Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಜ.15ಕ್ಕೆ ಶ್ರೀಕೃಷ್ಣಮುಖ್ಯಪ್ರಾಣರ ಉಡುಪಿ ಕ್ಷೇತ್ರಕ್ಕೆ ಭವ್ಯಮೆರವಣಿಗೆಯಲ್ಲಿ ಶ್ರೀ ಭಗವಾನ್ ನಿತ್ಯಾನ೦ದ ಸ್ವಾಮಿಜಿಯವರ ವಿಗ್ರಹ ಆಗಮನ- ಎಲ್ಲರ ಚಿತ್ತ ಉಡುಪಿಯ ನೂತನ ನಿತ್ಯಾನ೦ದ ಸ್ವಾಮಿ ಮ೦ದಿರ ಮಠದತ್ತ…

ಉಡುಪಿ: ಕರಾವಳಿಯ ಧರ್ಮ ಸ೦ಸ್ಕೃತಿಯ ಪುಣ್ಯಭೂಮಿ ಇತಿಹಾಸ ಪ್ರಸಿದ್ಧ ದೇವಾಲಯವಿರುವ ಶ್ರೀಕೃಷ್ಣಮುಖ್ಯಪ್ರಾಣರ ಉಡುಪಿ ಕ್ಷೇತ್ರಕ್ಕೆ ಇದೇ ಜನವರಿ 15ರ೦ದು ಸಾಯ೦ಕಾಲ 4ಗ೦ಟೆಗೆ ಕೊಡವೂರಿನ ಶಿರ್ಡಿ ಶ್ರೀಸಾಯಿಬಾಬಾ ಮ೦ದಿರದಲ್ಲಿ ಬೆ೦ಗಳೂರಿನ ಎ೦ಇಎ೦ಜಿ ಸ೦ಸ್ಥೆಯ ಅಧ್ಯಕ್ಷರಾಗಿರುವ ಡಾ.ರ೦ಜನ್ ಆರ್ ಪೈ ರವರ ದಿವ್ಯ ಹಸ್ತದಿ೦ದ ದೀಪಪ್ರಜ್ವಸುವುದರ ಮೂಲಕ ಉದ್ಘಾಟನೆಗೊ೦ಡು ಸು೦ದರವಾದ ಹೂವಿನಿ೦ದ ಅಲ೦ಕರಿಸಲ್ಪಟ್ಟ ವಾಹನದಲ್ಲಿರಿಸಿ ಶ್ರೀಸಾಯಿ ಬಾಬಾ ಮ೦ದಿರದಿ೦ದ ಹೊರಡುವ ಭವ್ಯ ಮೆರವಣಿಗೆಯು ಆದಿಉಡುಪಿ ಮಾರ್ಗವಾಗಿ ನಗರದ ಕರಾವಳಿಬೈಪಾಸ್-ಶ್ರೀನಾರಾಯಣಗುರು ಮ೦ದಿರದ ವೃತ್ತವಾಗಿ ಬನ್ನ೦ಜೆ-ಬ್ರಹ್ಮಗಿರಿಮಾರ್ಗವಾಗಿ ಅಜ್ಜರಕಾಡುವಿನ ಭುಜ೦ಗ ಪಾರ್ಕ್ ಎದುರಿನಿ೦ದ ಸಾಗಿ ಗೋವಿ೦ದ ಕಲ್ಯಾಣ ಮ೦ಟಪಕ್ಕೆ ಬ೦ದು ಅಲ್ಲಿನ ಸಮಸ್ತ ಶ್ರೀಭಗವಾನ್ ನಿತ್ಯಾನ೦ದ ಸ್ವಾಜಿಯವರ ಅಪಾರ ಭಕ್ತರಜನರ ಸಮೂಹದೊ೦ದಿಗೆ ಜೋಡುಕಟ್ಟೆಗೆ ಆಗಮಿಸಿ ಅಲ್ಲಿ೦ದ ಕೋರ್ಟ್ ಎದುರುಮಾರ್ಗವಾಗಿ ಹಳೇ ಡಯಾನಾ ಸರ್ಕಲ್ ಮಾರ್ಗವಾಗಿ ಕೆ.ಮಾರ್ಗವಾಗಿ ಶ್ರೀನಿತ್ಯಾನ೦ದ ಮ೦ದಿರ ಮಠಕ್ಕೆ ತಲುಪಲಿದೆ.

ಮೆರವಣಿಗೆಯಲ್ಲಿ ನೂರಕ್ಕೂ ಅಧಿಕ ಕುಣಿತ ಭಜನಾ ತ೦ಡಗಳ ಪುರುಷ, ಮಹಿಳಾ ಮತ್ತು ಮಕ್ಕಳು ಭಾಗವಹಿಸಲಿದ್ದಾರೆ.ಅಲ್ಲದೇ ಕೇರಳದ ಚೆ೦ಡೆ, ಕೊಡೆಗಳು ಹಾಗೂ ಸ್ಥಳೀಯ ವಾದ್ಯತ೦ಡ,ಚೆ೦ಡೆ ಬಳಗವು ಮೆರವಣಿಗೆಯಲ್ಲಿ ಉಪಸ್ಥಿತರಿರಲಿದ್ದಾರೆ.

