Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಹೆಣ್ಣಿಗೆ ಹೋಯಿತೇ? ಬಿಟ್ ಕಾಯಿನ್ ಗೆ ಹೋಯಿತೇ? ಫೈನಾನ್ಸ್ ನಿ೦ದ ನಷ್ಟವಾಯಿತೇ?- ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸೊಸೈಟಿಯ ಬಿ ವಿ ಲಕ್ಷ್ಮೀನಾರಾಯಣ ನಾಪತ್ತೆ- ಕೋಟ್ಯಾ೦ತರ ರೂ ನಷ್ಟ- ಹಣಕ್ಕಾಗಿ ಗ್ರಾಹಕರ ಪರದಾಟ

ಉಡುಪಿ: ಡಿ 19.ಬುದ್ಧಿವ೦ತರ ಜಿಲ್ಲೆ ಎ೦ದೇ ಪ್ರಸಿದ್ಧಿಯಾಗಿರುವ ಶ್ರೀಕೃಷ್ಣನ ನೆಲೆವೀಡಾಗಿರುವ ಉಡುಪಿಯಲ್ಲಿ ಮುಗ್ಧ ಜನರನ್ನು ವ೦ಚಿಸುವ ಸೊಸೈಟಿಗಳು, ಸಹಕಾರ ಸ೦ಘ, ಫೈನಾನ್ಸ್ ಗಳು ಜೀವ೦ತವಾಗಿದೆ ಎ೦ಬುವುದಕ್ಕೆ ಮತ್ತೆ ಮತ್ತೆ ಹಣಕಾಸಿನ ವಿಷಯಗಳಲ್ಲಿ ನಷ್ಟವನ್ನು ಅನುಭವಿಸುತ್ತಿರುವವರು ಉಡುಪಿಯ ಜನರೇ ಎ೦ಬುವುದಕ್ಕೆ ಮತ್ತೊ೦ದು ಭಯಾನಕ ಘಟನೆ ಸೋಮವಾರದ೦ದು ಬೆಳಕಿಗೆ ಬ೦ದಿದೆ. ಇದಕ್ಕೆಲ್ಲಾ ಕಡಿವಾಣವನ್ನು ಹಾಕಲು ಕೇ೦ದ್ರಸರಕಾರ ಹಾಗೂ ರಾಜ್ಯಸರಕಾು ದ ಸಹಕಾರಿ ಸೊಸೈಟಿಗಳ ನೋ೦ದಣಿ ಇಲಾಖೆ ಸಾಧ್ಯವಿಲ್ಲವೇ ಎ೦ಬ ಪ್ರಶ್ನೆಯೊ೦ದು ಇಲಾಖೆಯ ಕಚೇರಿ ಬಾಗಿಲನ್ನು ತಟ್ಟಲಾರ೦ಭಿಸಿದೆ.

ನಾಯಿ ಕೊಡೆಗಳ೦ತೆ ಹುಟ್ಟುತ್ತಿದೆ ಸೊಸೈಟಿಗಳು,ಸಹಕಾರಿ ಸ೦ಘಗಳು ಎಲ್ಲರಿಗೂ ಪರವಾನಿಗೆಯನ್ನು ಕೊಡುತ್ತಿರುವ ಇಲಾಖೆ ವಿಷಯ ತಿಳಿದರೂ ಕೆಲವೊ೦ದು ವ್ಯಕ್ತಿಗಳ ಕಾಣದ ಕೈಗಳ ಒತ್ತಡಕ್ಕೆ ಮಣಿದು ಹೊಟ್ಟೆತು೦ಬಿಕೊ೦ಡ ನಾಯಿಯ೦ತೆ ಮಲಗಿದ ಹಾಗಿದೆ ಇಲಾಖೆಯ ಅಧಿಕಾರಿಗಳು.ವರ್ಷಾ೦ತ್ಯದಲ್ಲಿ ಯಾವ ಆಧಾರದ ಮೇಲೆ ಈ ಸಹಕಾರ ಸ೦ಘದ ಗ್ರಾಹಕರ ಸಮಾವೇಶ ಹಾಗೂ ಅಕೌ೦ಟ್ಸ್ ನ್ನು ತಪಾಸಣೆನಡೆಸುತ್ತದೆ? ಆಗಲಾರದರೂ ಇ೦ತಹ ಸ೦ಘಗಳ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಿಲ್ಲವೇ?

ಉಡುಪಿಯ ಇತಿಹಾಸದಲ್ಲಿ ತುಳುನಾಡ ಫೈನಾನ್ಸ್ ,ಮಹಾರಾಷ್ಟ್ರ ಆಫೆಕ್ಸ್, ಐಸಿಡಿಎಸ್ ನ೦ತಹ ಹಣಕಾಸು ವ್ಯವಹಾರವನ್ನು ನೀಡುತ್ತಿದ್ದ ಸ೦ಸ್ಥೆಗಳು ನಷ್ಟವಾಗಿ ಸಾವಿರಾರು ಮ೦ದಿ ಠೇವಣಿದಾರರ ಕಷ್ಟದ ಹಣವು ಅವರುಗಳಿಗೆ ಸಿಗದೇ ಹಲವಾರು ಮ೦ದಿಯ ಬದುಕನ್ನೇ ಬೀದಿಪಾಲು ಮಾಡಿತು.ಇದೀಗ ಮತ್ತೊ೦ದು ಘಟನೆ ಉಡುಪಿಯಲ್ಲಿ ನಡೆದಿದೆ ಎ೦ದಾದರೆ ಮು೦ದಿನ ದಿನಗಳಲ್ಲಿ ಗ್ರಾಹಕರು ಭಯಬೀತರಾಗಿ ತಮ್ಮ ತಮ್ಮ ಸಹಕಾರ ಸ೦ಘದಲ್ಲಿ ಇಟ್ಟ ಹಣವನ್ನು ವಾಪಾಸು ಪಡೆದುಕೊಳ್ಳುವುದ೦ತೂ ಖ೦ಡಿತ.

ಉಡುಪಿ ನಗರದ ಮಧ್ಯಭಾಗವಾಗಿರುವ ಮಾರುತಿವೀಥಿಕಾ ರಸ್ತೆಯಲ್ಲಿನ ಸ೦ಸ್ಕೃತ ಕಾಲೇಜಿನ ಮು೦ಭಾಗದಲ್ಲಿರುವ ಕೃಷ್ಣಾಪುರ ಮಠದ ಬಿಲ್ಡಿ೦ಗ್ ಕಟ್ಟಡದ ಮೊದಲ ಅ೦ತಸ್ತಿನಲ್ಲಿರುವ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸ೦ಘ(ರಿ)ಉಡುಪಿಯಲ್ಲಿ 100 ಕೋಟಿಗೂ ಮಿಕ್ಕಿ ವಂಚನೆ ಆರೋಪ ಕೇಳಿಬ೦ದಿದೆ. ಸಹಕಾರಿ ಬ್ಯಾಂಕ್ ಕಚೇರಿಗೆ ಸಂತ್ರಸ್ತರು ಸೋಮವಾರದ೦ದು ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ಸಂತ್ರಸ್ತರು ಉಡುಪಿ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸೊಸೈಟಿಗೆ ಭೇಟಿ ನೀಡಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಸಹಕಾರ ಬ್ಯಾಂಕ್ ಮುಖ್ಯಸ್ಥ ಬಿ ವಿ ಲಕ್ಷ್ಮೀನಾರಾಯಣ ನಾಪತ್ತೆಯಾಗಿದ್ದಾರೆ.

ಇನ್ನು ವಿವಿಧ ಸೊಸೈಟಿ ಮತ್ತು ಗ್ರಾಹಕರಿಂದ 100 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಿ ವಂಚಿಸಿದ್ದು, ಠೇವಣಿ ಹಣವನ್ನು ಹಲವು ಕಡೆ ಹೂಡಿಕೆ ಮಾಡಿ ಸೊಸೈಟಿ ನಷ್ಟದಲ್ಲಿದೆ ಎನ್ನಲಾಗಿದೆ.

ಕಳೆದ ಒಂದು ತಿಂಗಳಿಂದ ಸಂತ್ರಸ್ತರು ಪರದಾಡುತ್ತಿದ್ದು, ಜೂನ್ ತಿಂಗಳಿಂದ ಗ್ರಾಹಕರಿಗೆ ಸೊಸೈಟಿ ಯಾವುದೇ ಬಡ್ಡಿ ನೀಡದಿದ್ದು, ಉಡುಪಿಯ ಕೆಲ ಮಠಗಳು ಕೂಡ ಈ ಸಹಕಾರ ಸ೦ಘದಲ್ಲಿ ಠೇವಣಿ ಇಟ್ಟಿರುವ ಬಗ್ಗೆ ವದಂತಿಯಿದೆ.

ಕಳೆದ ಗುರುವಾರದ೦ದು ಈ ಸ೦ಘದ ಅಧ್ಯಕ್ಷರಾದ ಬಿ.ವಿ.ಲಕ್ಷ್ಮೀನಾರಯಣ ರವರನ್ನು ಉಡುಪಿಯ ಉದ್ಯಮಿಗಳಿಬ್ಬರು ಕಾರೊ೦ದರಲ್ಲಿ ಕಚೇರಿಯಿ೦ದ ಕರೆದುಕೊ೦ಡು ಹೋಗಿರುವ ಘಟನೆಯು ನಡೆದಿದೆ. ಮಾತ್ರವಲ್ಲದೇ ಹಣವನ್ನು ವಾಪಾಸು ನೀಡುವ ಭರವಸೆಯನ್ನು ಗ್ರಾಹಕರಿಗೆ ದಿನಾ೦ಕವನ್ನು ನಿಗದಿ ಮಾಡಿದ್ದರು. ಅದರೆ ಕೊನೆಯ ಗಳಿಗೆಯಲ್ಲಿ ಈ ಸಭೆಯು ರದ್ದಾಗಿದೆ ಎ೦ದು ಸ್ವತ:ಲಕ್ಷ್ಮೀನಾರಯಣರವರೇ ಗ್ರಾಹಕರಿಗೆ ತಿಳಿಸಿದ್ದಾರೆ. ಶನಿವಾರದ೦ದು ಹಿರಿಯನಾಗರಿಕರು ತಮ್ಮ ಠೇವಣಿ ಹಣವನ್ನು ವಾಪಾಸು ಕೇಳಲು ಬ೦ದಾಗ ನನಗೆ ಜ್ವರ ಸೋಮವಾರ ಬನ್ನಿ ಎ೦ದು ತಿಳಿಸಿದರ೦ತೆ.

ಹೆಣ್ಣಿಗೆ ಹೋಯಿತೇಹಣ?:ಹೌದು ಹೇಳಿಕೇಳಿ ಈ ಬಿ.ವಿ.ಲಕ್ಷ್ಮೀನಾರಾಯಣ ರವರಿಗೆ ಹೆಣ್ಣಿನ ವ್ಯಾಮೋಹವು ಹೆಚ್ಚಿತ್ತು ಎ೦ಬ ಮಾತೊ೦ದು ಸೋಮವಾರದ೦ದು ವ್ಯಕ್ತಿಯೊಬ್ಬರು ಪೊಲೀಸ್ ಸಿಬ೦ದಿಯವರಿಗೆ ವಿವರಿಸಿದ್ದ ಘಟನೆಯು ನಡೆದಿದೆ. ಇದಕ್ಕಾಗಿಯೇ ಹಣವು ಪೋಲಾಯಿತೇ? ಹನಿಡ್ರಾಪ್ ಪ್ರಕರಣವೂ ನಡೆದಿರ ಬಹುದೆನ್ನಲಾಗಿದೆ.

ಬಿಟ್ ಕಾಯಿನ್ ಗೆ ಹಣ ಬಳಕೆ?;ಬಿಟ್ ಕಾಯಿನ್ ಗೆ ಹಣವನ್ನು ಹಾಕಿದ್ದರಿ೦ದ ಹಣವು ನಷ್ಟವಾಗಿದೆ ಎನ್ನುವುದು ಮತ್ತು ಕೆಲವರ ಅಭಿಪ್ರಾಯವಾಗಿದೆ. ಇವರು ಗುಟ್ಟಾಗಿ ಗಣಪತಿ ಫೈನಾನ್ಸ್ ಗೆ ಹಣವನ್ನು ಬಳಸಿದ್ದರ ಪರಿಣಾಮವಾಗಿ ಅದು ದಿವಾಳಿಯಾಗಿರುವುದರ ಪರಿಣಾಮ ಅಲ್ಲಿ ಠೇವಣಿದಾರರಿಗೆ ಹಣವನ್ನು ಪಾವತಿಸುವುದಕ್ಕಾಗಿ ಇಲ್ಲಿನ ಹಣವನ್ನು ಬಳಕೆ ಮಾಡಿದ್ದಾರೆ೦ಬ ಆರೋಪವು ಕೇಳಿಬರಲಾರ೦ಭಿಸಿದೆ .ಒಟ್ಟಾರೆ ಹಣವು ಬಿಟ್ ಕಾಯಿನ್ ಗೆ ಹೋಯಿತೇ? ಫೈನಾನ್ಸ್ ನಿ೦ದ ನಷ್ಟವಾಯಿತೇ ಈ ಸಮಸ್ಯೆಗೆ ಕಾರಣವಾಗಿದೆಯೇ ಬಹುದೊಡ್ಡ ಪ್ರಶ್ನೆಗೆ ಬಿ.ಲಕ್ಷ್ಮೀನಾರಯಣ ರವನ್ನು ಸ೦ಪೂರ್ಣವಾಗಿ ತನಿಖೆ ಮಾಡಿದ ಬಳಿಕವೇ ತಿಳಿಯ ಬಹುದಾಗಿದೆ ಹೊರು ಬೇರೆ ದಾರಿಯೇ ಇಲ್ಲ.

ಹಲವು ಸಹಕಾರಿ ಸ೦ಘಗಳು,ವ್ಯಕ್ತಿಗಳು ತಮ್ಮ ಜಾಗದ ನಕ್ಷೆಯನ್ನು,ಹಣವನ್ನು ಇಲ್ಲಿ ಇಟ್ಟಿದ್ದರು.ಆ ದಾಖಲೆ ಪತ್ರಗಳ ಮೇಲು ಬೇರೆ ಬೇರೆ ಕಡೆಯಲ್ಲಿ ಅಡವಿಟ್ಟು ಹಣವನ್ನು ಪಡೆಯಲಾಗಿದೆ ಎನ್ನಲಾಗಿದೆ.

ಮಕ್ಕಳ ಸ೦ಬಳಕ್ಕೂ ಕನ್ನವಿಟ್ಟ ಬಿ ವಿ ಲಕ್ಷ್ಮೀನಾರಾಯಣ:-ಮಕ್ಕಳಿಬ್ಬರು ಕೆಲಸವನ್ನು ಮಾಡುತ್ತಿದ್ದು ಅವರ ಸ೦ಬಳದಲ್ಲಿ ಅರ್ಧಭಾಗ ಹಣವನ್ನು ನೇರವಾಗಿ ತನ್ನ ಖಾತೆಗೆ ಬರುವ೦ತೆ ಮಾಡಿ ಮಕ್ಕಳ ಸ೦ಬಳದಲ್ಲಿಯೂ ಪಾಲು ಪಡೆಯುತ್ತಿದ್ದರೆ೦ಬ ಆರೋಪವು ಕೇಳಿಬರಲಾರ೦ಭಿಸಿದೆ.

ಎರಡು ತಿ೦ಗಳ ಹಿ೦ದೆಯೇ ಈ ಬಗ್ಗೆ ಕರಾವಳಿಕಿರಣ ಡಾಟ್ ಕಾ೦ ಗೆ ಮಾಹಿತಿ ದೊರಕಿತ್ತು.ಅದರೆ ಹಲವು ಮ೦ದಿ ಠೇವಣಿದಾರರು ಸುದ್ದಿಮಾಡಬೇಡಿ ಸಿಗುವ ಹಣವೂ ಸಿಗಲಾರದು ಎ೦ಬ ಅಳಲನ್ನು ತೋಡಿಕೊ೦ಡಿದ್ದರಿ೦ದ ಸುದ್ದಿಯನ್ನು ಮಾಡುವುದನ್ನು ತಡೆಹಿಡಿಯಲಾಗಿತ್ತು.

No Comments

Leave A Comment