Connect with us

LATEST NEWS

ಹಾಲಿಗೆ ನೀರು ಬೆರೆಸುತ್ತಿದ್ದ ಪ್ರಕರಣ ಸಿಐಡಿಗೆ

Published

on

ಬೆಂಗಳೂರು: ಹಾಲಿಗೆ ನೀರು ಬೆರೆಸಿ ವಂಚಿಸುತ್ತಿದ್ದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.


ಈ ಪ್ರಕರಣದ ಹಿನ್ನೆಲೆಯಲ್ಲಿ ಮಂಡ್ಯ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರನ್ನು ಬದಲಾವಣೆ ಮಾಡಿ ಒಕ್ಕೂಟಕ್ಕೆ ಹೊಸ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಿದ್ದೇವೆ. ಜತೆಗೆ, ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವಹಿಸಲಾಗಿದೆ ಎಂದು ಅವರು ತಿಳಿಸಿದರು.
ಹಾಲಿಗೆ ನೀರು ಮಿಶ್ರಣ ಮಾಡಿ ವಂಚಿಸುತ್ತಿದ್ದ ಜಾಲ ಮೇ 31ರಂದು ಪತ್ತೆಯಾಗಿ ಮಂಡ್ಯ ಜಿಲ್ಲಾದ್ಯಂತ ಸಂಚಲನ ಸೃಷ್ಟಿಸಿತ್ತು. ಹಾಲು ಸಾಗಿಸುವ ಗುತ್ತಿಗೆ ಪಡೆದಿರುವವರಿಂದಲೇ ನಿತ್ಯ ಸಾವಿರಾರು ಲೀಟರ್ ಹಾಲಿಗೆ ನೀರು ಮಿಶ್ರಣ ಮಾಡಿ ಸಾಗಿಸುತ್ತಿದ್ದ ಜಾಲ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಸಿಕ್ಕಿಬಿದ್ದಿತ್ತು.
ನೀರು ಮಿಶ್ರಿತ ಹಾಲು ಬರುವಂತೆ ಟ್ಯಾಂಕರ್ ವಿನ್ಯಾಸಗೊಳಿಸಿ ಟ್ಯಾಂಕರ್ ಒಳಭಾಗದಲ್ಲಿ ನೀರು ತುಂಬಲು ಪ್ರತ್ಯೇಕ ವಿಭಾಗ ರೂಪಿಸಿದ್ದರು. ಅನುಮಾನಗೊಂಡು ಒಕ್ಕೂಟದ ಅಧ್ಯಕ್ಷ ರಾಮಚಂದ್ರು ನೇತೃತ್ವದಲ್ಲಿ ತಪಾಸಣೆ ನಡೆಸಿದಾಗ ಜಾಲ ಬಯಲಾಗಿದ್ದು, ವಂಚನೆ ನಡೆಸಲು ಬಳಸಿದ ವಿಧಾನಕ್ಕೆ ಆಡಳಿತ ಮಂಡಳಿ ದಂಗಾಗಿದೆ. ಸದ್ಯ 6 ಟ್ಯಾಂಕರ್​ಗಳನ್ನು ವಶಕ್ಕೆ ಪಡೆದ ಮದ್ದೂರು ಪೊಲೀಸರು ತನಿಖೆ ನಡೆಸಿದ್ದರು.

FILM

ದುಬಾರಿ ಕಾರು ಖರೀದಿಸಿದ ಸಂಭ್ರಮದಲ್ಲಿ ಸಿಂಹಪ್ರಿಯಾ; ಬೆಲೆ ಎಷ್ಟು ಗೊತ್ತಾ?

Published

on

ಬೆಂಗಳೂರು : ಸೆಲೆಬ್ರಿಟಿಗಳಿಗೆ ಕಾರಿನ ಕ್ರೇಝ್ ಹೆಚ್ಚಾಗಿರುತ್ತದೆ. ದುಬಾರಿ ಬೆಲೆಯ ಕಾರುಗಳನ್ನು ಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಾರು ಖರೀದಿಸಿದ್ದ ಸುದ್ದಿ ವೈರಲ್ ಆಗಿತ್ತು. ಅವರು ಆಡಿ ಕ್ಯೂ7 ಮಾದರಿಯ ಗ್ರೇ ಬಣ್ಣದ ಕಾರನ್ನು ಖರೀದಿಸಿದ್ದರು. ಅವರ ಐಷಾರಾಮಿ ಕಾರಿನ ಆನ್ ರೋಡ್ ಬೆಲೆಯು ರೂ.1.10 ಕೋಟಿಯಾಗಿದೆ. ಇದೀಗ ಹರಿಪ್ರಿಯಾ – ವಸಿಷ್ಠ ಸಿಂಹ ಹೊಸ ಕಾರೊಂದನ್ನು ಖರೀದಿಸಿದ್ದಾರೆ.

ಬೆಲೆ ಎಷ್ಟು? :


ಕಾರನ್ನು ಕೊಳ್ಳುವ ಮೂಲಕ ವಸಿಷ್ಠ ಸಿಂಹ ತಮ್ಮ ಕನಸೊಂದನ್ನು ನನಸಾಗಿಸಿಕೊಂಡಿದ್ದಾರೆ. ಮರ್ಸಿಡಿಸ್ ಬೆಂಝ್ ನಿರ್ಮಾಣದ ಜಿಎಲ್ಇ 450ಡಿ ಕಾರನ್ನು ಅವರು ಖರೀದಿಸಿದ್ದಾರೆ. ಮರ್ಸಿಡಿಸ್ ಬೆಂಝ್ ಜಿಎಲ್ಇ 450ಡಿ ಆವೃತ್ತಿಯು ಸದ್ಯ ಬೆಂಗಳೂರಿನಲ್ಲಿ ಆನ್ ರೋಡ್ ಪ್ರಕಾರ ರೂ. 1.44 ಕೋಟಿ ಬೆಲೆ ಹೊಂದಿದೆ.

ಇದನ್ನೂ ಓದಿ : ‘ಮಹಾನಟಿ’ ರಿಯಾಲಿಟಿ ಶೋ ವಿರುದ್ಧ ಬಿತ್ತು ಕೇಸ್; ಯಾಕೆ ಗೊತ್ತಾ!?

ಹೊಸ ಕಾರು ಖರೀದಿ ಮಾಡಿದ ವಿಡಿಯೋವನ್ನು ವಸಿಷ್ಠ ಸಿಂಹ ತಮ್ಮ ಇನ್​ಸ್ಟಾಗ್ರಾಮ್ ​ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಸ್ಟಾರ್ ​ದಂಪತಿ ಕಾರು ಶೋ ರೂಮ್​ಗೆ ಎಂಟ್ರಿ ಕೊಡುವುದರೊಂದಿಗೆ ವೀಡಿಯೋ ಆರಂಭಗೊಳ್ಳುತ್ತದೆ.


ಬಳಿಕ ಹೊಸ ದುಬಾರಿ ಕಾರಿನ ವಿತರಣೆಯನ್ನು ಪಡೆದುಕೊಂಡಿದ್ದಾರೆ. ಹೊಸ ಕಾರು ಕೊಂಡ ತಮ್ಮ ನೆಚ್ಚಿನ ನಟ – ನಟಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಸದ್ಯ ಸಿಂಹಪ್ರಿಯಾ ಖರೀದಿಸಿದ ಹೊಸ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Continue Reading

FILM

‘ಮಹಾನಟಿ’ ರಿಯಾಲಿಟಿ ಶೋ ವಿರುದ್ಧ ಬಿತ್ತು ಕೇಸ್; ಯಾಕೆ ಗೊತ್ತಾ!?

Published

on

ಬೆಂಗಳೂರು : ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಿಗೇನೂ ಕಮ್ಮಿ ಇಲ್ಲ. ಹಲವಾರು ರಿಯಾಲಿಟಿ ಶೋಗಳು ಗಮನ ಸೆಳೆಯುತ್ತಿವೆ. ಅದರಲ್ಲಿ ಇತ್ತೀಚೆಗೆ ಆರಂಭವಾದ ‘ಮಹಾನಟಿ’ ಧಾರಾವಾಹಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನಟಿಯಾಗಲು ಬಯಸುವ ಕಲಾವಿದರಿಗೆ ಝೀ ಕನ್ನಡ ವಾಹಿನಿ ವೇದಿಕೆ ನೀಡಿತ್ತು. ಇದೀಗ ಈ ಶೋ ಗೆ ದೊಡ್ಡ ಶಾಕ್ ಸಿಕ್ಕಿದೆ.


ಏನು ಆರೋಪ? :

ಈ ರಿಯಾಲಿಟಿ ಶೋ ನ ನಿರೂಪಣೆಯನ್ನು ಅನುಶ್ರೀ ಮಾಡುತ್ತಿದ್ದಾರೆ. ನಿರ್ದೇಶಕ ತರುಣ್‌ ಸುಧೀರ್‌, ಹಿರಿಯ ನಟಿ ಪ್ರೇಮಾ, ನಟ ರಮೇಶ್ ಅರವಿಂದ್ ಮತ್ತು ನಟಿ ನಿಶ್ವಿಕಾ ನಾಯ್ಡು ತೀರ್ಪುಗಾರರಾಗಿದ್ದಾರೆ. ಇದೀಗ ಈ ಶೋನಲ್ಲಿ ಬಳಕೆಯಾದ ಸಾಲಿನ ಬಗ್ಗೆ ಅಪಸ್ವರ ಕೇಳಿ ಬಂದಿದೆ.

ಹೌದು, ಈ ಶೋನಲ್ಲಿ ಸ್ಪರ್ಧಿಯೊಬ್ಬರು ನಟನೆ ಮಾಡುವಾಗ ಬಳಕೆ ಮಾಡಿದ ಶಬ್ದ ಚರ್ಚೆ ಹುಟ್ಟುಹಾಕಿದೆ. ‘ಮೆಕ್ಯಾನಿಕ್​ನ ಮದುವೆ ಆದರೆ ಗ್ರೀಸ್ ತಿಂದು ಬದುಕಬೇಕಾಗುತ್ತದೆ..’ ಎನ್ನುವ ವಾಕ್ಯ ಬಳಕೆ ಆಗಿದೆ. ಇದು ಮೆಕ್ಯಾನಿಕ್​ ಕೆಲಸ ಮಾಡುವವರ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ.

ಇದನ್ನೂ ಓದಿ : “ಮದುವೆ ಗೌನ್‌”ಗೆ ಮತ್ತೊಂದು ಟಚ್ ಕೊಟ್ಟ ‘ಸಮಂತಾ’..!! ಶಾಕ್‌ನಲ್ಲಿಅಭಿಮಾನಿಗಳು!

ದೂರು ದಾಖಲಿಸಿದ್ದು ಯಾರು? :

‘ಮೆಕ್ಯಾನಿಕ್​ನ ಮದುವೆ ಆದರೆ ಗ್ರೀಸ್ ತಿಂದು ಬದುಕಬೇಕಾಗುತ್ತದೆ..’ ಎನ್ನುವ ವಾಕ್ಯದ ಬಗ್ಗೆ ಆಕ್ಷೇಪ ಕೇಳಿ ಬಂದಿದೆ. ಅಲ್ಲದೇ, ಚಿಕ್ಕನಾಯಕನಹಳ್ಳಿಯ ಫ್ರೆಂಡ್ಸ್ ದ್ವಿಚಕ್ರವಾಹನ ವರ್ಕ್‌ಶಾಪ್ ಮಾಲೀಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ದೂರು ದಾಖಲು ಮಾಡಿದ್ದಾರೆ.

ಈ ಶೋನ ನಿರ್ಮಾಪಕರು, ನಿರ್ದೇಶಕರು, ದೃಶ್ಯದಲ್ಲಿ ಆ್ಯಕ್ಟ್ ಮಾಡಿದ ಗಗನಾ ವಿರುದ್ಧವೂ ಕೇಸ್ ದಾಖಲಾಗಿದೆ. ಅಲ್ಲದೇ, ನಿರೂಪಕಿ ಅನುಶ್ರೀ, ಜಡ್ಜ್​ಗಳಾದ ರಮೇಶ್ ಅರವಿಂದ್, ನಟಿ ಪ್ರೇಮಾ ಮೇಲೂ ಪ್ರಕರಣ ದಾಖಲಾಗಿದೆ.

Continue Reading

LATEST NEWS

WATCH : 2ನೇ ಮಹಡಿಯ ರೂಫ್ ಮೇಲೆ ಬಿದ್ದ 8 ತಿಂಗಳ ಮಗು; ಮಗುವನ್ನು ರಕ್ಷಿಸಿದ ರೋಚಕ ಕ್ಷಣಗಳ ವೀಡಿಯೋ ವೈರಲ್

Published

on

ಚೆನ್ನೈ : ಮಕ್ಕಳ ಕುರಿತು ಪೋಷಕರು ಎಷ್ಟು ಎಚ್ಚರ ವಹಿಸಿದರೂ ಸಾಲದು. ಮಕ್ಕಳನ್ನು ಆಡಲು ಬಿಟ್ಟಾಗ ಅಥವಾ ತಾವೇ ಮಗುವನ್ನು ಆಡಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸುವುದು ಅತೀ ಅಗತ್ಯ. ಇಲ್ಲವಾದಲ್ಲಿ ದುರಂ*ತ ಸಂಭವಿಸುವ ಸಾಧ್ಯತೆ ಇದೆ. ಅದಕ್ಕೆ ಚೆನ್ನೈನಲ್ಲಿ ನಡೆದ ಘಟನೆ ಸಾಕ್ಷಿ.


ರೂಫ್ ನಲ್ಲಿ ಸಿಲುಕಿಕೊಂಡ ಮಗು:

ಅಪಾರ್ಟ್ ಮೆಂಟ್ ಒಂದರ 2ನೇ ಮಹಡಿಯ ರೂಫ್ ಶೀಟ್ ನ ಅಂಚಿನಲ್ಲಿ 8 ತಿಂಗಳ ಮಗುವೊಂದು ಸಿಲುಕಿಕೊಂಡಿತ್ತು. ತಾಯಿ ರಮ್ಯಾ ತನ್ನ ಮಗು ಹರಿನ್ ಗೆ ಶುಶ್ರೂಷೆ ಮಾಡುವಾಗ ಆಕಸ್ಮಿಕವಾಗಿ ಕೈ ಜಾರಿ ಮಗು ರೂಫ್ ಮೇಲೆ ಬಿದ್ದಿದೆ. ಈ ವೇಳೆ ತಾಯಿ ಜೋರಾಗಿ ಕಿರುಚಿಕೊಂಡಿದ್ದಾರೆ. ಕೂಡಲೇ ಜನರ ಗುಂಪು ಸೇರಿದೆ. ಮಗುವಿನ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

ಒಬ್ಬರು ಮೊದಲ ಮಹಡಿಯ ಕಿಟಕಿ ಮೂಲಕ ಮಗುವನ್ನು ರಕ್ಷಣೆ ಮಾಡಲು ಮುಂದಾಗುತ್ತಾರೆ. ಆದರೆ, ಇನ್ನೊಬ್ಬ ವ್ಯಕ್ತಿ ಬಂದು ಮಗುವನ್ನು ಕೈಯಿಂದ ಹಿಡಿದು ನಿಧಾನವಾಗಿ ಮೇಲಿನಿಂದ ಕೆಳಕ್ಕೆ ಇಳಿಸಿಕೊಂಡಿದ್ದಾರೆ. ಹೀಗಾಗಿ 8 ತಿಂಗಳ ಮಗು ಮತ್ತೆ ತಾಯಿಯನ್ನು ಸೇರಿದೆ.

ಇದನ್ನೂ ಓದಿ : ಮೇ 3 ರಂದು ಕುದ್ರೆಬೆಟ್ಟು ಕಾರಣಿಕದ ಕಲ್ಲುರ್ಟಿ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವ; ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ!

ರೋಚಕ ಕ್ಷಣದ ವೀಡಿಯೋ ವೈರಲ್ :

ರೂಫ್ ಶೀಟ್ ಮೇಲೆ ಬಿದ್ದ ಮಗು ಜಾರುತ್ತಾ ಕೆಳಗೆ ಬರುತ್ತಿರುತ್ತದೆ. ಇನ್ನೇನೂ ಮಗು ಯಾವ ಕ್ಷಣದಲ್ಲಾದರೂ ಬೀಳಬಹುದು ಎಂಬ ಆತಂಕ ಸೃಷ್ಟಿಸುವ ದೃಶ್ಯ ವೀಡಿಯೋದಲ್ಲಿದೆ. ಮಗುವನ್ನು ರಕ್ಷಿಸಲು ಸ್ಥಳೀಯರು ಮಹಡಿ ಕೆಳಗೆ ಹೊದಿಕೆಗಳನ್ನು ಹಿಡಿದು ನಿಲ್ಲುತ್ತಾರೆ.
ಒಬ್ಬ ವ್ಯಕ್ತಿ ಕಿಟಕಿ ಮೂಲಕ ಮಗುವನ್ನು ರಕ್ಷಿಸಲು ಹೋಗಿ ವಿಫಲನಾದಾಗ, ಮತ್ತೊಬ್ಬ ಪ್ರಯತ್ನಪಡುತ್ತಾನೆ. ಅದರಲ್ಲಿ ಯಶಸ್ವಿಯೂ ಆಗುತ್ತಾನೆ. 2 ನಿಮಿಷ 20 ಸೆಕೆಂಡ್ಸ್ ನ ಈ ವೀಡಿಯೋ ರೋಚಕವಾಗಿದೆ. ಸದ್ಯ ವೀಡಿಯೋ ವೈರಲ್ ಆಗಿದೆ.

Continue Reading

LATEST NEWS

Trending