತು ರಕ್ತದಲ್ಲಿನ ಸಕ್ಕರೆಯ ಏರಿಕೆ ತಡೆಗಟ್ಟಲು ನೇರ ಪ್ರೋಟೀನ್, ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಒಳಗೊಂಡಿರುವ ಸಮತೋಲಿತ ಊಟವನ್ನು ಆರಿಸಿಕೊಳ್ಳಿ. ತರಕಾರಿಗಳು, ಧಾನ್ಯಗಳು ಮತ್ತು ನೇರ ಮಾಂಸಗಳು ಅಥವಾ ಸಸ್ಯ ಆಧಾರಿತ ಪ್ರೋಟೀನ್‌ಗಳಂತಹ ಪೌಷ್ಟಿಕಾಂಶ ದಟ್ಟವಾದ ಆಹಾರಗಳನ್ನು ಸೇರಿಸಿ.

    ಊಟದ ನಂತರ ಸ್ವಲ್ಪ ನಡೆಯಿರಿ:

    ಪರಿಚಲನೆಯನ್ನು ಉತ್ತೇಜಿಸಲು ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಕಚೇರಿ ಅಥವಾ ಹೊರಾಂಗಣದಲ್ಲಿ ಸ್ವಲ್ಪ ನಡೆಯುವ ಅಭ್ಯಾಸ ಇಟ್ಟುಕೊಳ್ಳಿ. ಲಘು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಇದು ಆಲಸ್ಯದ ಭಾವನೆಗಳನ್ನು ನಿವಾರಿಸಲು ಮತ್ತು ಜಾಗರೂಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

    Continue Reading

    DAKSHINA KANNADA

    ದ.ಕ: ಮುಂದುವರಿದ ಮುಂಗಾರು ಪೂರ್ವ ಮಳೆ; ನೆರೆ ಹಾವಳಿ ಸಂಭವಿಸುವ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

    Published

    on

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಮುಂದುವರಿದಿದ್ದು, ಇನ್ನೆರಡು ದಿನ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಿಲ್ಲಾಧಿಕಾರಿ  ಮುಲ್ಲೈ ಮುಗಿಲನ್ ಅವರು ಮಳೆಯಿಂದ ನೆರೆ ಹಾವಳಿ ಸಂಭವಿಸುವ ಮಂಗಳೂರು ನಗರದ ಕೊಟ್ಟಾರ ಚೌಕಿ ಹಾಗೂ ಕೂಳೂರು ಪ್ರದೇಶಕ್ಕೆ ನಿನ್ನೆ(ಮೇ.22) ಸಂಜೆ ಭೇಟಿ ನೀಡಿ ಸ್ಥಳ ವೀಕ್ಷಣೆ ನಡೆಸಿ ಮುನ್ನೆಚ್ಚರಿಕೆ ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಕೊಟ್ಟಾರ ಚೌಕಿಯಲ್ಲಿ ಸಾಮಾನ್ಯವಾಗಿ ಪ್ರತೀ ಮಳೆಗಾಲದಲ್ಲಿ ನೆರೆ ಬರುತ್ತದೆ. ಈ ಬಾರಿ ನೆರೆ ಬಂದರೆ ಆಸ್ತಿ ಪಾಸ್ತಿಗಳಿಗೆ ಹಾನಿ ಆಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದವರು ಈ ಸಂದರ್ಭದಲ್ಲಿ ತಿಳಿಸಿದರು. ಕೂಳೂರು ಜಂಕ್ಷನ್‌ ಮತ್ತು ಕೂಳೂರು ಸೇತುವೆ ನಿರ್ಮಾಣ ಕಾಮಗಾರಿಯನ್ನೂ ಪರಿಶೀಲಿಸಿದ ಜಿಲ್ಲಾಧಿಕಾರಿ, ಸೇತುವೆ ನಿರ್ಮಾಣ ಪ್ರದೇಶದಲ್ಲಿ ಮಳೆ ಸಂದರ್ಭ ಹಾನಿ ಸಂಭವಿಸದಂತೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮತ್ತು ಸೇತುವೆ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಸೂಚಿಸಿದರು.

    ಗುಡುಗು ಸಹಿತ ಧಾರಾಕಾರ ಮಳೆ:

    ಈ ನಡುವೆ ಬುಧವಾರ ರಾತ್ರಿ ಮಂಗಳೂರು, ಬಂಟ್ವಾಳ, ಸುಳ್ಯ, ಪುತ್ತೂರು, ಬೆಳ್ತಂಗಡಿ ಮತ್ತಿತರ ಕಡೆಗಳಲ್ಲಿ ಗುಡುಗು ಮಿಂಚು, ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಸಿಡಿಲು ಮತ್ತು ಗಾಳಿಯಿಂದಾಗಿ ಜಿಲ್ಲಾದ್ಯಂತ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಕೆಲವು ಪ್ರದೇಶಗಳಳ್ಲಿ ರಾತ್ರಿ ವೇಳೆ ಕರೆಂಟ್‌ ಇಲ್ಲದೆ ಜನರು ಸಮಸ್ಯೆ ಅನುಭವಿಸಿದರು. ಸಿಡಿಲಿನಿಂದಾಗಿ ಹಲವು ಮನೆಗಳಲ್ಲಿ ಇನ್‌ವರ್ಟರ್‌, ಫ್ರಿಜ್‌ ಇತ್ಯಾದಿ ಎಲೆಕ್ಟ್ರಾನಿಕ್‌ ಉಪಕರಣಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಗುರುವಾರ ಬೆಳಗ್ಗೆ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ಕಂಡು ಬಂದಿದೆ.

