#Damayana | ಸುಳ್ಯದ ಹುಡುಗರ “ದಾಮಾಯಣ” | ಸದ್ದು ಮಾಡಲಿರುವ ದಾಮಾಯಣ..! |

July 2, 2023
8:42 PM

ದಾಮಾಯಣ ಇದು ದಾಮಾಯಣ….!! ಇದೆಂತ ಮಾರ್ರೆ ದಾಮಾಯಣ ಅಂತ ಕೇಳ್ತೀರಾ ? ಇದು ಸುಳ್ಯದ ಹುಡುಗರು ನಟಿಸಿರುವ, ತಂಡ ಮಾಡಿರುವ ಸಿನಿಮಾ. ಬಹುನಿರೀಕ್ಷೆಯ ಸಿನಿಮಾ. ದಕ್ಷಿಣ ಕನ್ನಡ ಸೊಗಡಿನ ಭಾಷೆಯಲ್ಲಿ ಬಂದಿರುವ ಸಿನಿಮಾ. ಪಕ್ಕಾ ಲೋಕಲ್‌ ಹುಡುಗನ ದೊಡ್ಡ ಕನಸಿನ ಚಿತ್ರ ಇದು.

Advertisement
Advertisement

Advertisement

ಹೌದು, ಸುಳ್ಯದ ಹುಡುಗರ ಒಂದು ಸಿನಿಮಾ ಸೆಟ್ಟೇರಿದೆ. ಕನಸು ಮತ್ತು ವಾಸ್ತವದ ಮೇಲೆ ಇರುವ ಹೊಸ ಸಿನಿಮಾ ಇದೆ ಜುಲೈ 14ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಮಂಗಳೂರಿನಲ್ಲಿ ಆಡಿಯೋ ಲಾಂಚ್ ಆಗಿದೆ.

ಸುಳ್ಯದ ಉತ್ಸಾಹಿ ಯುವಕ, ಯುವಪ್ರತಿಭೆ ಶ್ರೀಮುಖ ಅವರು ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ದಕ್ಷಿಣ ಕನ್ನಡ ಸೊಗಡಿನ ಕನ್ನಡ ಭಾಷೆಯಲ್ಲಿ ಬಂದಿರುವ ಈ ಚಿತ್ರ ಪಕ್ಕ ಲೋಕಲ್ ಹುಡುಗನ ಕಥೆ ಇರುವ ಸಿನಿಮಾವಾಗಿದೆ. ಪಕ್ಕಾ ತಮಾಷೆಯ ಈಗಿನ ಕಾಲಘಟ್ಟಕ್ಕೆ ಸರಿಹೊಂದುವಂತಹ ಚಲನಚಿತ್ರವಾಗಿದೆ.

Advertisement

ಸುಳ್ಯ, ಪುತ್ತೂರು, ಮಂಗಳೂರು ಸುತ್ತಮುತ್ತ 25 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದಾರೆ. ಈ ಚಿತ್ರದಲ್ಲಿ 5 ಹಾಡುಗಳಿದ್ದು  ಮಂಗಳೂರಿನಲ್ಲಿ ಹಾಡುಗಳು ಬಿಡುಗಡೆಯಾಗಿದೆ.

Advertisement

ಸೆವೆಂಟಿ ಸೆವೆನ್ ಸ್ಟುಡಿಯೋಸ್ ಮೂಲಕ ರಾಘವೇಂದ್ರ ಕುಡ್ವ ನಿರ್ಮಿಸಿರುವ ಈ ಸಿನಿಮಾಕ್ಕೆ ಸಿದ್ದು ಜಿ.ಎಸ್ ಅವರು ಛಾಯಾಗ್ರಹಣ ಮಾಡಿ, ಕೆ. ಎಂ ಕಾರ್ತಿಕ್ ಅವರ ಸಂಕಲನ, ಕೀರ್ತನ್ ಬಾಳಿಲ ಸಂಗೀತ ನಿರ್ದೇಶನ, ಅಕ್ಷಯ್ ರೇವಂಕರ್ ಅವರು ಸಿನಿಮಾದ ಸಹ ನಿರ್ದೇಶನ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕೆಲ್ಸ ಮಾಡಿದ್ದಾರೆ.

ನಾಯಕಿಯಾಗಿ ನಟಿ ಅನಘ ಭಟ್ ಅವರು ನಟಿಸಿದ್ದಾರೆ. ಜುಲೈ 14ಕ್ಕೆ ಬಿಡುಗಡೆ ಆಗಿ ಯಶಸ್ಸು ಪಡೆಯಲಿದೆ ಎನ್ನುವ ವಿಶ್ವಾಸ ಈ ತಂಡದ್ದು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನಾವು ಭಾರತೀಯರು.. : ಚುನಾವಣಾ ಫಲಿತಾಂಶದ ನಂತರ ನಮ್ಮ ತಿಳಿವಳಿಕೆ – ನಡವಳಿಕೆ ಮತ್ತು ಪ್ರತಿಕ್ರಿಯೆ ಹೇಗಿರಬೇಕು..
June 4, 2024
12:29 PM
by: The Rural Mirror ಸುದ್ದಿಜಾಲ
ಪವರ್‌ ಕಳೆದುಕೊಳ್ಳುತ್ತಿರುವ ಎಲ್‌ ನಿನೋ : ಜುಲೈ-ಸೆಪ್ಟೆಂಬರ್ ವೇಳೆಗೆ ‘ಲಾ ನಿನಾ’ ಪ್ರಬಲ : ಉತ್ತಮ ಮುಂಗಾರು ನಿರೀಕ್ಷೆ –
June 4, 2024
11:24 AM
by: The Rural Mirror ಸುದ್ದಿಜಾಲ
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು : ಯುವ ಕೃಷಿ ವಿಜ್ಞಾನಿಗಳನ್ನು ಹುಟ್ಟು ಹಾಕಿದ ಕೃಷಿ ವಿಶ್ವವಿದ್ಯಾಲಯ :
June 4, 2024
10:40 AM
by: The Rural Mirror ಸುದ್ದಿಜಾಲ
ಮಳೆರಾಯ ಆಗಮನದೊಂದಿಗೆ ಸೊಳ್ಳೆ ಕಾಟನೂ ಶುರು : ಕೃಷಿ ಕೆಲಸ ಮಾಡೋರಿಗೆ ಒಂದಿಷ್ಟು ಸೊಳ್ಳೆ ಕಾಟಕ್ಕೆ ಪರಿಹಾರ
June 4, 2024
10:25 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror