Connect with us

LATEST NEWS

ಭಟ್ಕಳ: ಕಟ್ಟಿಗೆ ತುಂಬಿದ್ದ ಲಾರಿ ಮಗುಚಿ ಬಿದ್ದು ಚಾಲಕನಿಗೆ ಗಾಯ

Published

on

ಭಟ್ಕಳ: ಲಾರಿಯೊಂದು ಮಗುಚಿ ಬಿದ್ದ ಕಾರಣ ಚಾಲಕ ಗಾಯಗೊಂಡ ಘಟನೆ ಭಟ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.


ಲಾರಿಯ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಲಾರಿಯಲ್ಲಿದ್ದ ಕಟ್ಟಿಗೆಯು ರಸ್ತೆ ಮೇಲೆ ಚೆಲ್ಲಾಪಿಲ್ಲಿ ಬಿದ್ದಿದ್ದು ಸ್ವಲ್ಪ ಕಾಲ ಸಂಚಾರಕ್ಕೆ ವ್ಯತ್ಯಯವಾಯಿತು.


ಮಂಗಳೂರು ಕಡೆಯಿಂದ ಹೊನ್ನಾವರ ಕಡೆಗೆ ತೆರಳುತ್ತಿದ್ದ ಲಾರಿಯು ಸರ್ಪನಕಟ್ಟೆಯ ಬಳಿಯಲ್ಲಿ ಪೊಲೀಸ್ ಚೆಕ್‌ಪೋಸ್ಟ್ ಸಮೀಪ ತಲುಪುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತೆನ್ನಲಾಗಿದೆ.


ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

 

LATEST NEWS

ಮೂರು ವರ್ಷದ ಮಗುವಿನ ಎದೆಗೆ ಕಾಲಿಟ್ಟು ಕೊಂ*ದ ಪಾಪಿ..! ಬೆಳಗಾವಿಯಲ್ಲೊಂದು ಅಮಾನುಷ ಘಟನೆ

Published

on

ಬೆಳಗಾವಿ: ಮೂರು ವರ್ಷದ ಮಗುವಿನ ಎದೆ ಮೇಲೆ ಕಾಲಿಟ್ಟು, ತುಳಿದು ಹ*ತ್ಯೆ ಮಾಡಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿಯಲ್ಲಿ ನಡೆದಿದೆ.

ಬುರ್ಲಟ್ಟಿ ಗ್ರಾಮದ ಶ್ರೀನಿಧಿ ಕಾಡಪ್ಪ ಕಾಳಾಪಾಟೀಲ್ ಮೂರು ವರ್ಷದ ಮೃತಪಟ್ಟಿರುವ ಮಗು.  ಜೋತಿಭಾ ತುಕಾರಾಮ ಬಾಬಾಬರ ಎಂಬವನು ಮಗುವನ್ನು ಕೊಂ*ದವರು ಎಂದು ತಿಳಿದು ಬಂದಿದೆ. ಮಗುವಿನ ತಂದೆ ಕಾಡಪ್ಪ ಕಾಳಪಾಟೀಲಗೆ ಕಳೆದ ವರ್ಷ ಜೋತಿಭಾ ಬಾಬಾಬರ ಐವತ್ತು ಸಾವಿರ ಸಾಲ ನೀಡಿದ್ದ ಎನ್ನಲಾಗಿದೆ. ಈ ಹಣವನ್ನು ವಾಪಸ್‌ ನೀಡುವಂತೆ ಕಾಳಪ್ಪನಿಗೆ ಕೇಳಿದಾಗ ಶನಿವಾರ ಬೆಳಗ್ಗೆ ಜೋತಿಭಾ ಕಾಳಪ್ಪನ ಮನೆ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದಾಗಿ ಇಬ್ಬರ ನಡುವೆ ಜಗಳ ತಾರಕಕ್ಕೇರಿ ಜೋತಿಭಾ ತುಕಾರಾಮ ಬಾಬಾಬರ ಮಗುವಿನ ಎದೆ ಮೇಲೆ ಕಾಲಿಟ್ಟು ಕೊಂದಿದ್ದಾನೆ ಎಂದು ಮೃತಪಟ್ಟ ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.

ಮುಂದೆ ಓದಿ..: ಸಾ*ವಿನಲ್ಲಿ ಒಂದಾದ ತಂದೆ ಮಗ.. ತಂದೆಯ ಅಗಲಿಕೆ ನೋವಲ್ಲೇ ಅಸುನೀಗಿದ ಮಗ..!

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

ಸಾ*ವಿನಲ್ಲೂ ಒಂದಾದ ತಂದೆ ಮಗ.. ತಂದೆಯ ಅಗಲಿಕೆ ನೋವಲ್ಲೇ ಅಸುನೀಗಿದ ಮಗ..!

Published

on

ಕೊಪ್ಪಳ: ಒಂದೇ ದಿನದಲ್ಲಿ ತಂದೆ ಮಗ ಇಬ್ಬರೂ ಸಾವನ್ನಪ್ಪಿದ ಘಟನೆ ಕೊಪ್ಪಳದ ಬಂಡಿಹರ್ಲಾಪುರಾದಲ್ಲಿ ನಡೆದಿದೆ. ತಂದೆಯ ಸಾವಿನ ನೋವಿನಲ್ಲಿ ಮಗ ಕೂಡಾ ಸಾವನ್ನಪ್ಪಿದ್ದಾರೆ. ಮೃ*ತರನ್ನು ರಾಮರೆಡ್ಡಿ (70) ಮತ್ತು ಆದಿನಾರಾಯಣ ರೆಡ್ಡಿ (42) ಎಂದು ಗುರುತಿಸಲಾಗಿದೆ.

death

ಮುಂದೆ ಓದಿ..; ಎರಡು ಲಾರಿಗಳ ಮಧ್ಯೆ ಅಪಘಾತ; ಚಾಲಕ ಗಂಭೀರ

ರಾಮರೆಡ್ಡಿ ಅನಾರೋಗ್ಯದಿಂದ ಬಳಲುತ್ತಿದ್ದು, ನಿನ್ನೆ(ಎ.28) ಬೆಳಿಗ್ಗೆ ಮೃತಪಟ್ಟಿದ್ದರು. ಅದೇ ದಿನ ರಾತ್ರಿ 8.30ಕ್ಕೆ ಮಗ ಆದಿನಾರಾಯಣ ರೆಡ್ಡಿ ಕೂಡ ಪ್ರಾಣ ಬಿಟ್ಟಿದ್ದಾರೆ. ಆದಿನಾರಾಯಣ ತಂದೆಯನ್ನು ಬಹಳ ಪ್ರೀತಿಸುತ್ತಿದ್ದು, ತಂದೆಯ ಸಾವಿನ ದುಃಖದಲ್ಲಿ ಕುಳಿತಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಆದಿನಾರಾಯಣ ರೆಡ್ಡಿ, ಪತ್ನಿ ಹಾಗೂ ತನ್ನೆರಡು ಮಕ್ಕಳನ್ನು ಅಗಲಿದ್ದಾರೆ.

Continue Reading

DAKSHINA KANNADA

ಎರಡು ಲಾರಿಗಳ ಮಧ್ಯೆ ಅಪಘಾತ; ಚಾಲಕ ಗಂಭೀ*ರ

Published

on

ಮಂಗಳೂರು: ಬೈಕಂಪಾಡಿ ಹೋಟೆಲ್ ಶ್ರೀ ದ್ವಾರದ ಬಳಿ ಲಾರಿಗಳೆರಡರ ನಡುವೆ ಅಪಘಾತ ಸಂಭವಿಸಿ ಲಾರಿ ಚಾಲಕ ಗಂಭಿರ ಗಾಯಗೊಂಡ ಘಟನೆ ನಡೆದಿದೆ. ಒಂದು ಲಾರಿಯೊಂದು ಗ್ರಾನೈಟ್ ಅಂಗಡಿಯೊಳಗೆ ನುಗ್ಗಿದ್ದು, ಅಪಾರ ಮೌಲ್ಯದ ಗ್ರಾನೈಟ್‌ ಹಾನಿಗೊಂಡಿದೆ.

ಮುಂದೆ ಓದಿ..; ಪುತ್ತೂರು : ಧರೆಗುರುಳಿದ ಬೃಹದಾಕಾರದ ಮರ; ಮಾವಿನಕಾಯಿಗಾಗಿ ಮುಗಿಬಿದ್ದ ಜನ!

accident

ಲಾರಿ ಸಾಗಾಟ ಮಾಡುತ್ತಿದ್ದ ಲಾರಿ ಅಪಘಾತದಿಂದ ನಜ್ಜುಗುಜ್ಜಾಗಿದೆ. ಇನ್ನು ಇದೇ ಭಾಗದಲ್ಲಿ ನಿತ್ಯವೂ ಮಹಿಳೆಯರು ಮೀನ ಮಾರಾಟ ಮಾಡುತ್ತಿದ್ದರು. ಅದೃಷ್ಟವಶಾತ್ ಇದೀಗ ಭಾರೀ ಅನಾಹುತ ತಪ್ಪಿದೆ.

 

Continue Reading

LATEST NEWS

Trending