Connect with us

    DAKSHINA KANNADA

    ಗಣೇಶ ಚೌತಿ: ಕೋಮುಗಲಭೆಯ ನಾಡಿನಲ್ಲಿ ಸಾಮರಸ್ಯದ ದೀಪ ಬೆಳಗಿಸಿದ ಮಂಗಳೂರಿನ ಹರ್ಬಟ್ ಡಿಸೋಜಾ..!

    Published

    on

    ವಿಶೇಷ ವರದಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕೋಮುಧ್ರುವೀಕರಣದ ಕೊಲೆ, ಗಲಭೆಗಳಿಗೆ ಬಹಳಷ್ಟು ಸುದ್ದಿಯಾಗುತ್ತಿದೆ. ಆದರೆ ಪರಶುರಾಮನ ಸೃಷ್ಟಿಯ ತುಳುನಾಡಿನ ಹಲವು ಧಾರ್ಮಿಕ ಆಚರಣೆಗಳಲ್ಲಿ ಭಾವಕ್ಯತೆ ಇನ್ನೂ ಇದೆ. ಅದು ಸುದ್ದಿಯಾಗುವುದು ವಿರಳ. ಅಂತಹ ಸುದ್ದಿ ಇಲ್ಲಿದೆ ನೋಡಿ.


    ಮಂಗಳೂರು ನಗರದ ಜಪ್ಪಿನಮೊಗರುವಿನ ಹರ್ಬಟ್‌ ಡಿ’ಸೋಜ ಯಾವುದೇ ಫಲಾಪೇಕ್ಷೆ ಇಲ್ಲದೆ ವಿಘ್ನ ನಿವಾರಕ ಗಣೇಶನ ಹಬ್ಬ ಹಾಗೂ ಕೆಲವೇ ದಿನಗಳಲ್ಲಿ ಕರಾವಳಿ ಕ್ರೈಸ್ತರು ಆಚರಿಸುವ ಮೊಂತಿ ಹಬ್ಬಕ್ಕೆ ತೆನೆ ಹಂಚುತ್ತಾರೆ.

    ಈ ಎರಡೂ ಹಬ್ಬಗಳಿಗೆ ತನ್ನ 20 ಸೆಂಟ್ಸ್‌ ಗದ್ದೆಯನ್ನು ಮೀಸಲಿಟ್ಟಿದ್ದಾರೆ. ಕಳೆದ 15 ವರ್ಷಗಳಿಂದ ಇಂತಹ ಸೇವೆ ಮಾಡುತ್ತಿರುವ ಸ್ಥಳೀಯರ ಪ್ರೀತಿಯ ಅಬ್ಬೆರ್‌ ಸೋಜೆರ್‌ಗೆ 60 ರ ಇಳಿವಯಸ್ಸು.

                             ಹರ್ಬಟ್‌ ಡಿ’ಸೋಜ

     

    ಮಂಗಳೂರಿನ ಮಂಗಳಾದೇವಿ, ಮಾರಿಯಮ್ಮ, ವೈದ್ಯನಾಥ, ಆದಿಮಾಯೆ ಸೇರಿ ಸರಿಸುಮಾರು 25 ದೇವಸ್ಥಾನಗಳಿಗೆ ತೆನೆಯನ್ನು ಹಂಚುತ್ತಾರೆ. ಜೊತೆಗೆ ಹಲವು ಮನೆಗಳ ಚೌತಿಗೂ ಇವರ ತೆನೆಯನ್ನು ಬಳಸುತ್ತಾರೆ.