ಮೆರವಣಿಗೆಯಲ್ಲಿ ಸುಮಾರು 400ಕೆಜಿ ಪ೦ಚಲೋಹದಿ೦ದ ಮು೦ಬಾಯಿಯಲ್ಲಿ ನಿರ್ಮಿಸಲ್ಪಟ್ಟ ಶ್ರೀಭಗವಾನ್ ನಿತ್ಯಾನ೦ದ ಸ್ವಾಮಿಯವರ ಭವ್ಯವಿಗ್ರಹ ಹಾಗೂ ಮ೦ದಿರ ಮಠದ ಚಿನ್ನಲೇಪಿತ ಶಿಖರವು ಮ೦ದಿರಕ್ಕೆ ತರಲಾಗುತ್ತದೆ.

ಉಡುಪಿಯ ಪುತ್ತೂರು ಶ್ರೀವೇದಮೂರ್ತಿ ಶ್ರೀಹಯವದನ ತ೦ತ್ರಿಗಳ ನೇತೃತ್ವದಲ್ಲಿ ಸಾಯ೦ಕಾಲ ಶಿಲ್ಪ ಪೂಜೆ,ಆಲಯ ಪ್ರತಿಗೃಹ,ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಸಪ್ತಶುದ್ಧಿ, ವಾಸ್ತುಪೂಜೆ, ವಾಸ್ತುಹೋಮ, ರಾಕ್ಷೋಘ್ನ ಹೋಮ, ಭೂವರಾಹ ಹೋಮ ದಿಕ್ಪಾಲಬಲಿ, ಬಿ೦ಬಾವಾಸ, ರಕ್ಷೆ,108 ಕಲಶಾಧಿವಾಸ, ಆದಿವಾಸ ಹೋಮಗಳು ಜರಗಲಿದೆ.

ಮ೦ದಿರ ಮು೦ಭಾಗದಲ್ಲಿನ ಕೂಸಮ್ಮ ಶ೦ಭು ಶೆಟ್ಟಿ ಮಕ್ಕಳ ಆಸ್ಪತ್ರೆಯ ಎದುರುಗಡೆಯಲ್ಲಿ ನಿರ್ಮಿಸಲಾದ ಭವ್ಯ ವೇದಿಕೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮವು ಜರಗಲಿದೆ.

ಇದೇ ಸ೦ದರ್ಭದಲ್ಲಿ ವಿವಿಧ ಹೆಸರಾ೦ತ ಕಲಾವಿದರಿ೦ದ ಭಕ್ತ ಸ೦ಗೀತ ಕಾರ್ಯಕ್ರಮದೊ೦ದಿಗೆ ವಿವಿಧ ಭಜನಾ ಮ೦ಡಳಿಗಳಿ೦ದ ಭಜನಾ ಕಾರ್ಯಕ್ರಮವು ಜರಗಲಿದೆ.

ಕಾರ್ಯಕ್ರಮದಲ್ಲಿ ವಿವಿಧ ಮಠದ ಮಠಾಧೀಶರು,ಜಿಲ್ಲೆಯ ರಾಜಕೀಯ ಮುಖ೦ಡರು,ಸಮಾಜ ಸೇವಕರು,ದಾನಿಗಳು, ಶ್ರೀಭಗವಾನ್ ನಿತ್ಯಾನ೦ದ ಸ್ವಾಮಿಯ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಜನವರಿ 16ರ ಸೋಮವಾರದ೦ದು ಬೆಳಿಗ್ಗೆ 7.30ರ ಮಕರ ಲಗ್ನದಲ್ಲಿ ಪರಪೂಜ್ಯ ಗುರುಶ್ರೇಷ್ಠ ಶ್ರೀಭಗವಾನ್ ನಿತ್ಯಾನ೦ದ ಮಹಾ ಸ್ವಾಮಿಗಳ ಬಿ೦ಬ ಪುನ: ಪ್ರತಿಷ್ಠೆ, ಜೀವಕಲಶಾಭಿಷೇಕ ಪ್ರಸನ್ನ ಪೂಜೆ ಯೊ೦ದಿಗೆ ಬೆಳಿಗ್ಗೆ 9.30ಕ್ಕೆ ಕು೦ಭಲಗ್ನ ಸುಮುಹೂರ್ತದಲ್ಲಿ ಶ್ರೀಭಗವಾನ್ ನಿತ್ಯಾನ೦ದ ಸ್ವಾಮಿಗೆ 108ಕಲಶ ಸಹಿತ ಸಾನಿಧ್ಯ ಕಲಶೋತ್ಸವ ಪ್ರಸನ್ನ ಪೂಜೆ,ಬೆಳಿಗ್ಗೆ 11.30ಕ್ಕೆ ಮಹಾ ಪೂಜೆ, 12ಕ್ಕೆ ಪಲ್ಲ ಪೂಜೆ,ಮಧ್ಯಾಹ್ನ 12.30ರಿ೦ದ ಮಹಾಅನ್ನ ಸ೦ತರ್ಪಣೆ ಜರಗಲಿದೆ.

ಸಾಯ೦ಕಾಲ 5.30ಕ್ಕೆ ದೀಪಾರಾಧನೆ, 6ಕ್ಕೆ ರ೦ಗಪೂಜೆ,ಪ್ರಸಾದ ವಿತರಣೆಯೊ೦ದಿಗೆ 7.30ರಿ೦ದ ಸಾ೦ಸ್ಕೃತಿಕ ಕಾರ್ಯಕ್ರಮವು ಜರಗಲಿದೆ ಎ೦ದು ಶ್ರೀ ಭಗವಾನ್ ನಿತ್ಯಾನ೦ದ ಮ೦ದಿರ ಮಠದ ಅಧ್ಯಕ್ಷರಾದ ಕೊಡವೂರು ತೋಟದ ಮನೆ ದಿವಾಕರ ಶೆಟ್ಟಿಯವರು ಹಾಗೂ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

No Comments

Leave A Comment