ಕಾಣಿಯೂರು ಪ್ರಗತಿಯಲ್ಲಿ ತುಳುವೆರೆ ಆಚರಣೆಲು ಒಂಜಿ ನೆಂಪು

August 17, 2019
9:00 AM

ಕಾಣಿಯೂರು : ನಮ್ಮ ತುಳುನಾಡಿನಲ್ಲಿ ಆಚರಿಸುವ ಪ್ರತಿಯೊಂದು ಆಚರಣೆಗೂ ತನ್ನದೇ ಆದ ಮಹತ್ವವಿದೆ.ಈ ಮಹತ್ವನ್ನು ಎಲ್ಲರೂ ತಿಳಿದುಕೊಳ್ಳುವುದು ಅತ್ಯವಶ್ಯ.ಆಟಿ ತಿಂಗಳು ಎಂದರೆ ಅದು ಕಷ್ಟದ ತಿಂಗಳು.ಹಾಲೆ ಮರದ ಕಷಾಯ ಕುಡಿಯುವ ಹಿನ್ನೆಲೆಯಲ್ಲೂ ವೈಜ್ಞಾನಿಕ ಸತ್ಯ ಅಡಗಿದೆ.ತುಳುನಾಡೆಂದರೆ ಅದು ವೈಶಿಷ್ಟ್ಯತೆಗೆ ಇನ್ನೊಂದು ಹೆಸರು ಎಂದು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ,ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ  ಹೇಳಿದರು.

Advertisement
Advertisement

ಅವರು  ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ,ಕಾಣಿಯೂರು ಪಿಂಗಾರ ತುಳುಕೂಟ ಮತ್ತು ಸವಣೂರು ಯುವಕ ಮಂಡಲದ ವತಿಯಿಂದ ನಡೆದ ತುಳುವೆರೆ ಆಚರಣೆಲು ಒಂಜಿ ನೆಂಪು -ಕಜ್ಜ ಕೊಟ್ಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಪ್ರಗತಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಜಗನ್ನಾಥ ರೈ ನುಳಿಯಾಲು ಮಾತನಾಡಿ,ತುಳುನಾಡು ಹಾಗೂ ವೈಚಾರಿಕತೆ ಕುರಿತು ವಿವರಿಸಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಯಶವಂತ ರೈ ಮಾತನಾಡಿ,ತುಳು ಸಂಸ್ಕೃತಿಯ ಕುರಿತು ಮೊಗೆದಷ್ಟು ಹೆಚ್ಚೆಚ್ಚು ವಿಚಾರಗಳು ಕಾಣ ಸಿಗುತ್ತದೆ.ತುಳು ಆಚರಣೆಗಳ ಕುರಿತು ಹಿರಿಯರು ಮಕ್ಕಳಿಗೆ ತಿಳಿ ಹೇಳುವ ಕಾರ್ಯ ಮಾಡಬೇಕು.ನಮ್ಮ ಪರಂಪರೆಗೆ ಅಗಾಧ ಶಕ್ತಿ ಇದೆ.ಎಲ್ಲಕ್ಕೂ ವೈಜ್ಞಾನಿಕ ಹಿನ್ನೆಲೆ ಇದೆ ಎಂದರು.

ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೊಡಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ದನ್,ತಾ.ಪಂ.ಉಪಾಧ್ಯಕ್ಷೆ ಲಲಿತಾ ಈಶ್ವರ,ನಾಟಿ ವೈದ್ಯ ಜಿನ್ನಪ್ಪ ಗೌಡ ಕಳುವಾಜೆ,ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಹಿರಿಯ ಟ್ರಸ್ಟಿ ಲಕ್ಷ್ಮೀ ಕರಿಯಪ್ಪ ರೈ ಮಾದೋಡಿ,ಸಂಸ್ಥೆಯ ಆಡಳಿತ ಸಮಿತಿ ಸದಸ್ಯರಾದ ನಾಗೇಶ್ ರೈ ಮಾಳ,ಚಂದ್ರಹಾಸ ರೈ ಅಗಲ್ಪಾಡಿ,ಎಂಜೀರು ಪದ್ಮನಾಭ ರೈ,ವೃಂದಾ ಜೆ.ರೈ,ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸಂಪತ್ ಕುಮಾರ್ ರೈ ಪಾತಾಜೆ,ಉಪಾಧ್ಯಕ್ಷೆ ಸೌಮ್ಯ ಲಕ್ಷ್ಮೀ ಕಾನಾವು, ಪ್ರಗತಿ ಆಂಗ್ಲಮಾಧ್ಯಮ ಪ್ರೌಢಶಾಲಾ ಮುಖ್ಯಸ್ಥೆ ಗಿರಿಶಂಕರ ಸುಲಾಯ,ಕನ್ನಡ ಮಾಧ್ಯಮದ ಮುಖ್ಯಸ್ಥೆ ಸರಸ್ವತಿ ಎಂ,ಪಿಂಗಾರ ತುಳುಕೂಟದ ಅಧ್ಯಕ್ಷ ಜನಾರ್ದನ ಆಚಾರ್ಯ ಅಬೀರ,ಹಿರಿಯರಾದ ಅಣ್ಣು ಆಚಾರ್ಯ ಅಬೀರ ಉಪಸ್ಥಿತರಿದ್ದರು.

Advertisement

ಗೌರವಾರ್ಪಣೆ,ಅಭಿನಂದನೆ
ಕಾರ್ಯಕ್ರಮದಲ್ಲಿ 80 ನೇ ಹುಟ್ಟುಹಬ್ಬ ಆಚರಿಸಿದ ಪ್ರಗತಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಜಗನ್ನಾಥ ರೈ ನುಳಿಯಾಲು, ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳಿಯ ನಿರ್ದೆಶಕರಾಗಿ ಆಯ್ಕೆಯಾದ ಸಂಸ್ಥೆಯ ಆಡಳಿತ ಸಮಿತಿ ಸದಸ್ಯ ಉದಯ ರೈ ಮಾದೋಡಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿಯಾಗಿ ನೇಮಕಗೊಂಡ ಪ್ರಗತಿ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಸಂಧ್ಯಾ ಕುಮಾರಿ ಬಿ.ಎನ್ ಅವರಿಗೆ ಗೌರವಾರ್ಪಣೆ ಮಾಡಿ ಅಭಿನಂದಿಸಲಾಯಿತು.

ಸವಣೂರು ಯುವಕ ಮಂಡಲದ ಅಧ್ಯಕ್ಷ ತಾರಾನಾಥ ಪಿ.ಸವಣೂರು ಸ್ವಾಗತಿಸಿ,ಪ್ರಗತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ವಂದಿಸಿದರು.ಶಿಕ್ಷಕರಾದ ಸುಬ್ರಹ್ಮಣ್ಯ ಸಿ.ಕೆ ಐವರ್ನಾಡು ,ವಿನಯ ವಿ.ಶೆಟ್ಟಿ ವಂದಿಸಿದರು.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅದಮ್ಯ ಚೇತನದ ಅದಮ್ಯ ಕಾಳಜಿ | ಪರಿಸರ ಕಾಳಜಿ ಅಂದ್ರೆ ಇದು.. ಸಾಧ್ಯವಾದರೆ ನಾವು ಅನುಸರಿಸೋಣ..
June 5, 2024
2:31 PM
by: The Rural Mirror ಸುದ್ದಿಜಾಲ
ನೀಟ್​ ಪರೀಕ್ಷೆ ಅಭ್ಯರ್ಥಿಗಳ ಅಮೋಘ ಸಾಧನೆ : ಕರ್ನಾಟಕದ ಮೂವರು ಪ್ರಥಮ ರ್ಯಾಂಕ್‌ ​: ಮಂಗಳೂರು ಎಕ್ಸ್‌ಪರ್ಟ್‌ ಕಾಲೇಜಿನ ಅರ್ಜುನ್‌ ಕಿಶೋರ್‌ ಮೊದಲ ಸ್ಥಾನದಲ್ಲಿ
June 5, 2024
2:03 PM
by: The Rural Mirror ಸುದ್ದಿಜಾಲ
ಮುಂಗಾರು ಎಂದರೇನು….? | ರೈತರಿಗೆ ಮಾನ್ಸೂನ್​​ ಯಾಕೆ ಮುಖ್ಯ? | ಕೇರಳಕ್ಕೇ ಯಾಕೆ ಮೊದಲು ಮುಂಗಾರು ಪ್ರವೇಶಿಸುತ್ತೆ..?
June 5, 2024
1:26 PM
by: The Rural Mirror ಸುದ್ದಿಜಾಲ
ಬಿಜೆಪಿ ಸ್ಪಷ್ಟ ಬಹುಮತ ಗಳಿಸಿಲ್ಲ……ಕಾರಣವೇನು..?
June 5, 2024
1:05 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror