Connect with us

    MANGALORE

    ಮಂಗಳೂರು: ಸಾನಿಧ್ಯ ವಿಶೇಷ ಚೇತನ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ

    Published

    on

    ಮಂಗಳೂರು: ಸ್ವಂತ ಲಾಭ ನೋಡದೇ ಯಾವುದೇ ಕೆಲಸಕ್ಕಿಳಿದರೂ ಜಯ ಖಂಡಿತ. ಅದರಲ್ಲೇನೂ ಸಂಶಯವಿಲ್ಲ ಎಂದು ಕುಲಶೇಖರ ಹೋಲಿ ಕ್ರಾಸ್ ಚರ್ಚ್ ನ ಧರ್ಮಗುರು ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್ ಕ್ರಿಸ್ಮಸ್ ಹಬ್ಬದ ಶುಭ ಸಂದೇಶ ನೀಡಿದರು.


    ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ವಿಶೇಷ ಚೇತನ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ ನಡೆಯಿತು.

    ಧರ್ಮಗುರು ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್ ಕ್ರಿಸ್ಮಸ್ ಹಬ್ಬದ ಶುಭ ಸಂದೇಶ ನೀಡಿದರು.

    ಶಾಲೆಯ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಸಂಸ್ಥೆಯಲ್ಲಿ ಆಚರಿಸಲಾದ ಕಿಸ್ಮಸ್ ಹಬ್ಬದ ಕುರಿತು ಮಾತನಾಡಿದರು.

    ಬಳಿಕ ವಿಶೇಷ ಚೇತನ ಮಕ್ಕಳಿಂದ ಯೇಸು ಕ್ರಿಸ್ತನ ಜೀವನ ವೃತಾಂತ ಕುರಿತ ದೃಶ್ಯ ರೂಪಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಂಗಳೂರು ವಿಶ್ವವಿದ್ಯಾಲಯದ ಹಿರಿಯ ಉಪನ್ಯಾಸಕಿ ಡಾ. ಬಿ. ಕೆ ಸರೋಜಿನಿ ಎಂಎಸ್ಸಿ,

    ಕರ್ನಾಟಕ ಮುಸ್ಲಿಮ್ ಸಾಂಸ್ಕೃತಿಕ ಸಂಘ ಕತಾರ್ ಇದರ ಅಧ್ಯಕ್ಷ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ಲಾ ಮೋನು ಮೊಯಿದ್ದೀನ್, ಮಾಜಿ ಮೇಯರ್ ಮಹಾಬಲ ಮಾರ್ಲ ಸೇರಿದಂತೆ ಹಲವಾರು ಮಂದಿ ಅತಿಥಿ ಗಣ್ಯರು ಪಾಲ್ಗೊಂಡಿದ್ದರು.

    DAKSHINA KANNADA

    ಬಜರಂಗದಳ ಕಾರ್ಯಕರ್ತನಿಗೆ ಮಾರಣಾಂತಿಕ ಹ*ಲ್ಲೆ..!

    Published

    on

    ಮಂಗಳೂರು: ಇಲ್ಲಿನ ನಗರ ಹೊರವಲಯದ ಉಳ್ಳಾಲದ ಬಜರಂಗದಳ ಕಾರ್ಯಕರ್ತನಿಗೆ ಸ್ಥಳೀಯ ಸಂಘದ ಸದಸ್ಯರೊಬ್ಬರು ಹಲ್ಲೆ ನಡೆಸಿರುವ ಘಟನೆ ಕುಂಪಲ ಕೇಸರಿನಗರದಲ್ಲಿ ನಡೆದಿದ್ದು, ಗಾಯಾಳು ಕುಂಪಲ ನಿವಾಸಿ  ಬಜರಂಗದಳ ಕಾರ್ಯಕರ್ತ ಪ್ರವೀಣ್ ಪೂಜಾರಿ ಯಾನೆ ಪಿಟ್ಟಿ (39) ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮುಂದೆ ಓದಿ..;  ಅಪ್ರಾಪ್ತ ಬಾಲಕಿ ಮೇಲೆ ಮಾನಭಂಗ ಯತ್ನ..! ಬಿಜೆಪಿ ಮುಖಂಡ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

    ಇವರಿಗೆ ಸ್ಥಳೀಯ ಕೇಸರಿ ಮಿತ್ರ ವೃಂದದ ಗೌತಮ್  ಎಂಬವರು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಜೂ. 4 ರಂದು ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪಟಾಕಿ ಸಿಡಿಸಿದ ವಿಚಾರದಲ್ಲಿ ಬಜರಂಗದಳ ಹಾಗೂ ಕೇಸರಿ ಮಿತ್ರ ವೃಂದದ ಸದಸ್ಯರ ನಡುವೆ ವಾಗ್ವಾದ ನಡೆದಿತ್ತು. ಈ ಸಂಬಂಧ ಕೆಲಸದಿಂದ ವಾಪಾಸ್ಸಾಗುತ್ತಿದ್ದ  ಪ್ರವೀಣ್ ಪೂಜಾರಿ ಅವರನ್ನು ಅಡ್ಡಗಟ್ಟಿದ ಗೌತಮ್  ಹಲ್ಲೆ ನಡೆಸಿ ದೂಡಿದ್ದು, ಪರಿಣಾಮ ಚರಂಡಿಗೆ ಬಿದ್ದ ಪ್ರವೀಣ್ ತಲೆಗೆ ಗಾಯವಾಗಿದೆ. ಗಾಯಾಳುವನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಹಲ್ಲೆ ನಡೆಸಿದ ಗೌತಮ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಇದರಿಂದ ಪಟಾಕಿ ಸಿಡಿಸಿದ ದ್ವೇಷಕ್ಕೆ ಹಲ್ಲೆ ನಡೆಸಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ವೈರಲ್ ಆಗಿದೆ. ಉಳ್ಳಾಲ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

    Continue Reading

    DAKSHINA KANNADA

    ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ವ್ಯಾಮೋಹಕ್ಕೆ ಅನಾಥವಾದ ಉಡುಪಿ ಜಿಲ್ಲೆ ! ಉಸ್ತುವಾರಿ ಸಚಿವೆ ವಿರುದ್ಧ ಗೋ ಬ್ಯಾಕ್ ಅಭಿಯಾನ..!

    Published

    on

    ಉಡುಪಿ: ಲೋಕಸಭಾ ಫಲಿತಾಂಶ ಬೆನ್ನಲ್ಲೇ ಉಡುಪಿ ಕಾಂಗ್ರೆಸ್ ನಲ್ಲಿ ಗೋ ಬ್ಯಾಕ್ ಅಭಿಯಾನ ಶುರುವಾಗಿದೆ. ಕರಾವಳಿಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋಲು ಕಂಡ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿಗಳ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಗರಂ ಆಗಿದ್ದಾರೆ.
    ಸಾಮಾಜಿಕ ಜಾಲತಾಣದಲ್ಲಿ ಉಡುಪಿಯ ಕೈ ಕಾರ್ಯಕರ್ತರು ʼಗೋ ಬ್ಯಾಕ್‌ʼ ಅಭಿಯಾನ ನಡೆಸುತ್ತಿದ್ದಾರೆ.

    ಸಮಸ್ಯೆ ಆದಾಗ ನೀವು ಬರೋದೆ ಇಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಕಾರ್ಯಕರ್ತರು ಕಿಡಿಕಾರಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸುವಂತೆ ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್‌ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊರಹಾಕಿರುವ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಪೋಸ್ಟರ್ ವೈರಲ್ ಮಾಡುತ್ತಿದ್ದಾರೆ.

    ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ಗೂ ಟಿಕೆಟ್ ನೀಡಲಾಗಿತ್ತು. ಹೀಗಾಗಿ  ಪುತ್ರ ಮೃಣಾಲ್ ಗೆ ಟಿಕೆಟ್ ಸಿಕ್ಕಿದ ಬಳಿಕ ಉಸ್ತುವಾರಿ ಸಚಿವೆ ಲಕ್ಷ್ಮೀ ಇತ್ತ ಪಕ್ಷದ ಕಾರ್ಯಕರ್ತರ ಕೈಗೂ ಸಿಕ್ಕಿಲ್ಲ , ಜಿಲ್ಲೆಯ ಜನರ ಕೈಗೂ ಸಿಕ್ಕಿಲ್ಲ. ಸಚಿವೆ ಬೆಳಗಾವಿಯಲ್ಲಿ ಸುತ್ತುತ್ತಿದ್ದರೇ ಹೊರತು ಒಮ್ಮೆಯೂ ಉಡುಪಿ ಕ್ಷೇತ್ರಕ್ಕೆ ಭೇಟಿ ನೀಡಲಿಲ್ಲ. ಉಡುಪಿ-ಚಿಕ್ಕಮಂಗಳೂರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಯಪ್ರಕಾಶ್ ಹೆಗ್ಡೆಯವರ ಪ್ರಚಾರ ಸಮಯದಲ್ಲೂ ಒಂದು ಬಾರಿ ಇತ್ತ ಕಡೆ ಮುಖ ಮಾಡಿಲ್ಲ. ಇದಕ್ಕೆಲ್ಲಾ ಅವರ ಪುತ್ರ ವಾತ್ಸಲ್ಯವೇ ಕಾರಣ ಎಂದು ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

    Continue Reading

    DAKSHINA KANNADA

    ಕಪ್ಪಾಗಿರುವ ಸ್ವಿಚ್ ಬೋರ್ಡ್ ಬಿಳಿಯಾಗಿಸಲು ಈ ವಸ್ತುಗಳಿದ್ದರೆ ಸಾಕು, ಒಮ್ಮೆ ಟ್ರೈ ಮಾಡಿ

    Published

    on

    ಮಂಗಳೂರು: ಮನೆಯಲ್ಲಿರುವ ಮಹಿಳೆಯರು ಎಂದ ಮೇಲೆ ಮನೆ ಸ್ವಚ್ಛತೆ ಹಾಗೂ ಅಡುಗೆ ಕೆಲಸವೆಂದು ಸದಾ ಬ್ಯುಸಿಯಾಗಿರುತ್ತಾರೆ. ಆದರೆ ಹೊರಗಡೆ ದುಡಿಯುವ ಮಹಿಳೆಯರು ಹಾಗಲ್ಲ. ಮನೆ ಹಾಗೂ ಉದ್ಯೋಗ ಎರಡನ್ನು ನಿಭಾಯಿಸಿಕೊಂಡು ಹೋಗಬೇಕು. ಹೀಗಾಗಿ ವೀಕೆಂಡ್ ನಲ್ಲಿ ಮನೆಯ ಸ್ವಚ್ಛತೆಯ ಕಡೆಗೆ ಗಮನ ಕೊಡುತ್ತಾರೆ. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ವೇಳೆ ಸ್ವಿಚ್ ಬೋರ್ಡ್ ಗಳನ್ನು ಮರೆತು ಬಿಡುವುದೇ ಹೆಚ್ಚು. ಇದರಿಂದಾಗಿ ಬೆಳ್ಳಗೆ ಇರುವ ಸ್ವಿಚ್ ಬೋರ್ಡ್ ಗಳು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ. ಆದರೆ ಈ ಕೆಲವು ವಸ್ತುಗಳಿದ್ದರೆ ಐದೇ ಐದು ನಿಮಿಷದಲ್ಲಿ ಸ್ವಿಚ್ ಬೋರ್ಡ್ ಬಿಳಿ ಬಣ್ಣಕ್ಕೆ ತಿರುಗುವಂತೆ ಮಾಡಬಹುದು.

    • ಮೊದಲಿಗೆ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸ್ವಿಚ್ ಬೋರ್ಡ್ ಸ್ವಚ್ಛತೆಗೊಳಿಸಲು ರೆಡಿಯಾಗಿ.
    • ಒಂದು ಕಪ್ ನೀರಿಗೆ ಎರಡು ಚಮಚ ವಿನೆಗರ್, ಚಮಚ ನಿಂಬೆ ರಸವನ್ನು ಸೇರಿಸಿ ಈ ಮಿಶ್ರಣಕ್ಕೆ ಹಳೆಯ ಬ್ರಷ್ ಅದ್ದಿ ಸ್ವಿಚ್ ಬೋರ್ಡ್ ಮೇಲೆ ಉಜ್ಜಿದರೆ ಕಪ್ಪು ಕಲೆಗಳು ಹೋಗಿ ಸ್ವಚ್ಛವಾಗುತ್ತದೆ.
    • ಸ್ವಿಚ್‌ಬೋರ್ಡ್‌ಗಳನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾವನ್ನು ಸಹ ಬಳಸಬಹುದು.
    • ಸ್ವಿಚ್ ಬೋರ್ಡ್ ಕಪ್ಪು ಬಣ್ಣಕ್ಕೆ ತಿರುಗಿದರೆ ನೇಲ್ ಪೇಂಟ್ ರಿಮೂವರ್ ಬಳಸಿದರೆ ಕಲೆಗಳು ಇಲ್ಲವಾಗುತ್ತದೆ.
    • ಆಲ್ಕೋಹಾಲ್ ನಿಂದಲೂ ಸ್ವಿಚ್‌ಬೋರ್ಡ್‌ಗಳಲ್ಲಿರುವ ಕೊಳೆಯನ್ನು ತೆಗೆದು ಹಾಕಬಹುದು.
    • ಸ್ವಲ್ಪ ಪ್ರಮಾಣದಲ್ಲಿ ಟೂತ್ ಪೇಸ್ಟ್ ತೆಗೆದುಕೊಂಡು, ಅದಕ್ಕೆ ಒಂದು ಚಮಚ ಅಡುಗೆ ಸೋಡಾ ಹಾಗೂ ಅರ್ಧ ಚಮಚ ನಿಂಬೆರಸ ಸೇರಿಸಿ ಈ ಮಿಶ್ರಣವನ್ನು ಸ್ವಿಚ್ ಬೋರ್ಡ್ ಸ್ವಚ್ಛಗೊಳಿಸಲು ಬಳಸಬಹುದು.
    • ಸ್ವಿಚ್ ಬೋರ್ಡ್ ಸ್ವಚ್ಛಗೊಳಿಸಿದ 30 ರಿಂದ 40 ನಿಮಿಷಗಳ ಕಾಲ ಬೋರ್ಡ್ ಅನ್ನು ಆನ್ ಮಾಡಬೇಡಿ. ಪೂರ್ಣ ಪ್ರಮಾಣದಲ್ಲಿ ಒಣಗಿದ ನಂತರ ಸ್ವಿಚ್ ಆನ್ ಮಾಡಿ.
    Continue Reading

    LATEST NEWS

    Trending