Connect with us

    LATEST NEWS

    ಮತ್ತೋರ್ವ IPS ಅಧಿಕಾರಿ ರವಿ ಚನ್ನಣ್ಣನವರ್‌ ರಾಜಕೀಯಕ್ಕೆ..?

    Published

    on

    ಬೆಂಗಳೂರು: ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಈಗ ತಮಿಳುನಾಡು ಬಿಜೆಪಿ ಘಟಕದ ರಾಜ್ಯಾಧ್ಯಕ್ಷ. ಈಗ ಅವರಂತೆಯೇ ರಾಜ್ಯದ ಮತ್ತೊಬ್ಬ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬ ಗುಸು ಗುಸು ಸುದ್ದಿ ಹರಿದಾಡುತ್ತಿದೆ. ಕಾರಣ ಆ ಅಧಿಕಾರಿಯ ಮಠದ ಭೇಟಿಗಳು.


    ಈಗಾಗಲೇ ಐಪಿಎಸ್‌ ಹುದ್ದೆ ತೊರೆದು ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾಗಿದ್ದು, ತಮಿಳುನಾಡು ರಾಜ್ಯಾಧ್ಯಕ್ಷರಾಗಿದ್ದಾರೆ. ಈ ಮಧ್ಯೆ ರವಿ ಚೆನ್ನಣ್ಣನವರ್​ ನಡೆ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಚುನಾವಣೆಗೆ ಪದಾರ್ಪಣೆ ಮಾಡ್ತಾರೆ ಅಂತಾ ಹೇಳಲಾಗ್ತಿದೆ. ಅದಕ್ಕಾಗಿ ಐಪಿಎಸ್​ ಅಧಿಕಾರಿ ಹಲವು ಮಠಗಳ ಯಾತ್ರೆ ಕೈಗೊಂಡಿದ್ದಾರೆ. ಚಿತ್ರದುರ್ಗದ ಬಸವ ಮಾಚಿದೇವ ಮಹಾಸ್ವಾಮಿಗಳನ್ನ ಭೇಟಿ ಮಾಡಿರುವ ಚೆನ್ನಣ್ಣನವರ್, ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳ ಆಶೀರ್ವಾದವನ್ನೂ ಪಡೆದಿದ್ದಾರೆ.


    ಹರಿಹರ ಪೀಠದ ವಚನಾನಂದ ಶ್ರೀಗಲು, ಬೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿವನ್ನೂ ಚೆನ್ನಣ್ಣನವರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆಯನ್ನ ರವಿಯವರು ಹೊಂದಿದ್ದಾರೆ ಎನ್ನಲಾಗುತ್ತಿದೆ.
    ದೊಡ್ಡಬಳ್ಳಾಪುರ ಅಥವಾ ನೆಲಮಂಗಲ ಮೀಸಲು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ರವಿ ಚೆನ್ನಣ್ಣನವರ್​ ಅವರ ಮಠಗಳ ಯಾತ್ರೆಯ ಹಿಂದೆ ಇಷ್ಟೆಲ್ಲಾ ಸುದ್ದಿಗಳು ಗುಲ್ಲೆದ್ದಿವೆ. ಆದರೆ, ತಮ್ಮ ರಾಜಕೀಯ ಎಂಟ್ರಿಯ ಊಹಾಪೋಹಗಳ ಬಗ್ಗೆ ಖುದ್ದಿ ಅವರೇ ಸ್ಪಷ್ಟನೆ ನೀಡಬೇಕಿದೆ.

    LATEST NEWS

    ಹಾಡಹಗಲೇ ತಹಶೀಲ್ದಾರ್​ ಕಚೇರಿಯಿಂದ 2 ಪ್ರಿಂಟರ್ ಕದ್ದೊಯ್ದ ಕಳ್ಳರು!

    Published

    on

    ತುಮಕೂರು : ಗುಬ್ಬಿ ತಹಶೀಲ್ದಾರ್​ ಕಚೇರಿಯಲ್ಲಿ ಹಾಡಹಗಲೇ ಕಳ್ಳತನವಾಗಿದೆ. ಕಳ್ಳರು ಕಚೇರಿಯಲ್ಲಿದ್ದ 2 ಪ್ರಿಂಟರ್​ಗಳನ್ನು ಕದ್ದೊಯ್ದಿದ್ದಾರೆ. ಸಾರ್ವಜನಿಕ ಸೋಗಿನಲ್ಲಿ ತಹಶೀಲ್ದಾರ್​ ಕಚೇರಿಗೆ ಆಗಮಿಸಿದ ಕಳ್ಳರು ಶಿರಸ್ತೇದಾರ್ ವಿಭಾಗದಲ್ಲಿದ್ದ 2 ಪ್ರಿಂಟರ್​​ಗಳನ್ನ ಕದ್ದುಕೊಂಡು ಪರಾರಿಯಾಗಿದ್ದಾರೆ.


    ಎರಡು ಪ್ರಿಂಟರ್ ಗಳನ್ನ ಕದ್ದು ಬ್ಯಾಗ್ ನಲ್ಲಿ ಇಟ್ಟುಕೊಳ್ಳುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಗುಬ್ಬಿ ಪಟ್ಟಣದ ಎರಡು ದೊಡ್ಡ ಸೂಪರ್ ಮಾರ್ಕೆಟ್ ನಲ್ಲಿ ಕಳ್ಳತನವಾಗಿತ್ತು. ಈಗಿರುವ ತಹಶೀಲ್ದಾರ್ ಆರತಿ ಮನೆಯಲ್ಲೂ‌ ಕೂಡ ಎರಡು ವರ್ಷದ ಹಿಂದೆ ಕಳ್ಳತನವಾಗಿತ್ತು.

    ಇದನ್ನೂ ಓದಿ : ಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ..! ನಳಿನ್ ಕುಮಾರ್ ಕಟೀಲ್‌ಗೆ ನಿರಾಸೆ..!

    ಪ್ರಕರಣ ಬೆಂಬತ್ತಿರುವ ಪೊಲೀಸರಿಗೆ ಇದುವರೆಗೂ ಆರೋಪಿಗಳನ್ನು ಸುಳಿವು ಪತ್ತೆಯಾಗಿಲ್ಲ. ಸದ್ಯ ತಹಶಿಲ್ದಾರ್ ಕಚೇರಿಯ ಪ್ರಿಂಟರ್ ಕಳ್ಳತನದಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.

    Continue Reading

    DAKSHINA KANNADA

    ಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ..! ನಳಿನ್ ಕುಮಾರ್ ಕಟೀಲ್‌ಗೆ ನಿರಾಸೆ..!

    Published

    on

    ಬೆಂಗಳೂರು/ ಮಂಗಳೂರು: ವಿಧಾನಪರಿಷತ್‌ನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಜೂ. 13 ರಂದು ಮತದಾನ ನಡೆಯಲಿದೆ. ಸೋಮವಾರ(ಜೂ.3) ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ಬಿಜೆಪಿ ತನ್ನ ಮೂರು ಅಭ್ಯರ್ಥಿಗಳ ಘೋಷಣೆ ಮಾಡಿದೆ. ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿಗೆ ಮೂರು ಸ್ಥಾನಗಳನ್ನು ಗೆಲ್ಲುವ ಅವಕಾಶ ಇದೆ ಹೀಗಾಗಿ ಮೂವರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

     

    ಮುಂದೆ ಓದಿ..;  ಲೋಕಸಭಾ ಚುನಾವಣೆ: ರಾಷ್ಟ್ರಪತಿ, ಕಾಂಗ್ರೆಸ್ ಮುಖಂಡರಿಂದ ಮತದಾನ.. ಮತಕ್ಕಾಗಿ ಸರ್ಟಿಫಿಕೇಟ್ ಪಡೆದ ವಿದೇಶಾಂಗ ಸಚಿವ

    ಮಾಜಿ ಸಚಿವ ಸಿ.ಟಿ.ರವಿ, ಮಾಜಿ ಪರಿಷತ್ ಸದಸ್ಯ ಎನ್‌ .ರವಿಕುಮಾರ್ ಮತ್ತು ಬಸವಕಲ್ಯಾಣದ ಮಾಜಿ ಶಾಸಕ ಎಂ.ಜಿ.ಮೂಳೆ ಅವರಿಗೆ ಟಿಕೆಟ್ ನೀಡಲಾಗಿದೆ.

    ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ವಂಚಿತರಾಗಿದ್ದ ನಳಿನ್ ಕುಮಾರ್ ಕಟೀಲ್ ಈ ಬಾರಿ ಪರಿಷತ್ ಟಿಕೇಟ್ ನಿರೀಕ್ಷೆಯಲ್ಲಿದ್ರು . ಅದೇ ರೀತಿಯಾಗಿ ಬಿಜೆಪಿಗೆ ಬೆಂಬಲ ಸೂಚಿಸಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದ ಸುಮಲತಾ ಕೂಡಾ ಪರಿಷತ್ ಟಿಕೇಟ್ ಸಿಗುವ ನಿರೀಕ್ಷೆಯಲ್ಲಿದ್ರು. ಆದ್ರೆ ಈ ಇಬ್ಬರಿಗೂ ಪಕ್ಷದ ವರಿಷ್ಠರು ನಿರಾಸೆ ಮೂಡಿಸಿದ್ದಾರೆ.

    ಸೋಮವಾರ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ಮಂಗಳವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ಗುರುವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಜೂ. 13 ರಂದು ಮತದಾನ ನಡೆಯಲಿದೆ.

    Continue Reading

    LATEST NEWS

    ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ..! ಗಂಭೀರ ಗಾಯಗೊಂಡ ಮಕ್ಕಳು ಆಸ್ಪತ್ರೆಗೆ ದಾಖಲು

    Published

    on

    ತುಮಕೂರು: ಇಲ್ಲಿನ ಶಿರಾ ನಗರಸಭೆಯ 12 ನೇ ವಾರ್ಡ್​ನಲ್ಲಿರುವ ಮನೆಯೊಂದರ ಮುಂದೆ ಆಟವಾಡುತ್ತಿದ್ದ ನಾಲ್ಕು ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದಂತೆ ಒಟ್ಟು ಐದು ಜನರ ಮೇಲೆ ಏಕಾಏಕಿ ಬೀದಿ ನಾಯಿಗಳು ದಾಳಿ ನಡೆಸಿದೆ.

    ಮನೆ ಮುಂದೆ ಆಟವಾಡುತ್ತಿದ್ದ ಏಳು ಮಂದಿ ಮಕ್ಕಳು ಸೇರಿದಂತೆ ಮಹಿಳೆಯ ಮೇಳೆ ಬೀದಿ ನಾಯಿಗಳು ದಾಳಿ ನಡೆಸಿದ್ದು ಗಾಯಗೊಂಡವರನ್ನು ರಿಹಾನ್ (7 ವರ್ಷ),  ತಾಸ್ಮಿಯ  (13 ವರ್ಷ), ಶಾಹಿನ (45 ವರ್ಷ), ಜಿಯಾ ಉಲ್ಲಾಖಾನ್  (7ವರ್ಷ),  ಇಬದುಲ್ಲಾ ಖಾನ್ (1 ವರ್ಷ ) ಎಂದು ಗುರುತಿಸಲಾಗಿದೆ. ಇನ್ನು ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುತ್ತಿರುವುದನ್ನು ಕಂಡ ಸ್ಥಳೀಯರು ಕೂಡಲೇ ನಾಯಿಗಳನ್ನು ಬೆದರಿಸಿ ಓಡಿಸಿ ಬಾಲಕನ್ನನು ನಾಯಿಗಳಿಂದ ಬಚಾವ್‌ ಮಾಡಿದ್ದಾರೆ. ಬೀದಿ ನಾಯಿಗಳು ಮಕ್ಕಳ ತಲೆ, ಕೈ, ಹೊಟ್ಟೆ ಭಾಗಗಳಿಗೆ ಕಚ್ಚಿ ಗಾಯ ಮಾಡಿದೆ. ಇನ್ನು ಗಂಭೀರವಾಗಿ ಗಾಯಗೊಂಡ ಮಕ್ಕಳನ್ನು ಪೋಷಕರು  ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

    ಕೋಟ: ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ – ಸವಾರ ಸ್ಥಳದಲ್ಲೇ ಸಾ*ವು

    ಬೀದಿ ನಾಯಿಗಳು ಸೆರೆ ಹಿಡಿಯುವಂತೆ ಪೋಷಕರು ಹಾಗೂ ಸಾರ್ವಜನಿಕರು ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ. ನಗರಸಭೆ ಆಯುಕ್ತ ಕೆ.ರುದ್ರೇಶ್ ಸಾರ್ವಜನಿಕ ಮನವಿಯನ್ನು ಪಡೆದು ಮಾತನಾಡಿದ ನಗರಸಭೆ ಸಾಮಾನ್ಯ ಸಭೆಯಲ್ಲಿ ನಾಯಿಗಳ ಹಾವಳಿ ನಿಯಂತ್ರಿಸುವ ಎಬಿಸಿ ಕಾರ‍್ಯಕ್ರಮ ಅನುಷ್ಠಾನಕ್ಕಾಗಿ ಸಭೆ ತೀರ್ಮಾನ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ತಡವಾಯಿತು. ಸದ್ಯದಲ್ಲೇ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದ ತಿಳಿಸಿದರು.

    Continue Reading

    LATEST NEWS

    Trending