Connect with us

    LATEST NEWS

    ನಿನ್ನೆ ನಾಪತ್ತೆಯಾಗಿದ್ದ ಪ್ರಶಾಂತ್ ಶವ ಇಂದು ಕಂಕನಾಡಿ ಕಾರಿನಲ್ಲಿ ಪತ್ತೆ..!

    Published

    on

    ಮಂಗಳೂರು: ನಗರದ ಕಂಕನಾಡಿ ಬಳಿ ಕಾರಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಘಟನೆ ಇಂದು ಮಧ್ಯಾಹ್ನದ ನಡೆದಿದೆ.
    ಪ್ರಶಾಂತ್‌ (44) ನಗರದ ಮಣ್ಣಗುಡ್ಡ ನಿವಾಸಿ ಎಂದು ಗುರುತಿಸಲಾಗಿದೆ.

    ಘಟನೆ ಹಿನ್ನೆಲೆ
    ನಿನ್ನೆ ಬೆಳಿಗ್ಗೆ 10.30ಕ್ಕೆ ಪತ್ನಿ ಬಳಿ ತನಗೆ ಹುಷಾರಿಲ್ಲ. ಆದ ಕಾರಣ ಆಸ್ಪತ್ರೆಗೆ ಹೋಗಿಬರುತ್ತೇನೆಂದು ಪ್ರಶಾಂತ್‌ ತನ್ನ ಫೋರ್ಡ್‌ ಕಾರಿನಲ್ಲಿ ತೆರಳಿದ್ದರು.

    ಬೆಳಗ್ಗೆ ತೆರಳಿದ ವ್ಯಕ್ತಿ ಸಂಜೆಯವರೆಗೂ ಮನೆಗೆ ಬಾರದ ಕಾರಣ ಕುಟುಂಬಸ್ಥರು ಮೊಬೈಲ್‌ ಮೂಲಕ ಸಂಪರ್ಕ ಮಾಡಲು ಯತ್ನಿಸಿದರು. ಆದರೆ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು.

    ಈ ಬಗ್ಗೆ ಬರ್ಕೆ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಮೊದಲು ಮೊಬೈಲ್‌ ಲೊಕೇಷನ್‌ ಟ್ರೇಸ್‌ ಮಾಡಿದಾಗ ನಗರದ ಕಂಕನಾಡಿ ಬಳಿ ಲೊಕೇಷನ್‌ ಪತ್ತೆಯಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆ ಸ್ಥಳಕ್ಕೆ ಭೇಟಿ ನೀಡಿದಾಗ ತನ್ನದೇ ಕಾರ್‌ನೊಳಗಡೆ ಮೃತದೇಹ ಪತ್ತೆಯಾಗಿದೆ.

    ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವೆನ್‌ಲಾಕ್‌ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.

    DAKSHINA KANNADA

    ಅಂಟು ಕೈಗೆ ತಾಗದಂತೆ ಹಲಸಿನಹಣ್ಣನ್ನು ಕತ್ತರಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್ಸ್

    Published

    on

    ಮಂಗಳೂರು: ಮಾರುಕಟ್ಟೆಯಲ್ಲಿ ಹಲಸಿನ ಹಣ್ಣಿನ ಕಾರುಬಾರು ಶುರುವಾಗಿದೆ. ಈ ಹಣ್ಣಿನ ಮೈ ಮೇಲೆ ಮುಳ್ಳುಗಳಿದ್ದು ನೋಡುವುದಕ್ಕೆ ಒರಟಾಗಿ ಕಂಡರೂ ರುಚಿ ಮಾತ್ರ ಅದ್ಭುತ. ಈ ಹಣ್ಣಿನೊಳಗೆ ಜಿಗುಟಾದ ಬಿಳಿ ಬಣ್ಣದ ಅಂಟಿದ್ದು, ಇದು ಕೈಗೆ ಅಂಟಿಕೊಳ್ಳುತ್ತದೆ. ಹೀಗಾಗಿ ಈ ತೊಂದರೇನೇ ಬೇಡವೆಂದು ಸಿಪ್ಪೆ ಸುಲಿದ ಹಣ್ಣುಗಳನ್ನೆ ಖರೀದಿಸುವವರೇ ಹೆಚ್ಚು. ಒಂದು ವೇಳೆ ನೀವೇನಾದರೂ ಮಾರುಕಟ್ಟೆಯಿಂದ ಹಲಸಿನ ಹಣ್ಣು ತಂದು ಅಥವಾ ನಿಮ್ಮ ಮನೆಯಲ್ಲೇ ಆದ ಹಲಸಿನ ಹಣ್ಣನ್ನು ಕತ್ತರಿಸುವಿರಾದರೆ ಅದರ ಅಂಟು ತಾಗದ ಹಾಗೇ ಈ ಸಲಹೆಗಳನ್ನು ಅನುಸರಿಸಿ.

    * ಹಲಸಿನ ಹಣ್ಣನ್ನು ಕತ್ತರಿಸುವಾಗ ಕೆಳಗಡೆ ಪೇಪರ್ ಇಟ್ಟುಕೊಳ್ಳಿ. ಇಲ್ಲವಾದರೆ ಇದರ ಒಳಗಿರುವ ಬಿಳಿ ಬಣ್ಣದ ಅಂಟು ನೆಲಕ್ಕೆ ಹಾಗೂ ಕೈಗಳಿಗೆ ಅಂಟಿಕೊಳ್ಳುತ್ತದೆ.
    * ಕತ್ತರಿಸುವ ಮುನ್ನ ಕೈಗೆ ಹಾಗೂ ಚಾಕುವಿಗೆ ತೆಂಗಿನೆಣ್ಣೆಯನ್ನು ಹಚ್ಚಿಕೊಳ್ಳಿ. ಹೀಗೆ ಮಾಡಿದ್ದಲ್ಲಿ ಅಂಟು ಕೈಗೆ ತಾಗಿದರೂ ಮೆತ್ತಿಕೊಳ್ಳುವುದಿಲ್ಲ.
    * ಹಣ್ಣನ್ನು ಎರಡು ಭಾಗವಾಗಿ ಕತ್ತರಿಸಿದ ಬಳಿಕ ಹಲಸಿನ ಹಣ್ಣಿನ ಒಳಭಾಗದಲ್ಲಿರುವ ಅಂಟನ್ನು ಪೇಪರ್ ನಿಂದ ಒರೆಸಿಕೊಳ್ಳಿ.
    * ಹಣ್ಣಿನ ಮೇಲಿರುವ ನಾರುಗಳನ್ನು ಚಾಕುವಿನಿಂದ ಕತ್ತರಿಸಿ ಹಣ್ಣನ್ನು ಬೇರ್ಪಡಿಸಿ ಸವಿಯ ಬಹುದು.

    Continue Reading

    DAKSHINA KANNADA

    ವಿದ್ಯಾರ್ಥಿ ಬಸ್​ ಪಾಸ್​ ವಿತರಣೆ ಆರಂಭ; ದರ, ಅರ್ಜಿ ಸಲ್ಲಿಕೆ ವಿಧಾನ ಇಲ್ಲಿದೆ

    Published

    on

    ಬೆಂಗಳೂರು: 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳು ಪ್ರಾರಂಭವಾಗಿದೆ. ವಿದ್ಯಾರ್ಥಿಗಳು ನಲಿಯುತ್ತಾ ಶಾಲೆ-ಕಾಲೇಜುಗಳತ್ತ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ತರಗತಿಗಳು ಆರಂಭವಾದ ಹಿನ್ನಲೆಯಲ್ಲಿ ಬಸ್‌ಪಾಸ್ ನೀಡುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಕಟಣೆ ಹೊರಡಿಸಿದೆ. ನಿಗಮ 10 ತಿಂಗಳ ಪಾಸ್ ದರ ನಿಗದಿ ಮಾಡಿದೆ. ಹಾಗಾದರೆ ಈ ಬಾರಿಯ ಬಸ್‌ ಪಾಸ್ ದರ ಎಷ್ಟು? ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ನೋಡಿ.

    ಪಾಸ್ ದರ ಪಟ್ಟಿ

    • ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪಾಸ್ ದರ – 150 ರೂ.
    • ಪ್ರೌಢ ಶಾಲಾ ವಿದ್ಯಾರ್ಥಿಗಳ ಪಾಸ್ ದರ- 750 ರೂ.
    • ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಪಾಸ್​ ದರ – 150 ರೂ.
    • ಪ್ರೌಢ ಶಾಲಾ ವಿದ್ಯಾರ್ಥಿನಿಯರ (ಗಡಿ ಭಾಗದ ಆಚೆಗೆ) – 150 ರೂ.
    • ಕಾಲೇಜು- ಡಿಪ್ಲೊಮಾ ವಿದ್ಯಾರ್ಥಿಗಳ ಪಾಸ್ ದರ- 1050 ರೂ.
    • ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಪಾಸ್ ದರ- 150 ರೂ.
    • ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳ ಪಾಸ್ ದರ (12 ತಿಂಗಳ ಅವದಿ) 1310 ರೂ.
    • ಐಟಿಐ, ಡಿಪ್ಲೊಮಾ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಪಾಸ್ ದರ- 160 ರೂ.
    • ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳ ಪಾಸ್ ದರ- 1550 ರೂ.
    • ವೃತ್ತಿಪರ ಕೋರ್ಸ್ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಪಾಸ್ ದರ- 150 ರೂ.
    • ಸಂಜೆ ಕಾಲೇಜು ವಿದ್ಯಾರ್ಥಿಗಳ ಪಾಸ್ ದರ- 1350 ರೂ.
    • ಸಂಜೆ ಕಾಲೇಜು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಪಾಸ್ ದರ – 150 ರೂ. ಈ ಪಾಸ್​ಗಳನ್ನು ಪಡೆಯಲು ಆನ್​ ಲೈನ್​ನಲ್ಲೇ ಅರ್ಜಿ ಸಲ್ಲಿಸಬೇಕು.

    ಅರ್ಜಿ ಸಲ್ಲಿಸುವ ವಿಧಾನ

    • ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಮುಖೇನ ಅರ್ಜಿಯನ್ನು ಸಲ್ಲಿಸಬೇಕು. ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in/buspassservices
    • ವಿದ್ಯಾರ್ಥಿಗಳು ಮೇ 31 ರಿಂದ ಸೇವಾಸಿಂಧು ಪೋರ್ಟಲ್‌ನಲ್ಲಿ ಬಸ್ ಪಾಸ್‌ಗಾಗಿ ಅರ್ಜಿಗಳನ್ನು ಸಲ್ಲಿಸಬಹು. ಆನ್​ ಲೈನ್ ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.
    • ಇದಲ್ಲದೆ, ವಿದ್ಯಾರ್ಥಿಗಳು, ಕರ್ನಾಟಕ-ಒನ್, ಗ್ರಾಮ-ಒನ್ ಮತ್ತು ಬೆಂಗಳೂರು-ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಮೂಲಕವು ಅರ್ಜಿ ಸಲ್ಲಿಸಬಹುದು. ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಸರ್ಕಾರದ ಆದೇಶದಂತೆ 30 ರೂ. ಸೇವಾ ಶುಲ್ಕವನ್ನು ಕೇಂದ್ರಗಳ ಸಿಬ್ಬಂದಿಗಳು ಪಡೆಯಲು ಪಡೆಯುತ್ತಾರೆ.
    • ವಿದ್ಯಾರ್ಥಿಗಳು ವಿದ್ಯಾರ್ಥಿ ಬಸ್ ಪಾಸ್‌ಗಾಗಿ ಅರ್ಜಿ ಸಲ್ಲಿಸಲು Declaration Formeನ್ನು ಸೇವಾಸಿಂಧು ತಂತ್ರಾಂಶದಲ್ಲಿ ಅಥವಾ ಕರಾರಸಾ ನಿಗಮದ ವೆಬ್​​ಸೈಟ್​ನಲ್ಲಿ (https://ksrtc.karnataka.gov.in/studentpass) ಡೌನ್​ಲೋಡ್​​ ಮಾಡಿಕೊಳ್ಳಬೇಕು ಹಾಗೂ ಅದನ್ನು ಅರ್ಜಿ ಸಲ್ಲಿಸುವಾಗ Submitಮಾಡಬೇಕು.
    • ಅರ್ಜಿ ಅನುಮೋದನೆಯಾದ ವಿದ್ಯಾರ್ಥಿಗಳಿಗೆ ಪಾಸು ಪಡೆಯಲು ಭೇಟಿ ನೀಡಬೇಕಿರುವ ಕೌಂಟರ್‌ನ ಹೆಸರು / ವಿಳಾಸ ಮಾಹಿತಿಯನ್ನು ಅರ್ಜಿಯಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮುಖೇನ ಕಳುಹಿಸಲಾಗುತ್ತದೆ. ವಿದ್ಯಾರ್ಥಿ ಪಾಸುಗಳನ್ನು ಜೂ. 01 ರಿಂದ ನಿಗದಿತ ಪಾಸ್ ಕೌಂಟರ್​ಗಳಲ್ಲಿ ವಿತರಿಸಲಾಗುತ್ತದೆ.
    • ತದನಂತರ ವಿದ್ಯಾರ್ಥಿಗಳು ಆಯ್ಕೆ ಮಾಡಿದ ಕೌಂಟರ್ಗೆಗೆ ತೆರಳಿ, ನಿಗದಿತ ಪಾಸಿನ ಶುಲ್ಕವನ್ನು ನಗದು, ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / UPI ಮುಖೇನ ಪಾವತಿಸಿ ಪಾಸನ್ನು ಪಡೆಯಬಹು.
    • ಸರ್ಕಾರವು ಕರ್ನಾಟಕ ರಾಜ್ಯದ ಮಹಿಳೆಯರಿಗೆ (ವಿದ್ಯಾರ್ಥಿನಿಯರು, ಅಂಗತ್ವ ಅಲ್ಪ ಸಂಖ್ಯಾತರು ಸೇರಿದಂತೆ) ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಿದೆ. ನೆರೆರಾಜ್ಯದಲ್ಲಿ ವಾಸವಿದ್ದು ಕರ್ನಾಟಕ ರಾಜ್ಯದ ಶಾಲೆ / ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಕರ್ನಾಟಕ ರಾಜ್ಯದಲ್ಲಿ ವಾಸವಿದ್ದು, ನೆರೆ ರಾಜ್ಯದ ಶಾಲೆ / ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಗಡಿಭಾಗದ ಮಾರ್ಗಗಳಲ್ಲಿನ ವಿದ್ಯಾರ್ಥಿನಿಯರು, ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ಪಡೆಯಬಹದು. ಮೇಲ್ಕಂಡ ಕ್ರಮಗಳನ್ನು ಅನುಸರಿಸಿ ಗಡಿಭಾಗದ ವಿದ್ಯಾರ್ಥಿಗಳು ಪಾಸುಗಳನ್ನು ಪಡೆಯಬಹುದು.
    • ಕರಾರಸಾನಿಗಮ ವ್ಯಾಪ್ತಿಯ 129 ಪಾಸ್ ವಿತರಣಾ ಕೌಂಟರ್ಗಗಳ ವಿವರಗಳನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ ನಿಗಮದ ವೆಬ್‌ ಸೈಟ್ ನಲ್ಲಿ ಒದಗಿಸಲಾಗಿದೆ. ನಿಗಮದ ವೆಬ್ ಸೈಟ್​ ವಿಳಾಸ: https://ksrtc.karnataka.gov.in
    Continue Reading

