ಜು. 19 ರಿಂದ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ

July 15, 2022
10:19 AM

ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ ಅಥವಾ ನೌಕರರ ವಿರುದ್ಧ ಸಾರ್ವಜನಿಕರಿಂದ ದೂರು ಪಡೆಯಲು ಕರ್ನಾಟಕ ಲೋಕಾಯುಕ್ತದ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಜು.19‌ ರಿಂದ ಜಿಲ್ಲೆಯ ವಿವಿಧ ತಾಲೂಕುಗಳ ಪ್ರವಾಸ ಕೈಗೊಂಡಿದ್ದಾರೆ.

Advertisement
Advertisement
ಜು.19ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಡಬ ತಾಲೂಕಿನ ಕಡಬ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ, ಜು.20ರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೂಡಬಿದ್ರೆ ತಾಲೂಕು ಕಚೇರಿಯಲ್ಲಿ ಹಾಗೂ ಜು.21ರ ಗುರುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಉಳ್ಳಾಲ ತಾಲೂಕಿನ ನಗರಸಭಾ ಸಭಾಂಗಣದಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲಿದ್ದಾರೆ. ಉಳಿದಂತೆ ಇತರೆ ದಿನಗಳಲ್ಲಿಯೂ ಕಚೇರಿ ವೇಳೆಯಲ್ಲಿ ಸಾರ್ವಜನಿಕರು ಅಹವಾಲು, ದೂರುಗಳನ್ನು ನೀಡಬಹುದು.

Advertisement
ಅರ್ಜಿದಾರರು ನಗರದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಚೇರಿಗೆ ಅಥವಾ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೀಧಿಯಲ್ಲಿರುವ ಬಹು ಮಹಡಿ ಕಟ್ಟಡದ ಲೋಕಾಯುಕ್ತ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಪೊಲೀಸ್ ಅಧೀಕ್ಷಕರ ಕಚೇರಿ ದೂ.ಸಂಖ್ಯೆ:0824-2950997, 9243456629, ಪೊಲೀಸ್ ಉಪಾಧೀಕ್ಷಕರ-1 ಕಚೇರಿ ದೂ.ಸಂಖ್ಯೆ:0824-2453420, 9448635348, ಪೊಲೀಸ್ ಉಪಾಧೀಕ್ಷಕರ-2 ಕಚೇರಿ ದೂ.ಸಂಖ್ಯೆ:0824-2453420, 7019967061, ಪೊಲೀಸ್ ನಿರೀಕ್ಷಕರ ಕಚೇರಿ ದೂ.ಸಂಖ್ಯೆ:0824-2427237, 9448461816 ಮೂಲಕ ಸಂಪರ್ಕಿಸುವಂತೆ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿ ವ್ಯವಸ್ಥೆಯಲ್ಲಿ ರೊಬೊಟಿಕ್ಸ್ ಮತ್ತು ಆಟೊಮೇಷನ್ | ಮುಂದೆ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ನಿರೀಕ್ಷೆ |
June 8, 2024
1:46 PM
by: The Rural Mirror ಸುದ್ದಿಜಾಲ
ಮನಸ್ಸು ಮಾಡಿದರೆ ವರ್ಷವಿಡೀ ಹಲಸಿನ ಹಣ್ಣು ತಿನ್ನಬಹುದು…! | ಕಾಫಿನಾಡಿನಲ್ಲಿದೆ ವರ್ಷವಿಡೀ ಹಣ್ಣು ಕೊಡುವ ಹಲಸಿನ ಮರಗಳು |
June 8, 2024
1:20 PM
by: The Rural Mirror ಸುದ್ದಿಜಾಲ
ನೇಪಾಳಿ ಸೇನೆಯಿಂದ ಮೌಂಟೇನ್ ಕ್ಲೀನ್-ಅಪ್ ಅಭಿಯಾನ | ಹಿಮಾಲಯದಿಂದ 11000 ಕೆಜಿ ತ್ಯಾಜ್ಯ, ನಾಲ್ಕು ಮೃತದೇಹ, ಒಂದು ಅಸ್ಥಿಪಂಜರವನ್ನು ಹೊರತೆಗೆದ ಸೇನೆ | ಪ್ರವಾಸಿಗರೇ ಸ್ವಚ್ಛತೆ ಕಲಿಯಿರಿ-ಪರಿಸರ ಉಳಿಸಿ |
June 8, 2024
12:39 PM
by: The Rural Mirror ಸುದ್ದಿಜಾಲ
ಜೂನ್‌ ಮೊದಲ ವಾರದಲ್ಲೇ ರಾಜ್ಯಾದ್ಯಂತ ಭರ್ಜರಿ ಮಳೆ | ಭಾರೀ ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು | ಜನರಲ್ಲಿ ಮಂದಹಾಸ
June 8, 2024
12:17 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror