Connect with us

    DAKSHINA KANNADA

    ಕಂಬಳ ಓಟಗಾರನಿಗೆ ನಿಂದನೆ ಪ್ರಕರಣ: ಪ್ರಶಾಂತ್‌ ಬಂಗೇರ ನಡತೆಯನ್ನು ಸಂಘಟನೆಯು ಖಂಡಿಸುತ್ತದೆ ಎಂದ ರಾಮಸೇನೆ

    Published

    on

    ಮಂಗಳೂರು: ಕಂಬಳ ಓಟಗಾರ ಶ್ರೀನಿವಾಸಗೌಡ ಅವಾಚ್ಯ ನಿಂದನೆ ಮಾಡಿದ ಪ್ರಶಾಂತ್ ಬಂಗೇರರವರು ನಮ್ಮ ಕಾರ್ಯಕರ್ತರಾಗಿದ್ದರೂ ಕೂಡ ಅವರ ಈ ನಡತೆಯನ್ನು ಸಂಘಟನೆಯು ಖಂಡಿಸುತ್ತದೆ. ರಾಮಸೇನಾ ಸಂಘಟನೆಯ ಯಾವುದೇ ಪಾತ್ರ ಇಲ್ಲ ಎಂದು ರಾಮಸೇನೆ ಜಿಲ್ಲಾಧ್ಯಕ್ಷ ಕಿರಣ್‌ ಅಮೀನ್‌ ತಿಳಿಸಿದ್ದಾರೆ.

    ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಮ ಸೇನಾ ಸಂಘಟನೆಯು ಈ ನೆಲದ ಆಚಾರ, ವಿಚಾರ, ಸಂಸ್ಕೃತಿಗೆ ಬೆಲೆಕೊಟ್ಟು ಧರ್ಮ ತೊಡಗಿಕೊಂಡಿರುವ ಒಂದು ಸಂಘಟನೆ. ಪ್ರಶಾಂತ್ ಬಂಗೇರರವರು ಇತ್ತೀಚೆಗಷ್ಟೇ ಶಿವಮೊಗ್ಗ ಜಿಲ್ಲೆಯಿಂದ ರಾಮಸೇನೆ ಸಂಘಟನೆಗೆ ಸೇರಿರುತ್ತಾರೆ. ಇವರಿಗೆ ಸಂಘಟನೆಯಲ್ಲಿ ಯಾವುದೇ ಜವಾಬ್ದಾರಿ ಇರುವುದಿಲ್ಲ. ಇನ್ನು ಪ್ರಶಾಂತ್‌ರವರು ಶ್ರೀನಿವಾಸಗೌಡರನ್ನು ನಿಂದಿಸಲು ಬಳಸಿರುವ ಪದಗಳು ಖಡಾ ಖಂಡಿತವಾಗಿ ಖಂಡನೀಯ, ಒಬ್ಬ ಹಿಂದೂ ಸಂಘಟನೆಯ ಕಾರ್ಯಕರ್ತನಾಗಿ ಇವರು ಇಂತಹ ಪದ ಬಳಸಬಾರದಿತ್ತು.

    ಹಾಗೆಯೇ ಇಲ್ಲಿ ಇವರಿಬ್ಬರ ನಡುವೆ ನಡೆದಿರುವ ಜಗಳ ವೈಯಕ್ತಿಕವಾಗಿರುತ್ತದೆ. ಇದರಲ್ಲಿ ರಾಮಸೇನಾ ಸಂಘಟನೆಯ ಯಾವುದೇ ಪಾತ್ರ ಇಲ್ಲ. ಪ್ರಶಾಂತ್ ಬಂಗೇರರವರು ನಮ್ಮ ಕಾರ್ಯಕರ್ತರಾಗಿದ್ದರೂ ಕೂಡ ಅವರ ಈ ನಡತೆಯನ್ನು ಸಂಘಟನೆಯು ಖಂಡಿಸುತ್ತದೆ. ಮುಂದಿನ ದಿನದಲ್ಲಿ ಕಂಬಳ ಕಮಿಟಿಯ ಮುಖಂಡರು ಹಾಗೂ ಸಂಘಟನೆಯ ಮುಖಂಡರು ಒಟ್ಟಿಗೆ ಕುಳಿತು ಚರ್ಚೆ ನಡೆಸಿ ಸಮಾಧನಕರವಾದ ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

    BELTHANGADY

    ಶಾಸಕನ ಬಂಧನಕ್ಕೆ ಮುಂದಾದ ಪೊಲೀಸರು…! ಎಚ್ಚರಿಕೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ…!

    Published

    on

    ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ವಿರುದ್ಧ ಕೇಸು ದಾಖಲಿಸಿಕೊಂಡ ಪೊಲೀಸರು ಇಂದು ಹರೀಶ್ ಪೂಂಜಾ ಬಂಧನಕ್ಕೆ ಮುಂದಾಗಿದ್ದಾರೆ.

    ಬೆಳ್ತಂಗಡಿಯಲ್ಲಿ ಅಕ್ರಮ ಗಣಿಗಾರಿಕೆಯ ವಿಚಾರದಲ್ಲಿ ಸ್ಫೋಟಕ ಕಾಯ್ದೆಯಡಿ ಬಂಧನವಾಗಿರುವ ಯುವ ಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಪರವಾಗಿ ಹರೀಶ್ ಪೂಂಜ ಪ್ರತಿಭಟನೆ ನಡೆಸಿದ್ದರು. ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಅನುಮತಿ ಇಲ್ಲದೆ ಪ್ರತಿಭಟನೆ ಮಾಡಿಸಿದ್ದು ಮಾತ್ರವಲ್ಲದೆ ಸಭೆಯಲ್ಲಿ ಅವರು ಮಾಡಿದ ಭಾಷಣದ ವಿಚಾರವಾಗಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

    ಪೊಲೀಸ್ ಅಧಿಕಾರಿಗಳ ವಿರುದ್ಧ ಕೀಳು ಮಟ್ಟದ ಭಾಷೆ ಪ್ರಯೋಗಿಸಿದ್ದು, ಮತ್ತು ಡಿಜೆ ಹಳ್ಳಿ ಕೆ.ಜಿ ಹಳ್ಳಿ ಮಾದರಿಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಶಾಸಕರು ಹೇಳಿದ್ದರು. ಇದೀಗ ಪೊಲೀಸರು ಶಾಸಕ ಹರೀಶ್ ಪೂಂಜಾ ಮನೆಗೆ ಆಗಮಿಸಿ ಅವರ ಬಂಧನಕ್ಕೆ ಮುಂದಾಗಿದ್ದಾರೆ. ಆದ್ರೆ ಈ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ತೀವೃವಾಗಿ ಖಂಡಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ ಇದು ಕಾಂಗ್ರೆಸ್ ಸರ್ಕಾರದ ಕುತಂತ್ರವಾಗಿದೆ ಎಂದು ಆರೋಪಿಸಿದ್ದಾರೆ. ತಮ್ಮ ಮೋರ್ಚಾದ ಅಧ್ಯಕ್ಷನ ವಿರುದ್ಧ ಸುಳ್ಳು ಕೇಸು ದಾಖಲಿಸಿದ್ದನ್ನು ಕೇಳಲು ಶಾಸಕರು ಹೋಗಿದ್ದಾರೆ. ಅವರ ಬಿಡುಗಡೆಗೆ ಪ್ರತಿಭಟನೆ ಮಾಡಿದ್ದಾರೆ. ಇದನ್ನು ನೀತಿ ಸಂಹಿತೆಯ ಕಾರಣ ನೀಡಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ದೊಡ್ಡ ವಿಚಾರ ಮಾಡಿದ್ದಾರೆ. ನಮ್ಮ ಶಾಸಕನನ್ನು ಬಂಧಿಸಿದರೆ ಉಗ್ರ ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಇನ್ನು ಹರೀಶ್ ಪೂಂಜಾ ಬಂಧನಕ್ಕೆ ಪೊಲೀಸರು ಮುಂದಾದ ವಿಚಾರದ ಸುದ್ದಿ ತಿಳಿದು ಪೂಂಜಾ ಪರ ವಕೀಲರು ಹಾಗೂ ಬೆಂಬಲಿಗರು ಆಗಮಿಸಿದ್ದಾರೆ. ಶಾಸಕರ ಬಂಧನಕ್ಕೆ ಅವಕಾಶ ನೀಡದಂತೆ ಕಾರ್ಯಕರ್ತರು ತಮ್ಮ ವಾಹನಗಳನ್ನು ದಾರಿಗೆ ಅಡ್ಡವಾಗಿಟ್ಟಿದ್ದಾರೆ. ಈ ವಿಚಾರವಾಗಿ ಮಾತನಾಡಿದ ವಕೀಲರು ಪೊಲೀಸರು ನಿಯಮ ಬಾಹಿರವಾಗಿ ಶಾಸಕರನ್ನು ಬಂಧಿಸಲು ಮುಂದಾಗಿದ್ದಾರೆ. ವಿಚಾರಣೆಗೆ ಹಾಜರಾಗಿ ಅಂತ ನೊಟೀಸು ಕೂಡ ನೀಡದೆ ನೇರವಾಗಿ ಮನೆಗೆ ಬಂದಿದ್ದಾರೆ. ಇದು ತಪ್ಪು ಎಂದು ಹೇಳಿದ್ದಾರೆ. ಡಿಎಸ್‌ಪಿಯವರು ನಿಮ್ಮನ್ನು ಬಂಧಿಸಲು ಬಂದಿದ್ದಲ್ಲ ವಿಚಾರಣೆಗೆ ಬನ್ನಿ ಎಂದು ಕರೆಯಲು ಬಂದಿದ್ದು ಎಂದಿದ್ದಾರೆ. ಆದರೆ ಈ ರೀತಿಯಾಗಿ ಕರೆಯಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಹೇಳಿದ್ದಾರೆ.

    Continue Reading

    DAKSHINA KANNADA

    ವೈರಲ್‌ ಆಯ್ತು ತಂದೂರಿ ಐಸ್‌ಕ್ರೀಮ್‌!

    Published

    on

    ಐಸ್‌ಕ್ರೀಮ್‌ ಅನ್ನು ಇಷ್ಟಪಡದವರು ಯಾರೂ ಇಲ್ಲ. ಇದನ್ನು ಕೋನ್, ಸ್ಕೂಪ್, ಬಾರ್ ರೀತಿಯಲ್ಲಿ ಸವಿಯಬಹುದು. ಇನ್ನು ವೆನಿಲಾ ಐಸ್‌ಕ್ರೀಮ್, ಸ್ಟ್ರಾಬೆರಿ, ಚಾಕೋಲೆಟ್, ಪಿಸ್ತಾ ಹೇಳುತ್ತಾ ಹೋದರೆ ವೆರೈಟಿ ವೈರೆಟಿ ಐಸ್‌ಕ್ರೀಮ್‌ಗಳ ದೊಡ್ಡ ಪಟ್ಟಿಯೇ ಇದೆ. ಬಗೆಬಗೆಯ ಐಸ್‌ಕ್ರೀಮ್‌ಗಳು ಒಂದು ಕಡೆಯಾದರೆ, ಇಲ್ಲೊಂದು ವಿಶೇಷ ಬಗೆಯ ಐಸ್‌ಕ್ರೀಮ್‌ ಇದೆ.

    ವೈರಲ್ ಆಯ್ತು ತಂದೂರಿ ಐಸ್‌ಕ್ರೀಮ್:

    ಹೌದು… ಈ ಐಸ್‌ಕ್ರೀಮ್‌ನ ಹೆಸರು ತಂದೂರಿ ಐಸ್‌ಕ್ರೀಮ್. ಇತ್ತೀಚಿನ ದಿನಗಳಲ್ಲಿ ಫುಡ್ ಮೇಲಿನ ಪ್ರಯೋಗಗಳು ಹೆಚ್ಚಾಗುತ್ತಿವೆ. ಐಸ್‌ಕ್ರೀಮ್ ಮತ್ತು ಚಾಕಲೇಟ್ ದೋಸೆ, ಜಾಮೂನ್‌ ದೋಸೆ, ದಹಿ ಮ್ಯಾಗಿ, ಓರಿಯೊ ಪಕೋಡಾ, ಚಾಕೊಲೇಟ್ ರೈಸ್ ಬೌಲ್, ಡ್ರೈ ಫ್ರೂಟ್ ಆಮ್ಲೆಟ್, ವೋಡ್ಕಾ ಆಲೂ ಪರಾಠ, ಡಿಸೇಲ್ ಪರೋಟ ಹೀಗೆ ವಿಚಿತ್ರ ಕಾಂಬಿನೇಷನ್‌ನ ಆಹಾರಗಳು, ಖಾದ್ಯ ತಿಂಡಿಗಳಲ್ಲಾಗುವ ಹೊಸ ಪ್ರಯೋಗಗಳ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದವು. ಇಂಟರ್‌ನೆಟ್‌ನಲ್ಲಿ ಇಂತಹ ಹೊಸ ಪ್ರಯೋಗಗಳು ಕಾಣ ಸಿಗುತ್ತಲೇ ಇರುತ್ತವೆ. ಈಗ ಸದ್ಯ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿರುವುದು ಹಾಟ್‌ ಹಾಟ್‌ ತಂದೂರಿ ಐಸ್‌ಕ್ರೀಮ್‌.

    ಗ್ರಿಲ್‌ ಮೇಲೆ ಬೇಯುತ್ತಿದೆ ಐಸ್‌ಕ್ರೀಮ್‌:

    ಬಿಸಿಲಿನ ಬೇಗೆ ತಣಿಸಿಕೊಳ್ಳಲು, ತಂಪಾಗಿರಲು ಐಸ್‌ಕ್ರೀಮ್‌ ತಿನ್ನೋದು ಸರಿ. ಆದರೆ ಈ ಐಸ್‌ಕ್ರೀಮ್‌ ನೋಡಿದರೆ ಬೇಸಿಗೆಯಲ್ಲಿ ತಿನ್ನೋದೆ ಕಷ್ಟ ಎನಿಸಿದೆ. ಗ್ರಿಲ್‌ ಮೇಲೆ ಬೇಯುತ್ತಿರುವ ಐಸ್‌ಕ್ರೀಮ್‌ ಈಗ ವೈರಲ್‌ ಆಗಿದೆ.

    ಈ ತಂದೂರಿ ಐಸ್‌ಕ್ರೀಮ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೆಯಾಗಿದೆ. ವೀಡಿಯೊದಲ್ಲಿ ಒಬ್ಬ ವ್ಯಕ್ತಿಯು ನಾಲ್ಕು ಐಸ್ ಕ್ರೀಮ್ ಬಾರ್‌ಗಳನ್ನು ತೆಗೆದುಕೊಂಡಿದ್ದಾನೆ. ಅದರಲ್ಲಿ ಎರಡು ಚಾಕೊಲೇಟ್ ಫ್ಲೇವರ್‌ಗಳು ಮತ್ತು ಇತರ ಎರಡು ವೆನಿಲ್ಲಾ ಫ್ಲೇವರ್‌ಗಳು.

    ಈ ನಾಲ್ಕು ಐಸ್‌ಕ್ರೀಮ್‌ ಬಾರ್‌ಗಳನ್ನು ಆ ವ್ಯಕ್ತಿ ಸೀದಾ ಬಿಸಿ ಬಿಸಿ ಕೆಂಡದಲ್ಲಿ ಉಗಿ ಹಾಯುತ್ತಿರುವ ಗ್ರಿಲ್‌ ಮೇಲೆ ಇರಿಸುತ್ತಾನೆ. ಆಮೇಲೆ ಸ್ವಲ್ಪ ಹೊತ್ತಿನ ಬಳಿಕ ಆ ಐಸ್‌ಕ್ರೀಮ್‌ ಮೇಲೆ ಕಲರ್‌ಫುಲ್‌ ಆಗಿರುವ ಒಂದಿಷ್ಟು ಸಿಂಪರಣೆಗಳನ್ನು ಹಾಕಿ ಆ ಐಸ್‌ಕ್ರೀಮ್‌ ಬಾರ್‌ಗಳನ್ನು ಅಲಂಕರಿಸುತ್ತಾನೆ.

    ಫುಡ್‌ಬಿ..ಯುಎನ್‌ಕೆ ಎಂಬ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಲಾದ ಈ ವಿಡಿಯೋಗೆ “ತಂದೂರಿ ಚಾಕೊ-ಬಾರ್” ಎಂದು ಕ್ಯಾಪ್ಷನ್‌ ನೀಡಲಾಗಿದೆ.

    Continue Reading

    DAKSHINA KANNADA

    ಮನೆಯಲ್ಲಿ ಸೊಳ್ಳೆ ಕಾಟವೇ? ಈ ಗಿಡಗಳನ್ನು ನೆಟ್ಟರೆ ಸೊಳ್ಳೆ ನಿಮ್ಮ ಹತ್ತಿರ ಸುಳಿಯುವುದಿಲ್ಲ

    Published

    on

    ಮಂಗಳೂರು: ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿರುತ್ತದೆ. ರಾತ್ರಿಯಾದರೆ ಸಾಕು, ಕಿವಿ ಬಳಿ ಗುಯಿಂಗುಟ್ಟುತ್ತ ನಿದ್ದೆ ಮಾಡಲು ಕೂಡ ಬಿಡುವುದಿಲ್ಲ. ಸೊಳ್ಳೆಗಳ ಸಂತತಿಯು ವಿಪರೀತವಾದರೆ ಇನ್ನಿತ್ತರ ಆರೋಗ್ಯ ಸಮಸ್ಯೆಗಳಿಗೂ ದಾರಿ ಮಾಡಿಕೊಡುತ್ತವೆ. ಸೊಳ್ಳೆ ಕಚ್ಚಿದರೆ ಡೆಂಗ್ಯೂ ಮಲೇರಿಯಾ, ಚಿಕನ್‌ ಗುನ್ಯಾದಂಥಹ ಕಾಯಿಲೆಗಳು ಬರುತ್ತವೆ.

    ಸೊಳ್ಳೆ ಏನಾದರೂ ಕಚ್ಚಿ ಬಿಟ್ಟರೆ ಆ ಜಾಗವು ಊದಿಕೊಂಡು ತುರಿಕೆ ಆರಂಭವಾಗಿ ಚರ್ಮದ ಗಂಭೀರ ಸಮಸ್ಯೆಗೆ ಕಾರಣವಾಗಬಹುದು. ಹೆಚ್ಚಿನವರು ಸೊಳ್ಳೆ ಪರದೆ, ಕಾಯಿಲ್, ಕ್ರೀಮ್ ಹೀಗೆ ನಾನಾ ರೀತಿಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಮನೆಯ ಸುತ್ತ ಮುತ್ತ ಈ ಗಿಡಗಳನ್ನು ನೆಟ್ಟರೆ ಸೊಳ್ಳೆಗಳು ನಿಮ್ಮ ಹತ್ತಿರವೇ ಸುಳಿಯುವುದಿಲ್ಲ.

    ಸೊಳ್ಳೆಗಳಿಂದ ರಕ್ಷಿಸಲು ಹೀಗೆ ಮಾಡಿ:

    • ಸೊಳ್ಳೆಗಳನ್ನು ಓಡಿಸಲು ಸುಲಭ ಉಪಾಯವೆಂದರೆ ಮನೆಯ ಸುತ್ತ ಮುತ್ತ ತುಳಸಿ ಮತ್ತು ಪುದೀನ ಸಸ್ಯವನ್ನು ನೆಡುವುದು. ಈ ಸಸ್ಯದ ಎಲೆಯಲ್ಲಿರುವ ಪರಿಮಳದಿಂದ ಸೊಳ್ಳೆಗಳು ಮತ್ತು ಕೀಟಗಳು ಮನೆಯೊಳಗೆ ಬರುವುದಿಲ್ಲ.
    • ರೋಸರಿ ಸಸ್ಯವನ್ನು ಮನೆಯ ಹಾಸುಮಾಸಿನಲ್ಲಿ ನೆಡುವುದರಿಂದ ಸೊಳ್ಳೆಗಳು ಬರುವುದಿಲ್ಲ. ಇದರ ಪರಿಮಳಯುಕ್ತವಾದ ಸುವಾಸನೆಗೆ ಈ ಸೊಳ್ಳೆಗಳು ಹಾಗೂ ಕೀಟಗಳು ದೂರ ಓಡುತ್ತವೆ.
    • ಲ್ಯಾವೆಂಡರ್ ಸಸ್ಯವು ಕೂಡ ಸೊಳ್ಳೆಗಳ ಕಾಟಕ್ಕೆ ಪ್ರಯೋಜನಕಾರಿಯಾಗಿದೆ. ಈ ಎಲೆಗಳಲ್ಲಿ ಕಂಡುಬರುವ ಎಸೆನ್ಶಿಯಲ್ ಆಯಿಲ್ ಪರಿಮಳದಿಂದ ಸೊಳ್ಳೆಗಳಿಂದ ಸುಲಭವಾಗಿ ಮುಕ್ತಿ ಪಡೆಯಬಹುದಾಗಿದೆ.
    • ಮನೆಯ ಮುಂದೆ ಚೆಂಡು ಹೂವಿನ ಸಸ್ಯವನ್ನು ನೆಡುವುದರಿಂದ ನೋಡುವುದಕ್ಕೆ ಸುಂದರವಾಗಿ ಕಾಣುವುದಲ್ಲದೇ ಸೊಳ್ಳೆಗಳನ್ನು ಸುಲಭವಾಗಿ ಓಡಿಸಬಹುದು. ಈ ಹೂವಿನ ಸುವಾಸನೆಯು ಸೊಳ್ಳೆಗಳಿಗೆ ತೊಂದರೆ ಉಂಟುಮಾಡಿ ಅವುಗಳನ್ನು ಓಡಿಸುತ್ತವೆ.
    Continue Reading

    LATEST NEWS

    Trending