Connect with us

LATEST NEWS

ಚಕ್ರವರ್ತಿ ಸೂಲಿಬೆಲೆಯ ಚಿಂತನೆ ಪಠ್ಯದಲ್ಲಿದ್ದರೆ ತಪ್ಪೇನು: ಶಾಸಕ ಜಗದೀಶ ಶೆಟ್ಟರ್‌ ಪ್ರಶ್ನೆ

Published

on

ಹುಬ್ಬಳ್ಳಿ: ಚಕ್ರವರ್ತಿ ಸೂಲಿಬೆಲೆ ಅವರ ಹಿಂದೂಪರ ಚಿಂತನೆಗಳನ್ನು ಶಾಲಾ ಪಠ್ಯ–ಪುಸ್ತಕಗಳಲ್ಲಿ ಅಳವಡಿಸಿದರೆ ತಪ್ಪೇನು’ ಎಂದು ಶಾಸಕ ಜಗದೀಶ ಶೆಟ್ಟರ್ ಪ್ರಶ್ನಿಸಿದ್ದಾರೆ.


ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಚಕ್ರವರ್ತಿ ಸೂಲಿಬೆಲೆ ಅವರ ಲೇಖನಗಳನ್ನು, ಪುಸ್ತಕಗಳನ್ನು ನಾನು ಓದಿದ್ದೇನೆ.

ಅವರ ಅನೇಕ ಭಾಷಣಗಳನ್ನು ಸಹ ಕೇಳಿದ್ದೇನೆ. ಹಿಂದೂ ಸಮಾಜದ ಸಂಘಟನೆ ಮತ್ತು ಉದ್ಧಾರಕ್ಕೆ ಅವರು ಶ್ರಮಿಸುತ್ತಿದ್ದಾರೆ. ಅವರಂಥ ಚಿಂತಕ, ವಾಗ್ಮಿಯನ್ನು ನಾ ಎಲ್ಲಿಯೂ ನೋಡಿಲ್ಲ.

ಅಂಥವರ ವೈಚಾರಿಕ ಲೇಖನಗಳನ್ನು‌ ಶಾಲಾ ಪಠ್ಯ–ಪುಸ್ತಕದಲ್ಲಿ ಸೇರಿಸಿದರೆ ಯಾವುದೇ ತೊಂದರೆ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಜ್ಞಾನವೃದ್ಧಿಯಾಗಲು ಸಹಕಾರಿಯಾಗಲಿದೆ’. ‘ಟಿಪ್ಪುವಿನ ಪಾಠ ಕೈಬಿಟ್ಟದರಲ್ಲಿ ಏನೂ ತಪ್ಪಿಲ್ಲ. ಆತ ಒಬ್ಬ ನರಭಕ್ಷಕ ಎಂದರು.

BANTWAL

ULLALA : ನೇಣಿಗೆ ಶರಣಾದ ಇಬ್ಬರು ಪುಟ್ಟ ಮಕ್ಕಳ ತಂದೆ

Published

on

ಉಳ್ಳಾಲ :   ಎರಡು ಪುಟ್ಟ ಮಕ್ಕಳ ತಂದೆಯೋರ್ವರು ನೇಣಿಗೆ ಶರಣಾದ ಘಟನೆ ಉಳ್ಳಾಲದ ಕುಂಪಲದ ಹನುಮಾನ್ ನಗರದಲ್ಲಿ ಸೋಮವಾರ(ಏ. 29) ಮುಂಜಾನೆ ನಡೆದಿದೆ. 44 ವರ್ಷ ಯೋಗೀಶ್ ಆತ್ಮಹ*ತ್ಯೆಗೈದ ವ್ಯಕ್ತಿ.

ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಯೋಗೀಶ್ ಸೋಮವಾರ ಬೆಳಗ್ಗೆ ತಮ್ಮ ಮನೆಗೆ ತಾಗಿಕೊಂಡಿರುವ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾರೆ. ಯೋಗೀಶ್ ಸ್ವಸಹಾಯ ಗುಂಪೊಂದರ ಸದಸ್ಯರಾಗಿದ್ದು, ಸಂಘದ ನಲ್ವತ್ತು ಸಾವಿರ ರೂಪಾಯಿಗಳನ್ನ ಬ್ಯಾಂಕಿಗೆ ಕಟ್ಟದೆ ಖರ್ಚು ಮಾಡಿದ್ದರು ಎನ್ನಲಾಗಿದೆ.

ಈ ಬಗ್ಗೆ ಸಂಘದ ಉಳಿದ ಸದಸ್ಯರು ಭಾನುವಾರ ಬೆಳಗ್ಗೆ ಮತ್ತು ಸಂಜೆ ಯೋಗೀಶ್ ಅವರ ಮನೆಗೆ ತೆರಳಿ ಹಣ ಕಟ್ಟುವಂತೆ ಪೀಡನೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದೇ ಅವಮಾನದಲ್ಲಿ ಯೋಗೀಶ್ ಆತ್ಮಹ*ತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ.

ಇದನ್ನೂ ಓದಿ : ಮೇ 3 ರಂದು ಕುದ್ರೆಬೆಟ್ಟು ಕಾರಣಿಕದ ಕಲ್ಲುರ್ಟಿ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವ; ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ!

ಉಳ್ಳಾಲ ಠಾಣಾ ಪೊಲೀಸರು ಮೃ*ತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿದ್ದಾರೆ.

ಯೋಗೀಶ್ ಪತ್ನಿಯೂ ಆತ್ಮಹತ್ಯೆಗೆ ಯತ್ನ:

ಯೋಗೀಶ್ ಸಾ*ವನ್ನಪ್ಪಿದನ್ನು ಕಂಡ ಪತ್ನಿಯೂ ನೇಣು ಬಿಗಿದು ಆತ್ಮ ಹ*ತ್ಯೆಗೈಯಲು ಮುಂದಾಗಿದ್ದಾರೆ. ಘಟನಾ ಸ್ಥಳದಲ್ಲಿ ನೆರೆದಿದ್ದ ಸ್ಥಳೀಯರು ಆಕೆಯನ್ನ ತಡೆದು ಸಂತೈಸಿದ್ದಾರೆ. ಮೃ*ತ ಯೋಗೀಶ್ ಇಬ್ಬರು ಪುಟ್ಟ ಗಂಡು ಮಕ್ಕಳು, ಪತ್ನಿ, ತಾಯಿಯನ್ನು ಅಗಲಿದ್ದಾರೆ.

Continue Reading

BANTWAL

ಮೇ 3 ರಂದು ಕುದ್ರೆಬೆಟ್ಟು ಕಾರಣಿಕದ ಕಲ್ಲುರ್ಟಿ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವ; ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ!

Published

on

ಬಂಟ್ವಾಳ : ಕಲ್ಲಡ್ಕ ಬಾಳ್ತಿಲ ಗ್ರಾಮದಲ್ಲಿದೆ ಕಾರಣಿಕದ ಕರ್ಲುರ್ಟಿ ಕ್ಷೇತ್ರ. ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ.  ಈ ದೈವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವದ ಸಿದ್ಧತೆ ಭರದಿಂದ ಸಾಗುತ್ತಿದೆ.

ಪವಾಡ ತೋರಿದ್ದ ಕಲ್ಲುರ್ಟಿ :

ಈಗಾಗಲೇ ತಿಳಿಸಿದಂತೆ ಈ ದೈವಸ್ಥಾನ ಹಿಂದು -ಮುಸಲ್ಮಾನ ಭಾಂದವರ ಭಾವೈಕ್ಯತೆಯ ಸಾನಿಧ್ಯ. ಕುದ್ರೆಬೆಟ್ಟುವಿನ ಒಂದು ಮುಸನ್ಮಾನ ಕುಟುಂಬ ಕಲ್ಲುರ್ಟಿ ದೈವವನ್ನು ನಂಬುತ್ತಿದ್ದರು. ಐಸಮ್ಮ ಎಂಬ ಮಹಿಳೆಯ ಕುಟುಂಬ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದರು. ಇದರಿಂದ ಬೇಸತ್ತ ಕುಟುಂಬಕ್ಕೆ ಆ ಜಾಗದಲ್ಲಿ ಅಗೋಚರ ಶಕ್ತಿಯೊಂದು ಇರುವುದು ತಿಳಿಯುತ್ತದೆ. ನಂತರ ಅವರು ‘ಕಲ್ಲುರ್ಟಿ’ಯನ್ನು ಕಲ್ಲಿನ ರೂಪದಲ್ಲಿ ನಂಬಲು ಆರಂಭಿಸುತ್ತಾರೆ. ಕಷ್ಟ ಎಂದು ತನ್ನಲ್ಲಿಗೆ ಬಂದವರಿಗೆ ಐಸಮ್ಮ ಕಲ್ಲುರ್ಟಿಯ ಸ್ಮರಿಸಿ ಕಪ್ಪು ದಾರ ನೀಡುತ್ತಿದ್ದರು. ಇದರಿಂದ ಅವರ ತೊಂದರೆಗಳೆಲ್ಲ ನಿವಾರಣೆಯಾಗುತ್ತಿತ್ತು ಎಂಬ ನಂಬಿಕೆಯಿದೆ.

 

ಮನೆಯಲ್ಲಿ ವಿಶೇಷ ಅಡುಗೆ ಮಾಡಿದರೆ, ಆಕೆ ದೈವಕ್ಕೆ ಬಡಿಸದೇ ಸೇವಿಸುತ್ತಿರಲಿಲ್ಲ. ಒಂದುವೇಳೆ ತಪ್ಪಿದ್ದಲ್ಲಿ ಅಡುಗೆ ಮಾಡಿಟ್ಟಿದ್ದ ಪಾತ್ರೆಯೇ ದೈವದ ಕಲ್ಲಿನತ್ತ ಚಲಿಸುತ್ತಿತ್ತಂತೆ. ಆದರೆ, ಕಾಲಕ್ರಮೇಣ ಆ ಕುಟುಂಬ ಮನೆಯನ್ನು ಮಾರಿ ಬೇರೆ ಕಡೆ ಹೊರಟು ಹೋಗಿದ್ದರು.

ಮತ್ತೆ ಬೆಳಕಿಗೆ ಬಂದ ಕ್ಷೇತ್ರ :

ಆ ಮುಸಲ್ಮಾನ ಕುಟುಂಬವೇನೋ ಹೊರಟು ಹೋಯಿತು. ಶಕ್ತಿ ಅಲ್ಲೇ ಉಳಿಯಿತು. ಈ ಘಟನೆ ನಡೆದು ಹಲವು ದಶಕಗಳೇ ಕಳೆದಿವೆ. 15 ವರ್ಷಗಳಿಂದ ಇಲ್ಲಿ ಹಲವು ಘಟನೆಗಳು ನಡೆಯುತ್ತಿವೆ. ಇತ್ತೀಚೆಗೆ ಮಣಿಕಂಠ ಯುವಶಕ್ತಿ ಕೇಂದ್ರ ಭಜನಾ ಮಂದಿರವೊಂದನ್ನು ಸ್ಥಾಪಿಸುವ ಕೆಲಸ ಆರಂಭಿಸಿತ್ತು. ಆದರೆ, ಇದಕ್ಕೆ ತಡೆ ಬರಲಾರಂಭಿಸಿದಾಗ, ಮಂದಿರದಲ್ಲಿ ಪ್ರಶ್ನೆ ಇಟ್ಟಾಗ ‘ಯುವಶಕ್ತಿ’ ಯ ಯುವಕರು ತಾಯಿ ಕಲ್ಲುರ್ಟಿಯನ್ನು ನಂಬಬೇಕು ಎಂಬ ಅಪ್ಪಣೆಯಾಯಿತು.

ನಾವು ಬಿಟ್ಟೆವೆಂದು ದೈವ ಬಿಡುವುದೇ..? ಪೂ – ನೀರ್(ಹೂ-ನೀರು) ಸಲ್ಲದೇ ಹೋದಲ್ಲಿ ಹೇಗೆ? ಅಂತೆಯೇ, ಹಳೆಯ ದೈವಸ್ಥಾನ ಜೀರ್ಣೋದ್ಧಾರಗೊಂಡು ಹೊಸ ರೂಪ ಪಡೆದು ನಿಂತಿದೆ.

20 ದಿನಗಳಲ್ಲಿ ನಡೆಯಿತು ಜೀರ್ಣೋದ್ಧಾರ :

ದೈವದ ಅಭಯ ಯುವಕರ ಮೇಲಿತ್ತು. ಇಡೀ ಊರೇ ಅಚ್ಚರಿ ಪಡುವಂತೆ ತಾಯಿಯ ದೈವಸ್ಥಾನದ ಕಾರ್ಯ ನಡೆಯಿತು.  ಕೇವಲ 20 ದಿನಗಳಲ್ಲಿ ಅಪ್ಪೆ ಕಲ್ಲುರ್ಟಿಯ ಕ್ಷೇತ್ರ ತಲೆ ಎತ್ತಿ ನಿಂತಿತು ಅಂದರೆ ನೀವು ನಂಬಲೇ ಬೇಕು. ಕ್ಷೇತ್ರದ ಜೀರ್ಣೋದ್ಧಾರಕ್ಕಾಗಿ ಹಗಲಿರುಳು ಯುವಕರು ಶ್ರಮಿಸಿದ್ದಾರೆ. ಹುಬ್ಬೇರಿಸುವಂತಹ ಕೆಲಸ ಮಾಡಿದ ಶ್ರೀ ಮಣಿಕಂಠ ಯುವಶಕ್ತಿ ತಂಡದ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ಕಾರ್ಯಕ್ರಮಗಳ ವಿವರ :

ಕುದ್ರೆಬೆಟ್ಟು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಮೇ.3 ರಂದು ಶ್ರೀ ಕಲ್ಲುರ್ಟಿ ದೈವದ ಪುನಃ ಪ್ರತಿಷ್ಠಾ ಮಹೋತ್ಸವ ಹಾಗೂ ಶ್ರೀ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲ ನಡೆಯಲಿದೆ. ಮೇ.02 ರಂದು ಬೆಳಿಗ್ಗೆ ಶ್ರೀ ಮಣಿಕಂಠ ಸನ್ನಿಧಾನದಲ್ಲಿ ಗಣಹೋಮ, ಸಂಜೆ ಶಾಸ್ತ್ರ, ಕಲ್ಪೋಕ್ತ ಪೂಜೆ, ವಾಸ್ತು ಹೋಮಾದಿ ಅಧಿವಾಸ ನಡೆಯಲಿದೆ. ಸಂಜೆ 6.30 ರಿಂದ ‘ನಮ್ಮ ಕುಡ್ಲ’ ವಾಹಿನಿ ಖ್ಯಾತಿಯ ‘ಯಕ್ಷ ತೆಲಿಕೆ’ ಕಾರ್ಯಕ್ರಮ ನಡೆಯಲಿದೆ.

ಮೇ.03 ರಂದು ಬೆಳಿಗ್ಗೆ ಗಣಹೋಮ ಬಳಿಕ 10.00 ರಿಂದ 10.25ರ ಒಳಗೆ ಒದಗುವ ಮಿಥುನ ಲಗ್ನದ ಸುಮೂಹೂರ್ತದಲ್ಲಿ ಶ್ರೀ ಸೂರ್ಯನಾರಾಯಣ ಭಟ್ ಕಶೆಕೋಡಿ ಇವರ ವೈದಿಕತ್ವದಲ್ಲಿ ಶ್ರೀ ಕಲ್ಲುರ್ಟಿ ದೈವದ ಪ್ರತಿಷ್ಠೆ, ಸಾನಿಧ್ಯ ನವಕ ಕಲಶಾಭಿಷೇಕ, ಪರ್ವ ಸೇವೆ ನಡೆಯಲಿದೆ.

ಇದನ್ನೂ ಓದಿ : ಪುತ್ತೂರು: ಮಳೆಗಾಗಿ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ; ಶಾಸಕರು ಭಾಗಿ

ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಹಾಗೂ ಅನ್ನಸಂತರ್ಪಣೆ ನಡೆದು, ರಾತ್ರಿ ಶ್ರೀ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲ ನಡೆಯಲಿದೆ.

Continue Reading

FILM

“ಮದುವೆ ಗೌನ್‌”ಗೆ ಮತ್ತೊಂದು ಟಚ್ ಕೊಟ್ಟ ‘ಸಮಂತಾ’..!! ಶಾಕ್‌ನಲ್ಲಿಅಭಿಮಾನಿಗಳು!

Published

on

ತೆಲುಗಿನ ಸ್ಟಾರ್ ಸಮಂತಾ ರುತ್ ಪ್ರಭು ಸದಾ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ನಟಿ. 2017ರಂದು ಸಮಂತಾ-ನಾಗಚೈತನ್ಯ  ಇವರಿಬ್ಬರ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಜೋಡಿಹಕ್ಕಿಗಳಂತಿದ್ದ ಈ ಸ್ಟಾರ್ ನಟ-ನಟ ಎಲ್ಲರಿಗೂ ಫೇವರೆಟ್ ಕಪಲ್ ಆಗಿದ್ರು. ಆದರೆ ಕೆಲವೇ ವರ್ಷಗಳಲ್ಲಿ ಇವರಿಬ್ಬರ ಜೀವನದಲ್ಲಿ ಬಿರುಕು ಮೂಡಿ ವಿಚ್ಛೇದನದ ಮೊರೆ ಹೋಗ್ತಾರೆ. ಇಬ್ಬರ ವಿಚ್ಚೇದನದ ಬಳಿಕ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿತ್ತು. ನೆಟ್ಟಿಗರು ಇವರಿಬ್ಬರ ವಿಚ್ಚೇದನಕ್ಕೆ ತೀವ್ರ ಬೇಸರ ಹೊರ ಹಾಕಿದ್ದರು.

samantha

ಸಮಂತಾ ವಿಚ್ಛೇದನದ ಬಳಿಕ ವಿಚಿತ್ರ ಕಾಯಿಲೆ ಮಯೋಸಿಟಿಸ್ ಗೆ ತುತ್ತಾಗುತ್ತಾರೆ. ಬಳಿಕ ಸಾಕಷ್ಟು ಏಳು ಬೀಳುಗಳನ್ನು ಕಂಡ ಸಮಂತಾ ಚಿತ್ರರಂಗದಲ್ಲಿ ಮತ್ತೆ ಬಣ್ಣ ಹಚ್ಚಿ ತಮ್ಮ ಸ್ಟಾರ್ ಗಿರಿಯನ್ನು ಉಳಿಸಿಕೊಂಡಿದ್ದಾರೆ. ಕಲವು ದಿನಗಳ ಹಿಂದೆ ಸಮಂತಾ-ನಾಗಚೈತನ್ಯ ಮತ್ತೆ ಒಂದಾಗುತ್ತಾರೆ ಎಂಬ ರೂಮರ್ಸ್ ಹರಿದಾಡಿತ್ತು. ಅಭಿಮಾನಿಗಳೂ ಕೂಡಾ ಖುಷಿಯಲ್ಲಿದ್ದರು. ಆದರೆ  ಇವರಿಬ್ಬರು ಅದಕ್ಕೆಲ್ಲ ನೀರೆರೆಚಿದ್ದಾರೆ. ಈ ಮಧ್ಯೆ ನಾಗಚೈತನ್ಯ, ಶೋಭಿತಾ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ಕೂಡಾ ಚಿತ್ರರಂಗದಲ್ಲಿ ಪಿಸುಗುಡ್ತಾ ಇದೆ.

ಮುಂದೆ ಓದಿ..; ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆಯ ಗರಿ; ಜಪಾನ್ ನತ್ತ 777 ಚಾರ್ಲಿ!

ಮದುವೆ ಗೌನ್‌ಗೆ ಮತ್ತೊಂದು ರೂಪ ಕೊಟ್ಟ ಸ್ಯಾಮ್.:

ಇದೀಗ ಸಮಂತಾ ಇನ್ನೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಸಮತಂತಾ ತನ್ನ ವೆಡ್ಡಿಂಗ್‌ ನಲ್ಲಿ ವೈಟ್‌ ಗೌನ್‌ ಧರಿಸಿ ಎಲ್ಲರ ಕಣ್ಮನ ಸೆಳೆಯುವಂತೆ ಮಿಂಚಿದ್ದರು. ಇದೀಗ ಗೌನ್‌ ಗೆ ಮತ್ತೊಂದು ರೂಪವನ್ನು ಕೊಟ್ಟಿದ್ದಾರೆ. ಹೌದು, ಸಮಂತಾ ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ನಾಗಚೈತನ್ಯ ಜೊತೆ ಮದುವೆ ಸಂದರ್ಭದಲ್ಲಿ ಧರಿಸಿಕೊಂಡಿದ್ದ ಶ್ವೇತ ವರ್ಣದ ಗೌನ್‌ಅನ್ನು ಧರಿಸಿದ್ದು, ಇದೀಗ ಆ ಗೌನ್‌ ಅನ್ನು ಹರಿದು ಹಾಕಿ ಅದಕ್ಕೆ ಮತ್ತೊಂದು ರೂಪವನ್ನು ನೀಡಿದ್ದಾರೆ. ಬಿಳಿ ಬಣ್ಣದ ವಸ್ತ್ರವನ್ನು ಕಪ್ಪು ಬಣ್ಣಕ್ಕೆ ಬದಲಾಯಿಸಿ ಧರಿಸಿರುವ ಫೊಟೋವನ್ನು ಸ್ಯಾಮ್ ಶೇರ್ ಮಾಡಿದ್ದಾರೆ.

sam

ಹೌದು, ಏಪ್ರಿಲ್ 25 ರಂದು ನಡೆದ ಗ್ಲಾಮರಸ್ ಫ್ಯಾಶನ್ ಪ್ರೋಗ್ರಾಮ್‌ನಲ್ಲಿ ಕಪ್ಪು ಬಣ್ಣದ ಗೌನ್ ಧರಿಸಿ ಎಲ್ಲರ ಕಣ್ಣು ಕುಕ್ಕುವಂತೆ ಕಾಣಿಸಿಕೊಂಡಿದ್ದರು. ಬಳಿಕ ಸಮಂತಾ ಧರಿಸಿದ್ದ ಕಪ್ಪು ಬಣ್ಣದ ಗೌನ್‌ ಕುರಿತಾಗಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಕುರಿತು ಅಭಿಮಾನಿಗಳು ಶಾಕ್ ಆಗಿದ್ದಾರೆ.  ವೆಡ್ಡಿಂಗ್‌ ಗೌನ್‌ ಅನ್ನು ಹರಿದು ಕಪ್ಪು ಬಣ್ಣಕ್ಕೆ ರೂಪಾಂತರಿಸಿ ಸುಂದರವಾದ ಡಿಸೈನ್ ಮಾಡಿಸಿದ್ದು ಇದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೀಗ ಈ ವೀಡಿಯೋ ಸಖತ್ ವೈರಲ್ ಆಗಿದೆ.

Continue Reading

LATEST NEWS

Trending