ಉರ್ವ ಠಾಣೆಯ ಎಎಸ್ ಐ ಐತಪ್ಪ ಮೇಲೆ ಹಲ್ಲೆ

Spread the love

ಉರ್ವ  ಠಾಣೆಯ ಎಎಸ್ ಐ ಐತಪ್ಪ ಮೇಲೆ ಹಲ್ಲೆ

ಮಂಗಳೂರು: ಉರ್ವ ಪೋಲಿಸ್ ಠಾಣೆಯ ಎಎಸ್ ಐ ಐತಪ್ಪ ಎಂಬವರ ಮೇಲೆ ಬುಧವಾರ ಬೆಳಗ್ಗಿನ ಜಾವ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

ಗಂಭೀರವಾಗಿ ಗಾಯಗೊಂಡ ಐತಪ್ಪರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬುಧವಾರ ಬೆಳಗ್ಗಿನ ಜಾವ ನಗರದ ಲೇಡಿಹಿಲ್ ಸರ್ಕಲ್ ಬಳಿ ಕರ್ತವ್ಯನಿರತರಾಗಿದ್ದ ವೇಳೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ನಗರ ಪೋಲಿಸ್ ಕಮೀಷನರ್ ಚಂದ್ರ ಶೇಖರ್, ಡಿಸಿಪಿ ಶಾಂತರಾಜ್, ಡಾ ಸಂಜೀವ್ ಪಾಟೀಲ್ ಹಾಗೂ ಇತರರು ಭೇಟಿ ನೀಡಿದ್ದು ಪ್ರಕರಣದ ಕುರಿತು ಎಸಿಪಿ ಉದಯ್ ನಾಯಕ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ


Spread the love