    DAKSHINA KANNADA

    ‘ಸಚಿವರ ರಾಜೀನಾಮೆ ಪಡೆಯಲಾಗದಷ್ಟು ದುರ್ಬಲರಾದ ಸಿಎಂ ಸಿದ್ಧರಾಮಯ್ಯ’ – ಕೋಟ ಲೇವಡಿ

    Published

    on

    ಉಡುಪಿ: ವಾಲ್ಮೀಕಿ ನಿಗಮದಲ್ಲಿ ಹಗರಣ ವಿಚಾರವಾಗಿ ಉಡುಪಿಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ ನೀಡಿದ್ದು, ಸಚಿವರ ರಾಜೀನಾಮೆ ಪಡೆಯಲಾಗದಷ್ಟು ಸಿದ್ದರಾಮಯ್ಯ ದುರ್ಬಲರಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ನಾವು ಸಿಬಿಐ ತನಿಖೆಗೆ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡಿದ್ದೇವೆ. ಆದರೆ ಎಸ್ಐಟಿ ನೇಮಕ ಮಾಡಿ ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿದೆ ಎಂದರು. ಮುಖ್ಯಮಂತ್ರಿಗಳು ನಾಗೇಂದ್ರರನ್ನು ಕರೆದು ರಾಜಿನಾಮೆ ಕೊಡಲು ಹೇಳಿದ್ದು, ನನ್ನ ರಾಜೀನಾಮೆ ಕೇಳಿದರೆ ಎಲ್ಲರ ವಿಚಾರ ಬಹಿರಂಗ ಮಾಡುತ್ತೇನೆ ಎಂದು ನಾಗೇಂದ್ರ ಬೆದರಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಧಿಗ್ಧತೆಯಲ್ಲಿದ್ದಾರೆ.

    ಮುಂದೆ ಓದಿ..; ಸಿಎಂ ಸಿದ್ಧರಾಮಯ್ಯ, ಜಯಪ್ರಕಾಶ್ ಹೆಗ್ಡೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು!

    ಪರಿಶಿಷ್ಟ ಜಾತಿ ಪಂಗಡದವರ ಕೆಲಸ ಮಾಡುತ್ತೇನೆ ಎಂದು ಸಿದ್ದರಾಮಯ್ಯ  ಹೇಳುತ್ತಾರೆ, ಆದರೆ ಬಡವರ ಹಣ ಇವತ್ತು ಕಂಪನಿಗಳ ಖಾತೆಗೆ ಹೋಗಿದೆ ಎಂದು ಹೇಳಿದ ಕೋಟ ಶ್ರೀನಿವಾಸ ಪೂಜಾರಿ, ಸಚಿವರು ಕೂಡಲೇ ರಾಜೀನಾಮೆ ನೀಡಬೇಕು, ನಾವು ಒಂದು ವಾರದ ಗಡುವು ನೀಡಿದ್ದೇವೆ ಎಂದು ಕೋಟ ಹೇಳಿದರು.

     

    Continue Reading

    LATEST NEWS

    Trending