#Aditya-L1 | ಗಣೇಶ ಹಬ್ಬದಂದೇ ಸಿಹಿಸುದ್ದಿ ಕೊಟ್ಟ ಇಸ್ರೋ | ಸೂರ್ಯನ ಕುರಿತು ಡೇಟಾ ಸಂಗ್ರಹಿಸಲು ಆರಂಭಿಸಿದ ಆದಿತ್ಯ L1 |

September 18, 2023
2:50 PM
ಭೂಮಿಯಿಂದ ಹೊರಟ ಆದಿತ್ಯ ಎಲ್‌-1 ನೌಕೆ ಈಗಾಗಲೇ 4ನೇ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದೆ. ಇದೀಗ ನಿಗದಿತ ಕಕ್ಷೆ ಸೇರುವುದಕ್ಕೂ ಮುನ್ನವೇ ವೈಜ್ಞಾನಿಕ ದತ್ತಾಂಶ ಕಳುಹಿಸಲು ಪ್ರಾರಂಭಿಸಿದೆ.

ಚಂದ್ರಯಾನ ನಂತರ ಇಸ್ರೋ ಎರಡನೇ ಸಾಹಸಕ್ಕೆ ಕೈ ಹಾಕಿದ್ದ ಆದಿತ್ಯ ಎಲ್‌ -1 ಯೋಜನೆ ಯಶಸ್ವಿಯಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ಈ ಕುರಿತು ಸೂರ್ಯನ ಬ್ಯಾಹ್ಯ ವಾತಾವರಣ ಅಧ್ಯಯನಕ್ಕೆ ಭಾರತೀಯ ಬ್ಯಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ISRO) ಗಣೇಶ ಚತುರ್ಥಿ(GaneshFestival) ಹಬ್ಬದಂದೇ ಶುಭಸುದ್ದಿ ಕೊಟ್ಟಿದೆ. ಭೂಮಿಯಿಂದ ಹೊರಟ ಆದಿತ್ಯ ಎಲ್‌-1 ನೌಕೆ ಈಗಾಗಲೇ 4ನೇ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದೆ.

Advertisement
Advertisement
ಇದೀಗ ನಿಗದಿತ ಕಕ್ಷೆ (L1 ಪಾಯಿಂಟ್‌) ಸೇರುವುದಕ್ಕೂ ಮುನ್ನವೇ ವೈಜ್ಞಾನಿಕ ದತ್ತಾಂಶ (Scientific Data) ಕಳುಹಿಸಲು ಪ್ರಾರಂಭಿಸಿದೆ. ಈ ಕುರಿತು ಇಸ್ರೋ ತನ್ನ ಎಕ್ಸ್‌ (ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಸೂರ್ಯನ ಬಾಹ್ಯ ವಾತಾವರಣ ಅಧ್ಯಯನಕ್ಕೆ ಕಳುಹಿಸಿರುವ ಆದಿತ್ಯ-ಎಲ್‌1 ವೈಜ್ಞಾನಿಕ ದತ್ತಾಂಶಗಳನ್ನ ಸಂಗ್ರಹಿಸಲು ಪ್ರಾರಂಭಿಸಿದೆ. STEPS ಉಪಕರಣದ ಸಂವೇದಕಗಳು (ಸೆನ್ಸಾರ್‌ಗಳು) ಭೂಮಿಯಿಂದ 50,000 ಕಿಮೀಗಿಂತ ಹೆಚ್ಚಿನ ದೂರದಲ್ಲಿ ಸೂಪರ್-ಥರ್ಮಲ್ ಮತ್ತು ಶಕ್ತಿಯುತ ಅಯಾನುಗಳು ಮತ್ತು ಎಲೆಕ್ಟ್ರಾನ್‌ಗಳನ್ನು ಅಳೆಯಲು ಪ್ರಾರಂಭಿಸಿದೆ. ಈ ಡೇಟಾವು ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ನಡವಳಿಕೆಯನ್ನ ವಿಶ್ಲೇಷಿಸಲು ಸಹಾಯ ಮಾಡುತ್ತದೆ. ಜೊತೆಗೆ ಅಂಕಿ ಅಂಶವು ಒಂದು ಘಟಕದಿಂದ ಸಂಗ್ರಹಿಸಲಾದ ಶಕ್ತಿಯುತ ಕಣ ಪರಿಸರದಲ್ಲಿ ವ್ಯತ್ಯಾಸಗಳನ್ನೂ ತೋರಿಸುತ್ತದೆ ಎಂದು ತಿಳಿಸಿದೆ.

ಚಂದ್ರಯಾನ-3 ಯಶಸ್ಸಿನ ಬಳಿಕ ಸೂರ್ಯನ ಅಧ್ಯಯನಕ್ಕೆ ಇಸ್ರೋ ಆದಿತ್ಯ-ಎಲ್‌1 ಬಾಹ್ಯಾಕಾಶ ನೌಕೆಯನ್ನು ಸೆ.2 ರಂದು ಉಡಾವಣೆ ಮಾಡಿತ್ತು. ನೌಕೆಯು ಸೆ.10 ರಂದು 3ನೇ ಕಕ್ಷೆ ಹಾಗೂ ಸೆಪ್ಟೆಂಬರ್‌ 14ರಂದು 4ನೇ ಕಕ್ಷೆಗೆ ಸೇರುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿತ್ತು.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮುಂಗಾರು ಮಳೆ | ಮುಂಬೈ ಕರಾವಳಿಯಲ್ಲಿ ಉತ್ತಮ ಮಳೆ | 50 ಮಿಮೀ ಗಿಂತ ಅಧಿಕ ಮಳೆ |
June 10, 2024
11:52 PM
by: ದ ರೂರಲ್ ಮಿರರ್.ಕಾಂ
ಬೃಹತ್‌ ಪ್ರಮಾಣದಲ್ಲಿ ಅಡಿಕೆ ಕಳ್ಳಸಾಗಾಣಿಕೆ ಪ್ರಕರಣ | ವಶಕ್ಕೆ ಪಡೆದ ತನಿಖಾ ತಂಡ |
June 10, 2024
11:32 PM
by: ದ ರೂರಲ್ ಮಿರರ್.ಕಾಂ
ಏರುಗತಿಯಲ್ಲಿ ಸಾಗುತ್ತಿದೆ ಕರಿಮೆಣಸಿನ ಬೆಲೆ | ವಿದೇಶಗಳಲ್ಲೂ ಇಳಿಕೆಯಾದ ಕಾಳುಮೆಣಸಿನ ಉತ್ಪಾದನೆ |
June 10, 2024
1:28 PM
by: The Rural Mirror ಸುದ್ದಿಜಾಲ
ಕೃಷಿಯಲ್ಲಿ ಕೃತಕ ಬುದ್ಧಿಮತ್ತೆಯ ಅನ್ವಯ..! | ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ನಿಂದ(AI) ರೈತರಿಗೇನು ಪ್ರಯೋಜನ..? |
June 10, 2024
1:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror