#EmergencyAlertSystem | ಏಕಕಾಲಕ್ಕೆ ಎಲ್ಲರ ಮೊಬೈಲ್​ಗಳಿಗೆ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಮತ್ತು ಬೀಪ್ ಸೌಂಡ್ | ಬಂದ ಅಲರ್ಟ್​ ಮೆಸೇಜ್‌ನ ಹಿಂದಿನ ಗುಟ್ಟೇನು..?

October 12, 2023
2:10 PM
ಪ್ರಕೃತಿ ವಿಕೋಪಗಳ ಕುರಿತು ಜನರಿಗೆ ತುರ್ತು ಸಂದೇಶ ನೀಡುವ ಉದ್ದೇಶದಿಂದ ಟೆಲಿಕಮ್ಯುನಿಕೇಶನ್ ಇಲಾಖೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೇರಿಕೊಂಡು ಈ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡಲು ಮುಂದಾಗಿದೆ.

ಅದೊಂದು ಕಾಲವಿತ್ತು. ಒಂದು ಊರಿನ ಇನ್ನೊಂದು ಊರಿಗೆ ವಿಷಯ ತಿಳಿಯಬೇಕಾದ್ರೆ ತಿಂಗಳು ಗಟ್ಟಲೆ ಬೇಕಿತ್ತು. ಆದರೆ ಕಾಲ ಮುಂದೆ ಹೋದಂತೆ ತಂತ್ರಜ್ಞಾನ ಬೆಳೆದಂತೆ ಎಲ್ಲವೂ ಸರಳವಾಗುತ್ತಾ ಬಂತು. ಏನೋ ಒಂದು ಎಮರ್ಜೆನ್ಸಿ ಬಂತಪ್ಪಾ.. ಪ್ರತಿಯೊಬ್ಬರಿಗೂ ಏಕಕಾಲಕ್ಕೆ ಹೇಳಬೇಕು, ಏನು ಮಾಡೋದು..? ಈ ಕಾಲದಲ್ಲಿ ಅದಕ್ಕೆಲ್ಲ ಯೋಚಿಸುವ ಅಗತ್ಯವಿಲ್ಲ. ತಂತ್ರಜ್ಞಾನ ಬಹಳ ಮುಂದುವರೆದಿದೆ. ಅದರ ಭಾಗವಾಗಿಯೇ ಇಂದು ಎಲ್ಲರ ಮೊಬೈಲ್‌ಗಳಿಗೆ ಬಂದ ಅಲರ್ಟ್‌ ಮೆಸೆಜ್ #Alertmessege.‌

Advertisement
Advertisement

ಸೋಶಿಯಲ್ ಮೀಡಿಯಾಗಳಲ್ಲಿ ಕೆಲದಿನಗಳಿಂದ ಸುದ್ದಿಯೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಅಕ್ಟೋಬರ್ 12ರಂದು ಪ್ರತಿಯೊಬ್ಬರ ಫೋನ್​ನಲ್ಲೂ ಬೀಪ್​ ಸೌಂಡ್​ ಮತ್ತು ಎಮರ್ಜೆನ್ಸಿ ಮೆಸೇಜ್ ಬರಲಿದೆ ಎಂದು ತಿಳಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ವ್ಯಾಪಕವಾಗಿ ಹೆಚ್ಚಾಗಿದೆ. ಇದರ ಬಳಕೆ ಹೆಚ್ಚಾದಂತೆ ಅಗತ್ಯತೆಯೂ ಸಹ ಹೆಚ್ಚಾಗಿದೆ. ಆದ್ರೆ ಈಗ ಬದಲಾಗುತ್ತಿರುವ ವಾತಾರಣದಿಂದ ಕೆಲವು ಪ್ರದೇಶಗಳಲ್ಲಿ ಪ್ರಕೃತಿ ವಿಕೋಪ, ಯುದ್ಧದಂತಹ ಊಹೆಯೂ ಮಾಡಲಾಗದ ಘಟನೆಗಳು ನಡೆಯುತ್ತಿವೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಇದೀಗ ಹೊಸ ಟೆಕ್ನಾಲಜಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪರಿಚಯಿಸಲು ಸಿದ್ಧವಾಗಿದೆ. ಎಮರ್ಜೆನ್ಸಿ ಸಂದರ್ಭದಲ್ಲಿ ಜನರ ಮೊಬೈಲ್‌ಗಳಿಗೆ ತುರ್ತು ಸಂದೇಶ ಬರುವಂತೆ ಮಾಡುವ ಹೊಸ ಟೆಕ್ನಾಲಜಿಯ ಪರೀಕ್ಷೆ ನಡೆಯುತ್ತಿದೆ. ಇದರ ಭಾಗವಾಗಿ ಇಂದು ಹಲವರ ಮೊಬೈಲ್‌ಗೆ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಮತ್ತು ಬೀಪ್ ಸೌಂಡ್ ಕೇಳಲಿದೆ ಎಂದು ಹೇಳಲಾಗಿದೆ.

Advertisement

ಇತ್ತೀಚೆಗೆ ಹೆಚ್ಚಾಗುತ್ತಿರುವ ಪ್ರಕೃತಿ ವಿಕೋಪಗಳ ಕುರಿತು ಜನರಿಗೆ ತುರ್ತು ಸಂದೇಶ ನೀಡುವ ಉದ್ದೇಶದಿಂದ ಟೆಲಿಕಮ್ಯುನಿಕೇಶನ್ ಇಲಾಖೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೇರಿಕೊಂಡು ಈ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡಲು ಮುಂದಾಗಿದೆ. ಇದರಿಂದಾಗಿ ರಾಜ್ಯದಲ್ಲಿಇಂದು ಅಂದರೆ ಅಕ್ಟೋಬರ್ 12ರಂದು ಮೊಬೈಲ್​ಗಳಲ್ಲಿ ಬೀಪ್​ ಸೌಂಡ್​ ಕೇಳಲಿದೆ. ಇನ್ನು ಈ ವ್ಯವಸ್ಥೆ ರಾಜ್ಯದಲ್ಲಿ ದೂರಸಂಪರ್ಕ ಇಲಾಖೆ (ಸಿ-ಡಾಟ್​) ಸೆಲ್ ಬ್ರಾಡ್​ ಕಾಸ್ಟಿಂಗ್ ಕಂಪನಿ ಮೂಲಕ ಈ ಎಚ್ಚರಿಕೆಯ ಸಂದೇಶದ ಪರೀಕ್ಷೆ ನಡೆಯಲಿದೆ. ಕೆಲ ಬಳಕೆದಾರರಿಗೆ ಈಗಾಗಲೇ ಈ ಮೆಸೇಜ್ ರವಾನೆಯಾಗಿದ್ದು, ಇನ್ನೂ ಕೆಲವರಿಗೆ ಇಂದು ಬರಲಿದೆ ಎಂಬ ಸುದ್ದಿಗಳು ವೈರಲ್ ಆಗಿವೆ.

ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶ. ಈ ಸಂದೇಶವನ್ನು ನಿರ್ಲಕ್ಷಿಸಿ ಏಕೆಂದರೆ ಇದಕ್ಕಾಗಿ ನೀವು ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇರುವುದಿಲ್ಲ. ಈ ಸಂದೇಶವನ್ನು ಟೆಸ್ಟ್ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಗೆ ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಇದನ್ನು ರವಾನಿಸಿದೆ. ಇನ್ನು ಈ ಮೆಸೇಜ್​​ ಭೂಕಂಪ, ಸುನಾಮಿ, ಪ್ರವಾಹ, ಯುದ್ಧಗಳ ಸಂದರ್ಭದಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಮತ್ತು ಜನರಿಗೆ ಎಚ್ಚರಿಕೆ ನೀಡಲು ಸಹಕಾರಿಯಾಗಲಿದೆ. ಅದೇ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ಸಹ ತೆಗೆದುಕೊಳ್ಳಲು ಇದು ತಿಳಿಸುತ್ತದೆ.

Advertisement

#EmergencyAlertSystem | ನಿಮ್ಮ ಮೊಬೈಲ್‌ಗೂ ಈ ಎಚ್ಚರಿಕೆ ಸಂದೇಶ ಬಂದಿದೆಯಾ? | ಏನಿದು ತುರ್ತು ಎಚ್ಚರಿಕೆ..? |

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಕಾಲಿಕ ಮಳೆಯು ಕೃಷಿ ಹಾಗೂ ಗ್ರಾಮೀಣ ಬೇಡಿಕೆ ಈಡೇರಿಸುತ್ತದೆ | ಸಕಾಲಿಕವಾದ ಕೃಷಿ ಮೂಲಕ ಆದಾಯವೂ ಹೆಚ್ಚಿಸಬಹುದು | ಕ್ರೆಸಿಲ್‌ ವರದಿ |
June 12, 2024
9:13 PM
by: ದ ರೂರಲ್ ಮಿರರ್.ಕಾಂ
ಪ್ರಸಾದದ ರೂಪದಲ್ಲಿ ಭಕ್ತರಿಗೆ ಗಿಡಗಳ ಹಂಚಿಕೆ | ಅಂಕೋಲಾದ ಪುರಾತನ ದೇವಸ್ಥಾನ ವಿಶೇಷ ಪರಿಸರ ಕಾಳಜಿ |
June 12, 2024
1:36 PM
by: The Rural Mirror ಸುದ್ದಿಜಾಲ
ಮುಂಗಾರು ಆರಂಭವಾಗುತ್ತಿದ್ದಂತೆ ಏರಿದ ತರಕಾರಿ ಬೆಲೆ | ಗಗನಕ್ಕೇರಿದ ಬೀನ್ಸ್‌ ದರ | ಬಡವರ ಪಾಡೇನು..? |
June 12, 2024
1:23 PM
by: The Rural Mirror ಸುದ್ದಿಜಾಲ
ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ಜಾಗಗಳ ರಕ್ಷಣೆಗಾಗಿ ಕ್ರಮ | ಪಹಣಿದಾರರ ಜಮೀನುಗಳ ರಕ್ಷಣೆಗಾಗಿ ಲ್ಯಾಂಡ್ ಬೀಟ್ ಮತ್ತು ಆಧಾರ್ ಲಿಂಕ್ ಕಾರ್ಯ|
June 12, 2024
1:04 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror