Connect with us

    LATEST NEWS

    ನಾಳೆ ಕರಾವಳಿಗೆ ಕೇಂದ್ರ ಸಚಿವ ಸರ್ಬಾನಂದ ಸೊನೋವಾಲ್‌ ಭೇಟಿ: NMPTಯ ಮೂರು ಪ್ರಮುಖ ಯೋಜನೆಗಳಿಗೆ ಚಾಲನೆ

    Published

    on

    ಮಂಗಳೂರು: ಕೇಂದ್ರದ ಬಂದರು, ಹಡಗು ಮತ್ತು ಜಲಸಾರಿಗೆ ಇಲಾಖೆಯ ಸಚಿವ ಸರ್ಬಾನಂದ ಸೊನೋವಾಲ್‌ ಅವರು ನಾಳೆ ಕರಾವಳಿಗೆ ಭೇಟಿ ನೀಡಲಿದ್ದಾರೆ.

    ಕರ್ನಾಟಕದ ವಾಣಿಜ್ಯ ಹೆಬ್ಬಾಗಿಲಾಗಿರುವ ನವಮಂಗಳೂರು ಬಂದರಿನಲ್ಲಿ ಪ್ರಮುಖ ಮೂರು ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ.

    ನಾಳೆ ಬೆಳಿಗ್ಗೆ 11 ಗಂಟೆಗೆ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸುವ ಕೇಂದ್ರ ಸಚಿವರು, ಮಧ್ಯಾಹ್ನ 12.45 ಕ್ಕೆ ನವಮಂಗಳೂರು ಬಂದರಿಗೆ ತೆರಳಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಾಳೆ ನಗರದಲ್ಲಿ ವಾಸ್ತವ್ಯ ಹೂಡುವ ಸಚಿವರು ಸೆ.25 ರಂದು ಉಡುಪಿಗೆ ಪ್ರಯಾಣ ಬೆಳೆಸಲಿದ್ದಾರೆ.

    ನಾಳೆ ನವಬಂದರುವಿನಲ್ಲಿ ನೂತನ ಟ್ರಕ್ ಪಾರ್ಕಿಂಗ್ ಟರ್ಮಿನಲ್ ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

    ನವ ಬಂದರುವಿನ ಪ್ರಮುಖ ಮಹಾದ್ವಾರ ಯುಎಸ್‌ ಮಲ್ಯ ಗೇಟ್ ನವೀಕರಣ, ನೂತನ ಉದ್ಯಮ ಅಭಿವೃದ್ದಿ ಕೇಂದ್ರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

    ರಾಜ್ಯದ ವಾಣಿಜ್ಯ ಹೆಬ್ಬಾಗಿಲಾಗಿರುವ ನವ ಮಂಗಳೂರು ಬಂದರು ದಾಖಲೆಯ ವಹಿವಾಟು ನಡೆಸುತ್ತಿದ್ದು, ಸರಕು ನಿರ್ವಹಣೆಯಲ್ಲಿ ದಾಖಲೆಯನ್ನು ನಿರ್ಮಿಸಿದೆ.

    ದಿನಂಪ್ರತಿ 500 ಹೆಚ್ಚು ಟ್ರಕ್ ಗಳು ನವ ಮಂಗಳೂರು ಬಂದರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ಸರಕು ಸಾಗಾಟ ಕಾರ್ಯ ನಿರ್ವಹಿಸುತ್ತಿವೆ.

    ಆದ್ದರಿಂದ ಸುಮಾರು 160 ಟ್ರಕ್ ಗಳಿಗೆ ನಿಲ್ಲಲು ಪಾರ್ಕಿಂಗ್ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ.

    ಈ ಟರ್ಮಿನಲ್‌ನಲ್ಲಿ ವಾಹನ ಚಾಲಕರಿಗೆ ಬೇಕಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ನವಬಂದರು ಪ್ರಕಟಣೆ ತಿಳಿಸಿದೆ.

    ಜೊತೆಗೆ ಬಂದರಿನ ಮುಖ್ಯ ದ್ವಾರವಾಗಿರುವ ಮಲ್ಯ ಗೇಟ್ ನಲ್ಲಿ ವಾಹನ ದಟ್ಟನೆ ಹೆಚ್ಚಾಗಿರುವ ಕಾರಣ ಅದನ್ನು ಅಭಿವೃದ್ದಿ ಪಡಿಸುವುದರೊಂದಿಗೆ ದ್ವಿಚಕ್ರ, ಚತುಷ್ಚಕ್ರ, ಟ್ರಕ್ ಗಳು ಹಾಗೂ ಪಾದಾಚಾರಿಗಳಿಗೆ ಪ್ರತ್ಯೇಕ ಪಾದಾಚಾರಿ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ.