    ವಿಶೇಷ ಎಂದರೆ ಇವರು ಬೆಳೆಸಿದ ತೆನೆ ಹೊರದೇಶಕ್ಕೂ ರವಾನೆಯಾಗುತ್ತದೆ. ಇದರ ಜೊತೆಗೆ ಕರಾವಳಿ ಕ್ರೈಸ್ತರ ಮೊಂತಿ ಫೆಸ್ತ್‌ಗೂ ತೆನೆಯನ್ನು ಬೆಳೆದು ಸ್ಥಳೀಯ ಬಜಾಲ್‌ ಚರ್ಚ್‌ ಸೇರಿ ಹಲವು ಚರ್ಚ್‌ಗಳಿಗೆ ನೀಡುತ್ತಾರೆ. ಇವರ ಬಳಿ ತೆನೆ ಕೇಳಿ ಯಾರೂ ಬಂದರೂ ಇಲ್ಲ ಅಂತ ಹೇಳಲ್ಲ.

    ಗಣೇಶೋತ್ಸವಕ್ಕೆ ತೆನೆ ಕತ್ತರಿಸುತ್ತಿರುವ ಸ್ಥಳೀಯರು

    “ಜಪ್ಪಿನಮೊಗರು ಗಣೇಶನ ಜಲಸ್ತಂಭನಕ್ಕೆ ಇವರದ್ದೇ ದೋಣಿ”
    ಮಂಗಳೂರಿನ ಜಪ್ಪಿನಮೊಗರು ಗಣೇಶೋತ್ಸವ ಹಲವು ವಿಶೇಷತೆ ಹೊಂದಿದೆ. ಇಲ್ಲಿನ ಗಣೇಶೋತ್ಸವ ಸಮಿತಿಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ ಬಂಧುಗಳಿದ್ದಾರೆ. ಹರ್ಬಟ್‌ ಡಿ’ಸೋಜ ಅವರೂ ಸಹ ಗಣೇಶ ವಿಗ್ರಹ ಜಲಸ್ತಂಭದ ಸಮಿತಿಯ ಪ್ರಧಾನ ಸಂಚಾಲಕರಾಗಿದ್ದಾರೆ.

                                       ದೇವರಾಜ್‌

    ಕಳೆದ 14 ವರ್ಷಗಳಿಂದ ವಿಗ್ರಹ ಜಲಸ್ತಂಭನಕ್ಕೆ ತಮ್ಮದೇ ದೋಣಿಯನ್ನು ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ದೋಣಿಯನ್ನು ಇಟ್ಟುಕೊಂಡಿದ್ದಾರೆ ಎನ್ನುತ್ತಾರೆ ಗಣೇಶೋತ್ಸವ ಸಮಿತಿ ಸದಸ್ಯ ದೇವರಾಜ್‌.

    BANTWAL

    ಬೆಳ್ತಂಗಡಿ:ಉಪ ತಹಶೀಲ್ದಾರ್ ಸುನಿಲ್ ಹೃದಯಾಘಾತದಿಂದ ನಿಧನ

    Published

    on

    ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕಂದಾಯ ಇಲಾಖೆಯಲ್ಲಿ ಗ್ರಾಮ ಕರಣಿಕರಾಗಿ ಸೇವೆ ಸಲ್ಲಿಸಿ, ಉಪ ತಹಶೀಲ್ದಾರ್ ಆಗಿ ಪದೋನ್ನತಿ ಹೊಂದಿದ್ದ ಸುನಿಲ್ (42ವ) ಹೃದಯಾಘಾತದಿಂದ ನಿಧನರಾದ ಘಟನೆ ವರದಿಯಾಗಿದೆ.

    ಬೆಳ್ತಂಗಡಿ ಆಡಳಿತ ಕಂದಾಯ ಇಲಾಖೆಯಲ್ಲಿ ಗ್ರಾಮ ಕಾರಣಿಕರಾಗಿ ಬಳಿಕ ಆಡಳಿತ ಸೌಧದಲ್ಲಿ ಭೂಮಿ ಶಾಖೆಯ ನಿರ್ವಹಖರಾಗಿ ಸೇವೆ ಸಲ್ಲಿಸಿದ ಇವರು ಬಳಿಕ ಪದೋನ್ನತ್ತಿ ಹೊಂದಿ ಉಪ ತಹಸಿಲ್ದಾರ್ ಆಗಿ ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

    ಇದನ್ನು ಓದಿ: ‘ಹೊಡಿಬೇಡಿ ಪ್ಲೀಸ್’ ಎಂದು ಅಂಗಲಾಚಿದ ಕೆಜಿಎಫ್ ನಟಿ; ಕುಡಿದ ಮತ್ತಿನಲ್ಲಿ ನಡೀತಾ ಗಲಾಟೆ? ವೀಡಿಯೋ ವೈರಲ್

    Continue Reading

    DAKSHINA KANNADA

    ಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ..! ನಳಿನ್ ಕುಮಾರ್ ಕಟೀಲ್‌ಗೆ ನಿರಾಸೆ..!

    Published

    on

    ಬೆಂಗಳೂರು/ ಮಂಗಳೂರು: ವಿಧಾನಪರಿಷತ್‌ನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಜೂ. 13 ರಂದು ಮತದಾನ ನಡೆಯಲಿದೆ. ಸೋಮವಾರ(ಜೂ.3) ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ಬಿಜೆಪಿ ತನ್ನ ಮೂರು ಅಭ್ಯರ್ಥಿಗಳ ಘೋಷಣೆ ಮಾಡಿದೆ. ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿಗೆ ಮೂರು ಸ್ಥಾನಗಳನ್ನು ಗೆಲ್ಲುವ ಅವಕಾಶ ಇದೆ ಹೀಗಾಗಿ ಮೂವರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

     

    ಮುಂದೆ ಓದಿ..;  ಲೋಕಸಭಾ ಚುನಾವಣೆ: ರಾಷ್ಟ್ರಪತಿ, ಕಾಂಗ್ರೆಸ್ ಮುಖಂಡರಿಂದ ಮತದಾನ.. ಮತಕ್ಕಾಗಿ ಸರ್ಟಿಫಿಕೇಟ್ ಪಡೆದ ವಿದೇಶಾಂಗ ಸಚಿವ

    ಮಾಜಿ ಸಚಿವ ಸಿ.ಟಿ.ರವಿ, ಮಾಜಿ ಪರಿಷತ್ ಸದಸ್ಯ ಎನ್‌ .ರವಿಕುಮಾರ್ ಮತ್ತು ಬಸವಕಲ್ಯಾಣದ ಮಾಜಿ ಶಾಸಕ ಎಂ.ಜಿ.ಮೂಳೆ ಅವರಿಗೆ ಟಿಕೆಟ್ ನೀಡಲಾಗಿದೆ.

    ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ವಂಚಿತರಾಗಿದ್ದ ನಳಿನ್ ಕುಮಾರ್ ಕಟೀಲ್ ಈ ಬಾರಿ ಪರಿಷತ್ ಟಿಕೇಟ್ ನಿರೀಕ್ಷೆಯಲ್ಲಿದ್ರು . ಅದೇ ರೀತಿಯಾಗಿ ಬಿಜೆಪಿಗೆ ಬೆಂಬಲ ಸೂಚಿಸಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದ ಸುಮಲತಾ ಕೂಡಾ ಪರಿಷತ್ ಟಿಕೇಟ್ ಸಿಗುವ ನಿರೀಕ್ಷೆಯಲ್ಲಿದ್ರು. ಆದ್ರೆ ಈ ಇಬ್ಬರಿಗೂ ಪಕ್ಷದ ವರಿಷ್ಠರು ನಿರಾಸೆ ಮೂಡಿಸಿದ್ದಾರೆ.

    ಸೋಮವಾರ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ಮಂಗಳವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ಗುರುವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಜೂ. 13 ರಂದು ಮತದಾನ ನಡೆಯಲಿದೆ.

    Continue Reading

    DAKSHINA KANNADA

    ಅಂಟು ಕೈಗೆ ತಾಗದಂತೆ ಹಲಸಿನಹಣ್ಣನ್ನು ಕತ್ತರಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್ಸ್

    Published

    on

    ಮಂಗಳೂರು: ಮಾರುಕಟ್ಟೆಯಲ್ಲಿ ಹಲಸಿನ ಹಣ್ಣಿನ ಕಾರುಬಾರು ಶುರುವಾಗಿದೆ. ಈ ಹಣ್ಣಿನ ಮೈ ಮೇಲೆ ಮುಳ್ಳುಗಳಿದ್ದು ನೋಡುವುದಕ್ಕೆ ಒರಟಾಗಿ ಕಂಡರೂ ರುಚಿ ಮಾತ್ರ ಅದ್ಭುತ. ಈ ಹಣ್ಣಿನೊಳಗೆ ಜಿಗುಟಾದ ಬಿಳಿ ಬಣ್ಣದ ಅಂಟಿದ್ದು, ಇದು ಕೈಗೆ ಅಂಟಿಕೊಳ್ಳುತ್ತದೆ. ಹೀಗಾಗಿ ಈ ತೊಂದರೇನೇ ಬೇಡವೆಂದು ಸಿಪ್ಪೆ ಸುಲಿದ ಹಣ್ಣುಗಳನ್ನೆ ಖರೀದಿಸುವವರೇ ಹೆಚ್ಚು. ಒಂದು ವೇಳೆ ನೀವೇನಾದರೂ ಮಾರುಕಟ್ಟೆಯಿಂದ ಹಲಸಿನ ಹಣ್ಣು ತಂದು ಅಥವಾ ನಿಮ್ಮ ಮನೆಯಲ್ಲೇ ಆದ ಹಲಸಿನ ಹಣ್ಣನ್ನು ಕತ್ತರಿಸುವಿರಾದರೆ ಅದರ ಅಂಟು ತಾಗದ ಹಾಗೇ ಈ ಸಲಹೆಗಳನ್ನು ಅನುಸರಿಸಿ.

    * ಹಲಸಿನ ಹಣ್ಣನ್ನು ಕತ್ತರಿಸುವಾಗ ಕೆಳಗಡೆ ಪೇಪರ್ ಇಟ್ಟುಕೊಳ್ಳಿ. ಇಲ್ಲವಾದರೆ ಇದರ ಒಳಗಿರುವ ಬಿಳಿ ಬಣ್ಣದ ಅಂಟು ನೆಲಕ್ಕೆ ಹಾಗೂ ಕೈಗಳಿಗೆ ಅಂಟಿಕೊಳ್ಳುತ್ತದೆ.
    * ಕತ್ತರಿಸುವ ಮುನ್ನ ಕೈಗೆ ಹಾಗೂ ಚಾಕುವಿಗೆ ತೆಂಗಿನೆಣ್ಣೆಯನ್ನು ಹಚ್ಚಿಕೊಳ್ಳಿ. ಹೀಗೆ ಮಾಡಿದ್ದಲ್ಲಿ ಅಂಟು ಕೈಗೆ ತಾಗಿದರೂ ಮೆತ್ತಿಕೊಳ್ಳುವುದಿಲ್ಲ.
    * ಹಣ್ಣನ್ನು ಎರಡು ಭಾಗವಾಗಿ ಕತ್ತರಿಸಿದ ಬಳಿಕ ಹಲಸಿನ ಹಣ್ಣಿನ ಒಳಭಾಗದಲ್ಲಿರುವ ಅಂಟನ್ನು ಪೇಪರ್ ನಿಂದ ಒರೆಸಿಕೊಳ್ಳಿ.
    * ಹಣ್ಣಿನ ಮೇಲಿರುವ ನಾರುಗಳನ್ನು ಚಾಕುವಿನಿಂದ ಕತ್ತರಿಸಿ ಹಣ್ಣನ್ನು ಬೇರ್ಪಡಿಸಿ ಸವಿಯ ಬಹುದು.

    Continue Reading

    LATEST NEWS

    Trending