Connect with us

    LATEST NEWS

    ಕುಂದಾಪುರದಲ್ಲಿ ರಾಜವಂಶದ ಕೊಪ್ಪರಿಗೆ-ಆನೆ ಕಟ್ಟುವ ಕಂಬ ಪತ್ತೆ

    Published

    on

    ಕುಂದಾಪುರ: ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದ ಆನೆ ನೀರು ಕುಡಿಯುವ ಕೊಪ್ಪರಿಗೆ, ಆನೆ ಕಟ್ಟುವ ಕಲ್ಲಿನ ಕಂಬವೊಂದು ತಾಲೂಕಿನ ಹೊಸಂಗಡಿ ಪೇಟೆಯಲ್ಲಿ ನಿನ್ನೆ ಪತ್ತೆಯಾಗಿದೆ.

    ಶತವಸಂತಗಳಿಗೂ ಹಿಂದಿನ ಕಾಲದ ರಾಜರ, ಆನೆ ಕಟ್ಟುವ ಕಲ್ಲಿನ ಕಂಬ ಹಾಗೂ ಆನೆಗೆ ನೀರು ಕುಡಿಯಲು ನಿರ್ಮಿಸಿದ ನೀರಿನ ಕಲ್ಲಿನ ಕೊಪ್ಪರಿಗೆ ಪತ್ತೆಯಾಗಿದೆ.


    ಕೊಪ್ಪರಿಗೆ ಹಿಂದೆ ಮಣ್ಣಿನ ಅಡಿಯಲ್ಲಿ ಹೂತು ಹೋಗಿದ್ದು ಆನೆ ಕಟ್ಟುವ ಕಂಬ ಮೊದಲಿನಿಂದಲೂ ಇಲ್ಲಿ ರಸ್ತೆ ಬದಿ, ಕಾಣುತ್ತಿತ್ತು.

    ಆದರೆ ಆನೆಗೆ ನೀರಿಡುವ ಕೊಪ್ಪರಿಗೆ ಕಾಣಿಸುತ್ತಿರಲಿಲ್ಲ.

    ಇಲ್ಲಿ ಆ ಕೊಪ್ಪರಿಗೆ ಇತ್ತು ಎಂಬ ಮಾತನ್ನು ಕೇಳಿದ ವಿದ್ಯಾರ್ಥಿಗಳಾದ ಸುಹಾಸ ಮಲ್ಯ, ಸಮರ್ಥ, ರಿತೀಶ್, ಅನ್ವಿತ್ ಮಲ್ಯ ಆಸಕ್ತಿಯಿಂದ ಅದನ್ನು ಹುಡುಕಿ ಹೊರಗೆ ತೆಗೆದಿದ್ದಾರೆ.

    DAKSHINA KANNADA

    ಉಡುಪಿ: ನಡು ರಸ್ತೆಯಲ್ಲೇ ಗ್ಯಾಂಗ್ ವಾರ್..! ಹೊಡೆದಾಟದ ವೀಡಿಯೋ ವೈರಲ್

    Published

    on

    ಉಡುಪಿ: ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದ ಘಟನೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    gang war udupi

    ಕಾಪು ಮೂಲದ ಎರಡು ತಂಡಗಳ ಯುವಕರು ಉಡುಪಿ ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳಲ್ಲಿ ಬಂದು‌ ಜಗಳ ಮಾಡಿಕೊಂಡು ಕಾರಿನಲ್ಲಿಯೇ ಹೊಡೆದಾಟ ಮಾಡಿಕೊಂಡಿದ್ದಾರೆ. ಮೇ 18ರಂದು ಉಡುಪಿ ಕುಂಜಿಬೆಟ್ಟುವಿನಲ್ಲಿ ನಡೆದಿರುವ ಈ  ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಉಡುಪಿ ಶಾರದಾ ಕಲ್ಯಾಣ ಮಂಟಪಕ್ಕೆ ತೆರಳುವ ರಸ್ತೆಯ ಬಳಿ ನಡೆದ ಘಟನೆ ನಡೆದಿದ್ದು, ಒಂದು ಕಾರಿಗೆ ಇನ್ನೊಂದು ಕಾರು ಮೂಲಕ ಡಿಕ್ಕಿ ಹೊಡೆದಿದ್ದು, ತಂಡದ ಓರ್ವ ಸದಸ್ಯನಿಗೂ ಡಿಕ್ಕಿ ಹೊಡೆಯಲಾಗಿದೆ. ಅಲ್ಲದೆ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆಗೆ ಮುಂದಾಗಿದ್ದಾರೆ.

    Read More..; ನಾಲ್ವರನ್ನು ಬಲಿ ಪಡೆದ ರಸ್ತೆ ಅಪಘಾತ..! ಧರ್ಮಸ್ಥಳದಿಂದ ವಾಪಾಸಾಗುವಾಗ ಘಟನೆ..!

    ಈ ದೃಶ್ಯವನ್ನು ಸಮೀಪದ ಕಟ್ಟಡ ಮೇಲಿಂದ ಸ್ಥಳೀಯರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಇಷ್ಟೊಂದು ಕ್ರೂರವಾಗಿ ನಗರದಲ್ಲಿ ಗ್ಯಾಂಗ್ ವಾರ್ ನಡೆದಿರುವುದು  ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಗೆ ಜೂ. 1 ರ ವರೆಗೆ‌ ನ್ಯಾಯಂಗ ಬಂಧನ ವಿಧಿಸಿದ್ದಾರೆ. ಉಡುಪಿ ನಗರ‌ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

    Continue Reading

    LATEST NEWS

    ಕುತ್ತಾರಿಗೆ ಭೇಟಿ ನೀಡಿದ ಕ್ರೇಜಿ ಸ್ಟಾರ್ ಮಕ್ಕಳು..ಅವಳಿ ನಟಿಯರ ಜೊತೆ ಆಗಮನ

    Published

    on

    ಮಂಗಳೂರು: ತುಳುನಾಡು ಕ್ಷೇತ್ರ ದೈವ ದೇವರುಗಳ ನೆಲೆಬೀಡು. ಕುತ್ತಾರು ಹರಕೆ ಫಲಿಸಿದ ಖುಷಿಯಲ್ಲಿ ಅದೆಷ್ಟೋ ಸೆಲೆಬ್ರಿಟಿಗಳು ದೈವಗಳ ಸಾನಿಧ್ಯಕ್ಕೆ ಬರುತ್ತಲೇ ಇರುತ್ತಾರೆ.  ಸ್ವಾಮಿ ಕೊರಗಜ್ಜ ದೈವವು ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದೆ. ದಿನೇ ದಿನೆ ಪ್ರಸಿದ್ದಿ ಪಡೆದುಕೊಳ್ಳುತ್ತಿರುವ ಕುತ್ತಾರಿನ ಕೊರಗಜ್ಜ ಕ್ಷೇತ್ರಕ್ಕೆ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮಕ್ಕಳು ಭೇಟಿ ನೀಡಿದ್ದಾರೆ. ಕ್ಷೇತ್ರದವರೇ ಆಗಿರುವ ಹಾಗೂ ನಟಿಯರಾಗಿರುವ ಅದ್ವಿತಿ ಶೆಟ್ಟಿ ಹಾಗು ಅಶ್ವಿತಿ ಶೆಟ್ಟಿ ಅವರ ಜೊತೆ ಕ್ಷೇತ್ರಕ್ಕೆ ಆಗಮಿಸಿ ಕೊರಗಜ್ಜನ ಆಶೀರ್ವಾದ ಪಡೆದುಕೊಂಡಿದ್ದಾರೆ.

    koragajja

    Read More..; ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ನಟ ದರ್ಶನ್‌ ಭೇಟಿ

    ಕೆಲ ದಿನಗಳ ಹಿಂದೆ ನಟ ದರ್ಶನ್, ರಕ್ಷಿತಾ ಪ್ರೇಮ್ ಸೇರಿದಂತೆ ಸ್ಟಾರ್ ನಟರುಗಳು  ಅಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದ್ದರು. ಇದೀಗ ರವಿಚಂದ್ರನ್ ಮಕ್ಕಳಾದ ಮನೋರಂಜನ್‌ , ವಿಕ್ರಮ್ ಹಾಗೂ ಪುತ್ರಿ ಗಿತಾಂಜಲಿ ಅವರು ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಕಾರ್ಕಳದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ ಅವಳಿ ಶೆಟ್ಟಿ ಸಹೋದರಿಯರ ಜೊತೆ ಕ್ಷೇತ್ರಕ್ಕೆ ಆಗಮಿಸಿ ಅಜ್ಜನ ಆಶೀರ್ವಾದ ಪಡೆದುಕೊಂಡಿದ್ದಾರೆ.

    Continue Reading

    DAKSHINA KANNADA

    ನಾಲ್ವರನ್ನು ಬಲಿ ಪಡೆದ ರಸ್ತೆ ಅಪಘಾತ..! ಧರ್ಮಸ್ಥಳದಿಂದ ವಾಪಾಸಾಗುವಾಗ ಘಟನೆ..!

    Published

    on

    ಪುಣ್ಯಕ್ಷೇತ್ರದ ದರ್ಶನ ಮುಗಿಸಿ ವಾಪಾಸಾಗುತ್ತಿದ್ದ ಕುಟುಂಬವೊಂದರ ವಾಹನ ಅಪಘಾತವಾಗಿ ನಾಲ್ವರು ಅಸುನೀಗಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣ್ಕಲ್‌ನಲ್ಲಿ ಈ ಅಪಘಾತ ಸಂಭಂವಿಸಿದ್ದು, ಮೃತರು ಚಿತ್ರದುರ್ಗ ಮೂಲದವರಾಗಿದ್ದಾರೆ.


    ಪುಣ್ಯಕ್ಷೇತ್ರದ ದರ್ಶನಕ್ಕೆಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದ ಚಿತ್ರದುರ್ಗದ ಕುಟುಂಬ ಧರ್ಮಸ್ಥಳಕ್ಕೆ ಭೇಟಿ ನೀಡಿ ವಾಪಾಸಾಗುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಬಣ್ಕಲ್‌ ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಈ ಅಪಘಾತ ನಡೆದಿದ್ದು ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಇಹಲೋಕ ತ್ಯಜಿಸಿದ್ದಾರೆ. ಮೂವರು ಪುರುಷರು ಹಾಗೂ ಓರ್ವ ಮಹಿಳೆ ಸ್ಥಳದ್ಲಲೇ ಅಸುನೀಗಿದ್ದರೆ, ಮೂವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರುತಿ ಒಮ್ನಿ ವಾಹನದಲ್ಲಿ ಬಂದಿದ್ದ ಕುಟುಂಬ ಬಣ್ಕಲ್ ಸಮೀಪ ಲಾರಿಯೊಂದನ್ನು ಓವರ್‌ಟೇಕ್ ಮಾಡಲು ಯತ್ನಿಸಿದೆ. ಈ ವೇಳೆ ಅಪಘಾತ ಸಂಭವಿಸಿದ್ದು, ಅಪಘಾತದ ತೀವೃತೆಗೆ ಒಮ್ನಿ ಸಂಪೂರ್ಣ ನುಜ್ಜುಗುಜ್ಜಾಗಿ ಹೋಗಿದೆ.ಇನ್ನು ಒಮ್ನಿ ಹಿಂಬದಿಯಲ್ಲಿ ಬರುವ ವಾಹನವೊಂದು ಒಮ್ನಿಗೆ ಡಿಕ್ಕಿ ಹೊಡೆದಿದ್ದು ಜಕಂ ಗೊಂಡಿದೆ. ಆದರೆ ಒಮ್ನಿ ವಾಹನದಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

    ವಾಹನ ಅಪಘಾತದಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡು ಸ್ಥಳಕ್ಕೆ ಬಂದ ಬಣ್ಕಲ್ ಪೊಲೀಸರು ರಸ್ತೆ ಸಂಚಾರ ಸುಗಮ ಗೊಳಿಸಿದ್ದಾರೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು ಮೂವರೂ ಕೂಡಾ ಗಂಭೀರವಾಗಿದ್ದಾರೆ. ಬಣ್ಕಲ್ ಪರಿಸರದಲ್ಲಿ ಕಳೆದ ಕೆಲ ಸಮಯದಲ್ಲಿ ನಡೆದ ಎರಡನೇ ಬೀಕರ ಅಪಘಾತ ಇದಾಗಿದೆ. ಕಳೆದ ಬಾರಿಯೂ ಚಿತ್ರದುರ್ಗದ ಕುಟುಂಬವೊಂದು ಧರ್ಮಸ್ಥಳದಿಂದ ವಾಪಾಸಾಗುತ್ತಿದ್ದಾಗ ಇಲ್ಲಿ ಅಪಘಾತವಾಗಿ ಜೀವಹಾನಿಯಾಗಿತ್ತು.

    Continue Reading

    LATEST NEWS

    Trending