     

    Continue Reading

    DAKSHINA KANNADA

    ಕೊನೆಗೂ ಕಾನೂನಿಗೆ ತಲೆ ಬಾಗಿ ಠಾಣೆಗೆ ಹಾಜರಾದ ಶಾಸಕ, ಜಾಮೀನು

    Published

    on

    ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಶಾಸಕ ಹರೀಶ್ ಪೂಂಜರ ವಿರುದ್ಧ, ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ 2 ಪ್ರಕರಣಗಳಿಗೆ ಸಂಬಂಧಿಸಿದಂತೆ, ಆರೋಪಿ ಹರೀಶ್ ಪೂಂಜರನ್ನು, ವಿಚಾರಣೆಗಾಗಿ ಠಾಣೆಗೆ ಕರೆತರಲು, ಬೆಳ್ತಂಗಡಿ ಠಾಣಾ ಪೊಲೀಸರು ಪೂಂಜಾ ಅವರ ಮನೆಗೆ ತೆರಳಿದ್ದ ವೇಳೆ ನಿನ್ನೆ ಉದ್ವಿಗ್ನ ಸ್ಥಿತಿ ನಿರ್ಮಾಣ ವಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ನಳೀನ್ ಕುಮಾರ್ ಕಟೀಲ್ ತಾನೇ ಖುದ್ದಾಗಿ ಹರೀಶ್ ಪೂಂಜಾರನ್ನು ವಿಚಾರಣೆಗೆ ಠಾಣೆಗೆ ಕಳುಹಿಸುವುದಾಗಿ ವಿನಂತಿಸಿದ ಹಿನ್ನೆಲೆಯಲ್ಲಿ ಬಳಿಕ ಹರೀಶ್ ಪೂಂಜಾರನ್ನು ಪೊಲೀಸರೊಂದಿಗೆ ಠಾಣೆ ಕರೆದುಕೊಂಡು ಬಂದಿದ್ದು, ಠಾಣೆಯಲ್ಲಿ ವಿಚಾರಣೆ ಮಾಡಲಾಗಿದೆ.

    harish poonja

    ಬೆಳ್ತಂಗಡಿ ಠಾಣಾ  58/2024 , ಕಲಂ:143, 147, 341, 504, 506 ಜೊತೆಗೆ 149 ಐ.ಪಿ.ಸಿ  ಪ್ರಕರಣಕ್ಕೆ ಸಂಬಂಧಿಸಿದಂತೆ,  ಆರೋಪಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರನ್ನು, ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ನಡೆಸಿ, ಸ್ಟೇಶನ್ ಜಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ.  ಮುಂಜಾನೆಯಿಂದ  ಶಾಸಕ ಹರೀಶ್ ಪೂಂಜಾ ಮನೆ ಮುಂದೆ ಹೈಡ್ರಾಮ ನಡೆದು ರಾತ್ರಿ ವೇಳೆ ಪೊಲೀಸರು ವಾಪಾಸಾಗಿದ್ದರು. ಬಿಜೆಪಿ ಶಾಸಕರು, ಸಂಸದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಶಾಸಕರ ಬಂಧನ ವಿರೋಧಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅವರನ್ನು ಬಂಧಿಸಿದರೆ ಜಿಲ್ಲೆ ಬಂದ್ ಮಾಡುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು.

    Read More..; ಶಾಸಕನ ಬಂಧನಕ್ಕೆ ಮುಂದಾದ ಪೊಲೀಸರು…! ಎಚ್ಚರಿಕೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ…!

    ಇದೇ ವೇಳೆ ಘಟನೆಯ ವಿಚಾರವಾಗಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ಹರಿಹಾಯ್ದು ಡಿಜಿಪಿ ಶಂಕರ್ ಬಿದರಿಯ ಕಾಲರ್ ಪಟ್ಟಿಯನ್ನು ಹಿಡಿದ ವಿಚಾರ ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದ್ರು. ನಾನು ವಿನಾ ಕಾರಣ ಪ್ರಕರಣದಲ್ಲಿ ಸಿಲುಕಿಸಿದ ನಮ್ಮ ಪಕ್ಷದ ಮೋರ್ಚಾದ ಅಧ್ಯಕ್ಷನ ಪರವಾಗಿ ಮಾತನಾಡಲು ಹೋಗಿದ್ದೆ ಹೊರತು ಯಾರದೇ ಕಾಲರ್ ಪಟ್ಟಿ ಹಿಡಿದಿಲ್ಲ ಎಂದು ತಮ್ಮ ಪ್ರತಿಭಟನೆಯನ್ನು  ಸಮರ್ಥಿಸಿಕೊಂಡಿದ್ದಾರೆ.

    ಅಕ್ರಮ ಕಲ್ಲು ಗಣಿಗಾರಿಕೆ ಹಾಗೂ ಸ್ಫೋಟಕ ಪ್ರಕರಣದಲ್ಲಿ  ಬಿಜೆಪಿ ಯುವಮೋರ್ಚ ಅಧ್ಯಕ್ಷ ಶಶಿರಾಜ್ ಶೆಟ್ಟಿ ಬಂಧಿತನಾಗಿದ್ದಾನೆ. ಆತನ ಪರ ಪ್ರತಿಭಟನೆ ಮಾಡಿ ಶಾಸಕ ಹರೀಶ್ ಪೂಂಜಾ ಕೂಡಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಅರೆಸ್ಟ್ ನಿಂದ ತಪ್ಪಿಸಿಕೊಂಡು ಬಿಜೆಪಿ ಪ್ರಮುಖರ ಜೊತೆಯಲ್ಲಿ ಪೊಲೀಸ್ ಠಾಣೆಗೆ ಬಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದು, ಸ್ಟೇಷನ್‌ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ.

    Continue Reading

    LATEST NEWS

    Trending