    ಉದ್ಯಮಭಿವೃದ್ದಿ ಕೇಂದ್ರವನ್ನು ನೂತನವಾಗಿ ನಿರ್ಮಿಸಲಾಗುತ್ತಿದೆ. ಇದರಲ್ಲಿ ಉದ್ಯಮಿಗಳಿಗೆ ಸಹಕಾರಿಯಾಗುವಂತೆ ಅಗತ್ಯವಿರುವ ಕಾನ್ಫರೆನ್ಸ್ ಹಾಲ್, ರೆಸ್ಟೋರೆಂಟ್, ಪೋಸ್ಟ್ ಆಫೀಸ್, ಬ್ಯಾಂಕ್ ಒಂದೆಡೆ ನಿರ್ಮಾಣ ಮಾಡಲಾಗುತ್ತಿದೆ.

    ನವ ಮಂಗಳೂರು ಬಂದರು ರಾಜ್ಯದಲ್ಲಿ ಏಕೈಕ ದೊಡ್ಡ ಬಂದರಾಗಿದ್ದು, ಗೋವಾ ಮತ್ತು ಕೊಚ್ಚಿ ಬಂದರುಗಳ ಮಧ್ಯಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸರಕು ನಿರ್ವಹಣೆಗೆ ಅತ್ಯಾಧುನಿಕ ಸಲಕರಣೆ, ಯಂತ್ರಗಳು, ನುರಿತ ಕಾರ್ಗೋ ಹ್ಯಾಂಡಲ್ ಮಾಡಲು ನುರಿತ ತಜ್ಞ ಹಾಗೂ ಕಾರ್ಮಿಕ ತಂಡ ಇದ್ದು, 15 ಬರ್ತ್‌ಗಳು, ಕಂಟೈನರ್, ಕಲ್ಲಿದ್ದಲು ಇತರ ಕಾರ್ಯಗಳ ನಿರ್ವಹಣೆಗೆ ಬಳಕೆಯಾಗುತ್ತಿದೆ.

    ಇದರ ಜೊತೆಗೆ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಐಎಸ್ಒ 9001 ಹಾಗೂ ಅಂತರಾಷ್ಟ್ರೀಯ ಮಟ್ಟದ ಹಡಗು ಮತ್ತು ಬಂದರು ಮಂಡಳಿಗಳಿಂದ ಗುರುತಿಸಲ್ಪಟ್ಟಿದೆ.

    LATEST NEWS

    ಲಂಕೇಶ್ ಪುತ್ರನ ಜೊತೆ ಭರ್ಜರಿ ಸ್ಟೆಪ್ ಹಾಕಿದ ಶ್ರೇಯಾಂಕ ಪಾಟೀಲ್..! ಫುಲ್ ಫಿದಾ ಆದ ನೆಟ್ಟಿಗರು

    Published

    on

    ಬೆಂಗಳೂರು: ಆರ್‌ಸಿಬಿ ಆಟಗಾರ್ತಿ ಶ್ರೇಯಾಂಕ್ ಪಾಟೀಲ್ ವೇದಿಕೆಯೊಂದರಲ್ಲಿ ಸಮರಜಿತ್ ಲಂಕೇಶ್ ಅವರೊಂದಿಗೆ ಡ್ಯಾನ್ಸ್‌ ಮಾಡಿದ್ದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಲ್ಲಿದೆ.

    ನಿರ್ದೇಶಕ ಇಂದ್ರಜಿತ್ ಲಂಕೇಶ್ ರವರ ಪುತ್ರ ಸಮರಜಿತ್‌ ಲಂಕೇಶ್ ‘ಗೌರಿ’ ಸಿನೆಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಈ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕ ಪಾಟೀಲ್‌ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಸಮರಜಿತ್‌ ಲಂಕೇಶ್ ಜೊತೆ ಸೇರಿ ಸ್ಟೆಪ್ ಹಾಕಿದ್ದಾರೆ. ಅಲ್ಲಿ ಸೇರಿದ್ದ ಜನರು ಆರ್‌ಸಿ. ಬಿ ಎಂದು ಕೂಗಿದ್ದಾರೆ. ಇನ್ನು ಶ್ರೇಯಾಂಕ ಡ್ಯಾನ್ಸ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ವೀಡಿಯೋವನ್ನು ಶ್ರೇಯಾಂಕ ತಮ್ಮ ಇನ್ಸ್ಟಾಗ್ರಾಂ  shreyanka_patil31 ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    ಗೂಗಲ್ ಮ್ಯಾಪ್ ನಂಬಿ ಸಂಕಷ್ಟ; ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿದ ಕಾರು!

     

    Continue Reading

    LATEST NEWS

    ಶೆಡ್​​ಗೆ ನುಗ್ಗಿದ ಖಾಸಗಿ ಕಂಪನಿಯ ಬಸ್​.. ಒಳಗೆ ಮಲಗಿದ್ದ ನಾಲ್ವರು ಸ್ಥಳದಲ್ಲೇ ಸಾವು

    Published

    on

    ಪಣಜಿ: ಖಾಸಗಿ ಕಂಪನಿಯ ಬಸ್​ವೊಂದು ರಸ್ತೆ ಬದಿಯ ಶೆಡ್​ಗಳಿಗೆ ನುಗ್ಗಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಇನ್ನೂ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ದಕ್ಷಿಣ ಗೋವಾದ ವೆರ್ನಾದಲ್ಲಿ ನಡೆದಿದೆ.

    ಘಟನೆಯಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರು ಬಿಹಾರ ಮೂಲದವರೆಂದು ತಿಳಿದು ಬಂದಿದ್ದು ಅವರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಖಾಸಗಿ ಕಂಪನಿಯೊಂದರ ​ಉದ್ಯೋಗಿಗಳಿದ್ದ ಬಸ್ ಅತಿ ವೇಗವಾಗಿ ಬಂದು ರಸ್ತೆ ಬದಿಯಲ್ಲಿದ್ದ ಶೆಡ್​​ಗಳಿಗೆ ನುಗ್ಗಿದೆ.

    ಇದರಿಂದ ಮನೆಯಲ್ಲಿ ಮಲಗಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಇನ್ನು ಉದ್ಯೋಗಿಗಳನ್ನ ಹತ್ತಿಸಿಕೊಂಡು ಬರುತ್ತಿದ್ದ ಬಸ್ ಚಾಲಕ ಮದ್ಯಪಾನ ಮಾಡಿದ್ದನು. ಹೀಗಾಗಿ ಬಸ್​ ಅನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಶೆಡ್​ಗಳಿಗೆ ನುಗ್ಗಿಸಿದ ಪರಿಣಾಮ ಸಾವಿಗೆ ಕಾರಣನಾಗಿದ್ದಾನೆ. ಬಸ್​ ಒಳಗಿದ್ದ ಉದ್ಯೋಗಿಗಳಿಗೆ ಯಾವುದೇ ಗಾಯಗಳು ಆಗಿಲ್ಲ. ಬಸ್​ನ ಮುಂದಿನ ಭಾಗದ ಗ್ಲಾಸ್ ಒಡೆದು ಹೋಗಿದೆ. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

    Continue Reading

    LATEST NEWS

    ಗೂಗಲ್​ ಪೇ ಬಳಸ್ತಾ ಇದ್ದೀರಾ? ಜೂನ್​ 4ರಿಂದ ಈ ಆ್ಯಪ್​ ಕೆಲಸ ಮಾಡಲ್ಲ!

    Published

    on

    ಮಂಗಳೂರು: ಆನ್​ಲೈನ್​ ಪೇಮೆಂಟ್​ ಆ್ಯಪ್​ಗಳಾದ ಗೂಗಲ್​ ಪೇ, ಪೇಟಿಯಂ, ಫೋನ್​ ಪೇಯನ್ನು ಅನೇಕರು ಬಳಸುತ್ತಿದ್ದಾರೆ. ಅದರ ಮೂಲಕ ಹಣದ ವ್ಯವಹಾರ ನಡೆಸುತ್ತಾರೆ. ಬ್ಯಾಂಕ್​ಗೆ ತೆರಳದೆ ಮೊಬೈಲ್​ ಮೂಲಕ ಸೇವೆಯನ್ನು ನಡೆಸಲು ಈ ಆ್ಯಪ್​ಗಳು ಸಹಾಯಕವಾಗಿದೆ. ಆದರೀಗ ಇಂತಹ ಸೇವೆಯನ್ನು ಒದಗಿಸುತ್ತಿರುವ ಗೂಗಲ್​ ಪ್ಲೇ ಜೂನ್​ 4ರಿಂದ ಕಾರ್ಯ ನಿರ್ವಹಿಸುದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.

    ಗೂಗಲ್​ ಪೇ ಕೇವಲ ಹಣದ ವ್ಯವಹಾರ ಮಾತ್ರವಲ್ಲ, ಗ್ಯಾಸ್​ ಬುಕ್ಕಿಂಗ್, ರೀಚಾರ್ಜ್​, ಇನ್ಶುರೆನ್ಸ್​ ಹೀಗೆ ನಾನಾ ಸೇವೆಯನ್ನು ನೀಡುತ್ತಾ ಬಂದಿದೆ. ಆದರೀಗ ಗೂಗಲ್​ ಪೇ ಮುಂದಿನ ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಸುದ್ದಿ ಎಲ್ಲರಿಗೂ ಆಚ್ಚರಿಯಾಗಿದೆ.

    ಗೂಗಲ್​ ಪ್ಲೇಗೆ ಏನಾಯ್ತು?

    ಪ್ರಪಂಚದಾದ್ಯಂತ ಗೂಗಲ್​ ಪೇ ಜನಪ್ರಿಯವಾಗಿದೆ. . ಆದರೆ ಕೆಲವು ದೇಶಗಳಲ್ಲಿ ಗೂಗಲ್​ ಪೇ ಕಾರ್ಯವನ್ನು ಮಾಡೋದಿಲ್ಲ. ಆದರೆ ಭಾರತೀಯರು ಟೆನ್ಶನ್​ ಮಾಡುವ ಅವಶ್ಯಕತೆ ಇಲ್ಲ. ಇದು ಇಂಡಿಯಾದಲ್ಲಿ ಕಾರ್ಯ ನಿರ್ವಹಿಸುತ್ತದೆ.

    ಗೂಗಲ್​ ಯೋಚನೆಯೇ ಬೇರೆ

    ಗೂಗಲ್​ ತನ್ನ ಎಲ್ಲಾ ಬಳಕೆದಾರರನ್ನು ಗೂಗಲ್​ ವಾಲೆಟ್​ಗೆ ತೆರಳುವಂತೆ ಕೇಳಿಕೊಂಡಿದೆ. ಹಾಗಾಗಿ ಅದರ ಪ್ರಚಾರ ಮಾಡುತ್ತಿದೆ. ಇದೇ ಕಾರಣಕ್ಕೆ ಗೂಗಲ್​ ಪೇ ಕೆಲವು ದೇಶಗಳಲ್ಲಿ ಕಾರ್ಯನಿರ್ವಹಿಸುವುದನ್ನು ತಡೆಹಿಡಿದಿದೆ. ಆದರೆ ಭಾರತ ಮತ್ತು ಸಿಂಗಾಪುರದಲ್ಲಿ ಗೂಗಲ್​ ಪೇ ಕಾರ್ಯ ನಿರ್ವಹಿಸುತ್ತದೆ.

    ಬಂದಿದೆ ಗೂಗಲ್​ ವಾಲೆಟ್​

    ಇತ್ತೀಚೆಗೆ ಗೂಗಲ್​ ವಾಲೆಟ್​ ಅನ್ನು ಭಾರತದಲ್ಲಿ ಪರಿಚಯಿಸಲಾಗಿದೆ. ಸದ್ಯ ಇದರ ಪ್ರಚಾರ ಕಾರ್ಯ ನಡೆಸುತ್ತಿದೆ. ಜೊತೆಗೆ ಬಳಕೆದಾರರನ್ನು ಸೆಳೆಯಲು ಕೆಲವು ಆಫರ್​ ನೀಡುತ್ತಿದೆ. ಅದರಲ್ಲಿ ಡೆಬಿಟ್​ ಕಾರ್ಡ್​, ಕ್ರೆಡಿಟ್​ ಕಾರ್ಡ್​​, ಲಾಯಲ್ಟಿ ಕಾರ್ಡ್​, ಉಡುಗೊರೆಗಳನ್ನು ನೀಡುತ್ತಿದೆ.

    ಇನ್ನು ಗೂಗಲ್​ ವಾಲೆಟ್​ ಹಲವು ಫೀಚರ್ಸ್​ ಹೊಂದಿದೆ. ಈ ಅಪ್ಲಿಕೇಶನ್​ ಪಿನ್​ ರಕ್ಷಣೆ, ಕಳೆದು ಹೋದ ಸಾಧನದಲ್ಲಿರುವ ಅಕೌಂಟ್​ ಅನ್ನು ನಿಷ್ಟ್ರೀಯಗೊಳಿಸುವ ಸಾಮರ್ಥ್ಯ ಹೊಂದಿದೆ. ಮಾತ್ರವಲ್ಲದೆ ಸ್ನೇಹಿತರಿಗೆ ಸುಲಭವಾಗಿ ಹಣ ಕಳುಹಿಸಲು ಸಾಧ್ಯವಾಗುತ್ತದೆ.

    Continue Reading

    LATEST NEWS

    Trending